Siddaramaiah Govt: ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನಾರಚನೆ ವಿಷಯ ಭಾರೀ ಚರ್ಚೆಯಾಗುತ್ತಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್ ಸಿಡಿಸಿದರು. 


COMMERCIAL BREAK
SCROLL TO CONTINUE READING

ನಗರದಲ್ಲಿಂದು ಸುದ್ದಿಗಾರರ ಅವರು ಮಾತನಾಡಿದ ಶಾಸಕ ಬಿಆರ್ ಪಾಟೀಲ್, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯನವರೇ ಐದು ವರ್ಷ ಇರಬೇಕು ಅಂತ ಬಯಸುತ್ತೇವೆ. ಆದರೆ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಗೊತ್ತಿಲ್ಲ. ಈ ವಿಚಾರವಾಗಿ ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೇ ನಾವೇನು ಮಾಡದಕ್ಕೆ ಆಗುತ್ತೆ ಎಂದು ಹೇಳಿಕೆ ನೀಡಿದ್ದಾರೆ. 


ಸಿದ್ದರಾಮಯ್ಯಗೆ ದೊಡ್ಡ ಜವಾಬ್ದಾರಿ ಸುಳಿವು! 
ಈ ಸಂದರ್ಭದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತ ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ ಎಂದು ಬಿ‌ಆರ್ ಪಾಟೀಲ್ ಹೇಳಿದ್ದಾರೆ. 


ಇದನ್ನೂ ಓದಿ- ಸಚಿವ ಸಂಪುಟ ಪುನಾರಚನೆ ವಿಷಯ ನನಗೆ ಗೊತ್ತಿಲ್ಲ- ಜಮೀರ್ ಅಹ್ಮದ್


ಗ್ಯಾರಂಟಿ ಯೋಜನೆಗಳು: 
ಇದೇ ವೇಳೆ ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳನ್ನು  ಮುಂದುವರೆಸಲು ಹೊಸ ಆರ್ಥಿಕ ನೀತಿ ರೂಪುಗೊಳ್ಳಲಿದೆಯೇ?  ಮುಂದಿನ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ಹಣಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿದೆಯಾ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದ ಬಿ‌ಆರ್ ಪಾಟೀಲ್, ದೊಡ್ಡ ಕನಸನ್ನು ಕಂಡು ಬಡವರ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ಭೌತಿಕ ಅಭಿವೃದ್ಧಿಗೆ ಹೊಡೆತ ಬಿಳುತ್ತೆ. ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿಯಿಂದ ಆರ್ಥಿಕ ಹೊರ ಆಗದಂತೆ ಹೊಸ ಆರ್ಥಿಕ ನೀತಿ ಸಿಎಂ ನೀಡ್ತಾರೆ. ನಮಗೆ ಮೊದಲೇ ಗೊತ್ತಿತ್ತು ಇಷ್ಟು ಖರ್ಚು ಆಗುತ್ತೆ ಅಂತ
ಆರ್ಥಿಕ ಸಮಸ್ಯೆ ನಮಗೆ ಮಾತ್ರವಲ್ಲಾ ಎಲ್ಲಾ ರಾಜ್ಯಗಳಿಗೆ ಇದೇ ಆಗುತ್ತೆ ಸಮಸ್ಯೆ ಆಗುತ್ತಿದೆ. ಸ್ವಲ್ಪ ಹೊರೆ ಆಗುತ್ತೆ, ದೊಡ್ಡ ಸಮಸ್ಯೆಗೆ ಕೈ ಹಾಕಿದಾಗ ಸ್ವಲ್ಪ ಸಮಸ್ಯೆ ಉದ್ಭವ ಆಗುತ್ತೆ. ಕಲ್ಯಾಣ ರಾಜ್ಯದ ಪರಿಕಲ್ಪನೆ ಕಾಣುತ್ತಿದ್ದೇವೆ. ಎಲ್ಲರಿಗೂ ಸಮಪಾಲು ಸಮಬಾಳು. ಇನ್ನೂ ಐದು ಗ್ಯಾರಂಟಿಗಳು ಬಹಳಷ್ಟು ಯಶಸ್ವಿಯಾಗಿ ಅನುಷ್ಠಾನ ಆಗುತ್ತಿವೆ. ಇದರಿಂದ ಬಹಳಷ್ಟು ರಾಜಕೀಯ ಲಾಭ ಆಗುತ್ತಿದೆ. ಈಗ ಮೋಡಿಯವರು ಕೂಡ ನಮ್ಮನ್ನೆ ಕಾಪಿ ಮಾಡಿದ್ದಾರೆ.  ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲೊದಿಲ್ಲಾ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. 


ಬಿ‌ಪಿ‌ಎಲ್ ಕಾರ್ಡ್- ಬಿ‌ಜೆ‌ಪಿ ಹುಟ್ಟಿಸಿದ ಭಯ!
ಇನ್ನೂ ಈ ವೇಳೆ  ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದಾಗುವ ಕುರಿತು ಪ್ರತಿಕ್ರಿಯಿಸಿದ ಪಾಟೀಲ್, ಬಿಪಿಎಲ್ ಕಾರ್ಡ್ ವಿವಾದ ಬಿಜೆಪಿ ಹುಟ್ಟಿಸಿದ ಭಯ. ಆದರೆ ಬಿ‌ಪಿ‌ಎಲ್ ಕಾರ್ಡ್ ವಿಚಾರವನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು. 


ನಮಗೆ ಕೇಂದ್ರ ಸರ್ಕಾರದಿಂದ ಅನ್ಯಾಯ! 
ನಮಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ನಮ್ಮ ಪಾಲು ನಮಗೆ ನೀಡುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಧೈರ್ಯ ಇದ್ದರೆ ಮೋದಿಗೆ ಹೇಳಲಿ, ನಮಗೇನು ಹೇಳುತ್ತಾರೆ. ಮೂರು ಚುನಾವಣೆಯಲ್ಲಿ ಜನ ಉತ್ತರ ನೀಡಿದ್ದಾರೆ ಎಂದರು. 


ಇದನ್ನೂ ಓದಿ- ಸಂಪುಟ ಪುನಾರಚನೆ: ಸಚಿವ ಮುನಿಯಪ್ಪ ಮಗಳಿಗೆ ಸಿಗುತ್ತಾ ಸಚಿವ ಸ್ಥಾನ!


ಎಲ್ಲಾ ಹಗರಣಗಳು ಕಲ್ಪನೆ: 
ಮುಡಾ ಹಗರಣ ನೂರಕ್ಕೆ ನೂರರಷ್ಟು ಮುಕ್ತರಾಗಿ ಸಿಎಂ ಹೊರ ಬರ್ತಾರೆ ಎಂದ ಅವರು ಹಗರಣಗಳು ಬರೀ ನಮ್ಮ ಕಾಲದಲ್ಲಿ ಮಾತ್ರವಲ್ಲ ಎಲ್ಲಾ ಸರ್ಕಾರದಲ್ಲಿ ಆಗಿವೆ. ವಕ್ಪ್ ಬೋರ್ಡ್ ವಿಚಾರವಾಗಿ ಬಿಜೆಪಿ ಸಹ ನೋಟಿಸ್ ನೀಡಿತ್ತು. ಇದು ದುರುದ್ದೇಶದಿಂದ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುಬೇಕು, ಕೆಟ್ಟ ಹೆಸರು ತರಬೇಕು ಅಂತ ಮಾಡುತ್ತಿದ್ದಾರೆ. 


ಯಾರು, ಯಾರಿಗೆ ಆಪರೇಟಿಂಗ್ ಮಾಡುತ್ತಿದ್ದಾರೋ ಗೊತ್ತಿಲ್ಲ? 
ಬಿಜೆಪಿಯವರು ಒಂದಾಗಿ ವಕ್ಪ್ ಬೋರ್ಡ್ ಜನಜಾಗೃತಿ ಮಾಡಲಿ. ಅವರಲ್ಲೇ  ಒಡಕಿದ್ದು ನಮ್ಮನ್ನೇನು ನೋಡ್ತಾರೆ. ಇನ್ನೂ ಎಷ್ಟು ಬಣ ಇರುತ್ತೆ ಗೊತ್ತಿಲ್ಲ. ಯಾರು ದೆಹಲಿಯಲ್ಲಿ ಕುಳಿತು  ಯಾರಿಗೆ ಆಪರೇಟಿಂಗ್ ಮಾಡುತ್ತಿದ್ದಾರೋ. ಯಾರ್ಯಾರ  ಕೈ ಚಳಕ ಎಲ್ಲೆಲಿದೆಯೋ ಗೊತ್ತಿಲ್ಲ. ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಿದರು ಇವರೆಲ್ಲಾ ಯಾವ ಲೆಕ್ಕ ಎಂದು ಬಿ‌ಆರ್ ಪಾಟೀಲ್ ಬಿಜೆಪಿ ನಾಯಕರನ್ನು ಲೇವಡಿ ಮಾಡಿದರು. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.