ಬೆಂಗಳೂರು : ಪ್ರಯಾಣಿಕರಿಗೆ  ಬಿಎಂಟಿಸಿ ಶಾಕ್ ನೀಡಿದೆ. ಬೆಲೆ ಏರಿಕೆ ಮಧ್ಯೆ ಬಿಎಂಟಿಸಿ ಕೂಡಾ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ವೋಲ್ವೋ ಬಸ್ ಪಾಸ್ ದರ ಕೂಡಾ ಹೆಚ್ಚಿಸಲಾಗಿದೆ.   ಹೊಸ ವರ್ಷದ ಮೊದಲ ವಾರದಿಂದಲೇ ಈ ಆದೇಶ ಜಾರಿಗೆ ಬರಲಿದೆ. 


COMMERCIAL BREAK
SCROLL TO CONTINUE READING

ಹೊಸವರ್ಷ ಆರಭವಾಗುತ್ತಿದ್ದಂತೆಯೇ ಬಿಎಂಟಿಸಿ ಪ್ರಯಾಣ ದರ ಕೂಡಾ ಏರಿಕೆಯಾಗಲಿದೆ.  ವೋಲ್ವೋ ಬಸ್ ಪಾಸ್ ದರ ಹೆಚ್ಚಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ  ಕೂಡಾ ಹೆಚ್ಚಿಸಲಾಗಿದೆ. ಈ ಆದೇಶ ಜನವರಿ ಮೊದಲ ವಾರದಿಂದ ಜಾರಿಗೆ ಬರಲಿದೆ. 


ಇದನ್ನೂ ಓದಿ :  ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಗ್ರೀನ್‌ ಸಿಗ್ನಲ್‌.. ಸದನದಲ್ಲಿ ಸಚಿವ ಕಾರಜೋಳ ಹರ್ಷ


ಇಂಧನ ಬೆಲೆಯ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಬಿಎಂಟಿಸಿ ನಿಗಮದ ಆರ್ಥಿಕ ನಷ್ಟ ಸರಿದೂಗಿಸುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ.  ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪಾಸ್ ಗಳ ದರ ಹೆಚ್ಚಿಸಿರುವುದಾಗಿ ಬಿಎಂಟಿಸಿ ತಿಳಿಸಿದೆ. 


ವಜ್ರ ( ವೋಲ್ವೋ) ಮಾಸಿಕ ದರ ಎಷ್ಟು? :


ಪ್ರಸ್ತುತ ವಜ್ರ ಮಾಸಿಕ ದರ 1428+ ಜಿಎಸ್ಟಿ 72= ಒಟ್ಟು 1500 ರೂಪಾಯಿ 
ಪರಿಷ್ಕೃತ  ದರ 1714.29 ಪೈಸೆ + ಜಿಎಸ್ಟಿ 85.71= ಒಟ್ಟು 1800 ರೂಪಾಯಿ ಆಗಿರಲಿದೆ. 


ವಜ್ರ ವೋಲ್ವೋ ದಿನದ ಪಾಸ್ ದರ  :
ಪ್ರಸ್ತುತ ವಜ್ರ ದೈನಿಕ ಪಾಸಿನ ದರ 95 + ಜಿಎಸ್ಟಿ 5 = 100 ರೂಪಾಯಿ 
ಪರಿಷ್ಕೃತ ದರ 114.29+ 5.21= 120 ರೂಪಾಯಿ


[[{"fid":"274694","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


 


ಇದನ್ನೂ ಓದಿ :  ನ್ಯೂ ಇಯರ್ ಗೆ ರಾಜಧಾನಿ ಸಿದ್ಧ: ಮುಂಜಾಗ್ರತಾ ಕ್ರಮವಾಗಿ 8500ಕ್ಕೂ ಹೆಚ್ಚು ಪೊಲೀಸರ ಹದ್ದಿನ ಕಣ್ಣು


ಮಾಸಿಕ ಪಾಸ್ ದರಲ್ಲಿಯೂ ಏರಿಕೆ ಮಾಡಲಾಗಿದೆ. ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್ ಬಳಸಿ ಓಡಾಡುವ ಹಾಗಿಲ್ಲ. ಭಾನುವಾರ ಸಾಮಾನ್ಯ ಪಾಸ್  ಹಾಗೂ ಹಿರಿಯ ನಾಗರಿಕರ ಪಾಸ್ ಬಳಕೆಗೆ ಬ್ರೇಕ್ ಹಾಕಲಾಗಿದೆ. ಇಲ್ಲಿಯವರೆಗೆ ಪಾಸ್ ಬಳಸಿ  ಭಾನುವಾರ ಸಂಚಾರ ನಡೆಸಬಹುದಾಗಿತ್ತು. ಆದರೆ ಮುಂದಿನ ವಾರದಿಂದ ಅದು ಸಾಧ್ಯವಾಗುವುದಿಲ್ಲ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.