ಹುಬ್ಬಳ್ಳಿ: ಬಾಲಿವುಡ್ ನಟಿ ಕಾಜೋಲ್ ಹಾಗೂ ಅವರ ಕುಟುಂಬದ ಸದಸ್ಯರು ಇಂದು ಇಲ್ಲಿನ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು.


COMMERCIAL BREAK
SCROLL TO CONTINUE READING

ತಾಯಿ ತನುಜ ಮುಖರ್ಜಿ, ತಂಗಿ ತನಿಷಾ, ಮಗ ಯೋಗಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನಟಿ ಕಾಜೋಲ್ ಸಿದ್ದಾರೂಢ ಶ್ರೀಗಳ ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿಸಿದರು. ಅಲ್ಲದೆ ಸಿದ್ಧಾರೂಢ ಸ್ವಾಮಿಗಳ ಗದ್ದುಗೆ ಪೂಜೆ ಬಳಿಕ ಧ್ಯಾನ ಮಾಡಿದರು‌.


ಬಾಲ್ಯದಿಂದಲೂ ಕಾಜೋಲ್ ಕುಟುಂಬ ಸಿದ್ಧಾರೂಢ ಸ್ವಾಮೀಜಿಯ ಭಕ್ತರಾಗಿದ್ದಾರೆ. ಇತ್ತೀಚೆಗಷ್ಟೆ ಕಾಜೋಲ್ ತಮ್ಮ ಬಾಲ್ಯದಲ್ಲಿ ಸಿದ್ದಾರೂಢ ಶ್ರೀಗಳ ಗದ್ದುಗೆ ದರ್ಶನ ಪಡೆದ ಫೋಟೋವೊಂದು ವೈರಲ್ ಆಗಿತ್ತು. ಗದ್ದುಗೆಯ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಕಾಜೋಲ್ ಕುಟುಂಬ ಸದಸ್ಯರು ಆಗಮಿಸಿದ್ದರು. 


ಮಠಕ್ಕೆ ಬಾಲಿವುಡ್ ತಾರೆ ಕಾಜೋಲ್ ಬಂದಿರುವ ವಿಚಾರ ಹಬ್ಬುತ್ತಿದ್ದಂತೆ ಕಾಜೋಲ್ ಅಭಿಮಾನಿಗಳು ಮಠದ ಆವರಣದಲ್ಲಿ ಜಮಾಯಿಸಿದರು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.