ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್(ಬಿಎಮ್‌ಟಿಸಿ), ಬೆಂಗಳೂರು ನಗರದಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ತನ್ನ ಸಂಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆಯಾದ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ.,ಯೊಂದಿಗೆ ನಿಶ್ಚಿತ ಒಪ್ಪಂದಕ್ಕೆ ಸಹಿ ಹಾಕಿದೆ  ಎಂದು ಇಂದು ಘೋಷಿಸಿತು.


COMMERCIAL BREAK
SCROLL TO CONTINUE READING

ಒಪ್ಪಂದದ ಭಾಗವಾಗಿ, ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ., 12 ವರ್ಷಗಳವರೆಗೆ , 921 ಯೂನಿಟ್‌ಗಳ 12-ಮೀಟರ್ ಲೋ-ಫ್ಲೋರ್ ಎಲೆಕ್ಟ್ರಿಕ್  ಬಸ್‌ಗಳನ್ನು ಸರಬರಾಜು ಮಾಡಿ, ಕಾರ್ಯಾಚರಣೆ ನಡೆಸಿ ನಿರ್ವಹಿಸುತ್ತದೆ. ಟಾಟಾ ಸ್ಟಾರ್ ಬಸ್ ಎಲೆಕ್ಟ್ರಿಕ್ ದೀರ್ಘಕಾಲ ಇರುವಂತಹ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಅತ್ಯುತ್ಕೃಷ್ಟ ವಿನ್ಯಾಸ ಮತ್ತು ವರ್ಗದಲ್ಲೇ ಅತ್ಯುತ್ತಮವಾದ ಅಂಶಗಳೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಾಹನವಾಗಿದೆ.


ಇದನ್ನೂ ಓದಿ : 5 ಗಂಟೆಗಳಿಗಿಂತ ಕಡಿಮೆ ನಿದ್ರಿಸುವುದರಿಂದ ಸಾವು ಬರಬಹುದು..!


ಈ ಘೋಷಣೆಯ ಬಗ್ಗೆ ಮಾತನಾಡುತ್ತಾ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕಿ, ಶ್ರೀಮತಿ ಜಿ. ಸತ್ಯವತಿ, ಐಎಎಸ್, “ಬೆಂಗಳೂರಿನಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ.,ಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ನಮಗೆ ಬಹಳ ಹರ್ಷವಾಗುತ್ತಿದೆ. ಶೂನ್ಯ-ಉಗುಳುವಿಕೆ, ಪರಿಸರ ಸ್ನೇಹಿಯಾದ ಈ ಬಸ್‌ಗಳು, ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ನೆರವಾಗುವುದರ ಜೊತೆಗೆ ಎಲ್ಲಾ ಭಾಗೀದಾರರಿಗೂ ಪ್ರಯೋಜನವನ್ನುಂಟು ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಟಾಟಾ ಮೋಟರ್ಸ್ ಅವರ ಅಪಾರ ಅನುಭವ ಖಂಡಿತವಾಗಿಯೂ ನಗರದಲ್ಲಿ ತಡೆರಹಿತವಾದ, ಸುರಕ್ಷಿತವಾದ ಮತ್ತು ಆರಾಮದಾಯಕವಾದ ಪಯಣವನ್ನು ಒದಗಿಸುವಲ್ಲಿ ನೆರವಾಗುತ್ತದೆ.”ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾತನಾಡುತ್ತಾ, ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿಮಿಟೆಡ್‌ನ ಸಿಇಒ ಮತ್ತು ಎಮ್‌ಡಿ ಶ್ರೀ ಅಸೀಮ್ ಕುಮಾರ್ ಮುಖೋಪಾಧ್ಯಾಯ, “ಬೃಹತ್ ಸಿಇಎಸ್‌ಎಲ್ ಟೆಂಡರ್ ಅಡಿ ಪ್ರಪ್ರಥಮ ನಿಶ್ಚಿತ ಒಪ್ಪಂದಕ್ಕೆ ಸಹಿ ಹಾಕಿರುವುದು ನಮಗೆ ಸ್ಮರಣೀಯ ಸಂದರ್ಭವಾಗಿದೆ ಮತ್ತು ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಣ ಮತ್ತು ವಿದ್ಯುತ್ತೀಕರಣಗೊಳಿಸ ಬೇಕೆಂದಿರುವ ಬಿಎಮ್‌ಟಿಸಿಯೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಟಾಟಾ ಮೋಟರ್ಸ್‌ನಲ್ಲಿ ನಾವು ಸ್ಮಾರ್ಟ್ ಆದ, ಹಸಿರು ಹಾಗೂ ಶಕ್ತಿ ಸಾಮರ್ಥ್ಯವಿರುವ ಸಮೂಹ ಸಂಚಾರ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತೇವೆ.ಈ ಎಲೆಕ್ಟ್ರಿಕ್ ಬಸ್‌ಗಳು, ಬೆಂಗಳೂರಿನ ಪ್ರಯಾಣಿಕರಿಗೆ, ದೀರ್ಘಕಾಲ ಇರುವಂತಹ, ಸುರಕ್ಷಿತವಾದ ಮತ್ತು ಆರಾಮದಾಯಕವಾದ ಸಾರ್ವಜನಿಕ ಸಾರಿಗೆ ಒದಗಿಸುತ್ತದೆ ಎಂಬ ವಿಶ್ವಾಸ ನಮಗಿದೆ.”ಎಂದು ಹೇಳಿದರು.ಕುಕ್ಕರ್ ಬಾಂಬ್ ಸ್ಫೋಟದ ಅನುಮಾನ,‌ ಅಲ್ಪಸಂಖ್ಯಾತರ ಓಟಿಗಾಗಿ ಡಿಕೆಶಿಯಿಂದ ಓಲೈಕೆ ರಾಜಕಾರಣ'


ಟಾಟಾ ಮೋಟರ್ಸ್‌ನ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು, ಬ್ಯಾಟರಿ ಎಲೆಕ್ಟ್ರಿಕ್, ಹೈಬ್ರಿಡ್, ಸಿಎನ್‌ಜಿ, ಎಲ್‌ಎನ್‌ಜಿ, ಮತ್ತು ಹೈಡ್ರೋಜನ್ ಫ್ಯುಯೆಲ್ ಸೆಲ್ ಟೆಕ್ನಾಲಜಿ ಒಳಗೊಂಡಂತೆ ಪರ್ಯಾಯ ಇಂಧನ ತಂತ್ರಜ್ಞಾನದ ಶಕ್ತಿಯಿರುವ ವಿನೂತನ ಸಂಚಾರ ಪರಿಹಾರಗಳನ್ನು ಇಂಜಿನಿಯರ್ ಮಾಡಲು ನಿರಂತರವಾಗಿ ಕೆಲಸಮಾಡುತ್ತಿವೆ.ಇಂದಿನವರೆಗೂ ಟಾಟಾ ಮೋಟರ್ಸ್, ಭಾರತದ ಅನೇಕ ನಗರಗಳಾದ್ಯಂತ 730ಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳನ್ನು ಸರಬರಾಜು ಮಾಡಿದ್ದು, ಇವೆಲ್ಲವೂ, 95%ಗಿಂತ ಹೆಚ್ಚಿನ ಅಪ್‌ಟೈಮ್‌ನೊಂದಿಗೆ, ಸಂಘಟಿತವಾಗಿ 55 ದಶಲಕ್ಷ ಕಿಲೋಮೀಟ್‌ಗಳನ್ನು ಪೂರೈಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.