ಬೆಂಗಳೂರು : ಪಿ.ಜಿಯಲ್ಲಿ ವಾಸವಿದ್ದ ಯುವಕ ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವಿಪರ್ಯಾಸವೆಂದರೆ ಮೂರು ದಿನಗಳ ಬಳಿಕ ಶವ ಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ದಾಸರಹಳ್ಳಿಯಲ್ಲಿ ಘಟನೆ ನಡೆದಿದ್ದು,  ಅನಿಲ್ ಕುಮಾರ್ ಮೃತ ಯುವಕ.


COMMERCIAL BREAK
SCROLL TO CONTINUE READING

ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯ ಪಿಜಿಯಲ್ಲಿ ವಾಸವಿದ್ದ ಅನಿಲ್ ಕುಮಾರ್, ಸೆಪ್ಟೆಂಬರ್ 16ರಿಂದಲೂ ನಾಪತ್ತೆಯಾಗಿದ್ದ. ಸೆಪ್ಟೆಂಬರ್ 20ರಂದು ಬಾತ್ ರೂಮಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅನಿಲ್ ಕುಮಾರ್ ಶವ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕೊನೆಯದಾಗಿ ಅನಿಲ್ ರಾತ್ರಿ ಬಾತ್ ರೂಂಗೆ ತೆರಳಿದ್ದು ಪತ್ತೆಯಾಗಿದೆ.


ಕಡೆಯದಾಗಿ ಮನೆಗೆ ಕರೆ ಮಾಡಿದಾಗ ಫುಡ್ ಪಾಯಿಸನ್ ಬಗ್ಗೆ ಅನಿಲ್ ಹೇಳಿಕೊಂಡಿದ್ದು ಯಾವುದೇ ಸುರಕ್ಷತಾ ಕ್ರಮಗಳಿಲ್ಲದಿರುವುದೇ ಮಗನ ಸಾವಿಗೆ ಕಾರಣವೆಂದು ಆತನ ಪೋಷಕರು ಆರೋಪಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಹೆಸರು ಮಾಡಲು ಬೆಂಗಳೂರಿಗೆ ಬಂದಿದ್ದ ಯುವಕ ಸದ್ಯ ಶವವಾಗಿದ್ದಾನೆ. ಘಟನೆ ಸಂಬಂಧ ಗೊವಿಂದರಾಜನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.