ಗದಗ: ಹೂವು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೂವು ಅಂದ್ರೆ ಪಂಚಪ್ರಾಣ. ಕೆಲವು ಹೂವುಗಳು ದಿನಬೆಳಗಾದರೆ ಅರಳಿ ಕೈಗೆ ಸಿಕ್ಕಿಬಿಡ್ತಾವೆ. ಆದ್ರೆ ಇಲ್ಲೊಂದು ತರಹದ ವಿಶೇಷ ಹೂವು ಇದೆ. ಇದು ಅರಳೋದು ವರ್ಷಕ್ಕೊಮ್ಮೆ ಮಾತ್ರ. ಅದುವೇ 'ರಾತ್ರಿರಾಣಿ' ಅಂತಾನೆ ಕರೆಸಿಕೊಳ್ಳುವ ಬ್ರಹ್ಮ ಕಮಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಪಾಯದಲ್ಲಿತ್ತು ಈ ಆಟಗಾರನ ವೃತ್ತಿಜೀವನ : 3ನೇ ಟಿ20ಯಲ್ಲಿ ಭರ್ಜರಿ ಕಮ್ ಬ್ಯಾಕ್!


ಅಂದಹಾಗೆ ಗದಗ ತಾಲೂಕಿನ  ಹಿರೇಹಂದಿಗೋಳ ಗ್ರಾಮದ ಮುತ್ತಣ್ಣ  ಹೂಗಾರ ಎಂಬುವರ ಮನೆಯ ಕಂಪೌಡ್ ನಲ್ಲಿ ಬ್ರಹ್ಮ ಕಮಲದ ಗಿಡವನ್ನ ಬೆಳೆಸಿದ್ದರು. ಈ ಕಮಲದ ಹೂವುಗಳು ಅರಳಿದ್ದನ್ನ ಒಮ್ಮೆಯೂ ನೋಡಿರಲಿಲ್ಲ. ಆದ್ರೆ  ಹೊನ್ನುಗ್ಗಿಯ ದಿನ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಬ್ರಹ್ಮ ಕಮಲಗಳು ಅರಳಿವೆ. ಹುಣ್ಣಿಮೆಯ ದಿನ ಈ ಹೂವುಗಳು ಅರಳ್ತಾವೆ ಎಂಬುದನ್ನ ನೋಡೋದಕ್ಕೇನೆ ಇಡೀ ಮನೆ ಮಂದಿ ತುದಿಗಾಲಲ್ಲಿ ಕುಳಿತಿದ್ದರು. ಕೊನೆಗೂ ರಾತ್ರಿ ನಕ್ಷತ್ರದಂತೆ ಹೊಳೆಯುತ್ತ ಅರಳಿ ಇಡೀ ಊರ ತುಂಬ ಸುಗಂಧ ಪರಿಮಳ ಸೂಸಿ ಹೊಸ ವಾತಾವರಣ ನಿರ್ಮಿಸಿತ್ತು.‌ ಈ ಹೂವುಗಳನ್ನು ಕುತೂಹಲದಿಂದ ನೋಡೋಕೆ ಜನ ಮುಗಿಬಿದ್ದಿದ್ದರು. ಇನ್ನು ಐದು ಜನ ಮುತೈದೆಯರು ಬಂದು ಕರೆದು ಬ್ರಹ್ಮ ಕಮಲಗಳಿಗೆ  ಪೂಜೆ ಮಾಡಿದರು. ನಂತರ  ಮುತೈದೆಯರಿಗೆ  ಅರಿಶಿಣ ಕುಂಕುಮ  ಇಟ್ಟು ಉಡಿ ತುಂಬಲಾಯ್ತು. ಶೃದ್ದಾಭಕ್ತಿಯಿಂದ  ಎಲ್ಲರೂ  ಬ್ರಹ್ಮ ಕಮಲಗಳಿಗೆ   ನಮಸ್ಕರಿಸಲಾಯ್ತು.  


ಬ್ರಹ್ಮ ಕಮಲ ನೋಡಲು ಸುಂದರವಷ್ಟೇ ಅಲ್ಲ, ಆರೋಗ್ಯಕ್ಕೂ ಒಳಿತು: 
ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು. ಇದು ವಿಶೇಷವಾಗಿ ಭಾರತದ ಉತ್ತರಾಖಂಡದ ಸ್ಥಳೀಯ ಹೂವು, ವೈಜ್ಞಾನಿಕವಾಗಿ ಸಸೆರಿಯಾ ಒಬೊವೆಲ್ಟಾ ಎಂಬ ಹೆಸರಿದೆ. ಈ ಹೂವನ್ನು 'ಹಿಮಾಲಯದ ರಾಜ' ಎಂದೂ ಕರೆಯಲಾಗುತ್ತದೆ. ನಕ್ಷತ್ರದಂತೆ ಕಾಣುವ ಹೂವು ನೋಡಲು ಸುಂದರವಾಗಿದೆ. ಬ್ರಹ್ಮಕಮಲ ಎಂದರೆ 'ಬ್ರಹ್ಮನ ಕಮಲ' ಎಂದರ್ಥ. ಈ ಹೂವು ಅರಳುವಾಗ ನೋಡಿದವನು ಸುಖ-ಸಂಪತ್ತು ಪಡೆಯುತ್ತಾನೆ ಎಂಬ ನಂಬಿಕೆ ಇದೆ. 


ಇದನ್ನು ಓದಿ: ಶಾಪಿಂಗ್ ಪ್ರಿಯರೇ ಗಮನಿಸಿ.. ಈ ದಿನ ವಸ್ತುಗಳನ್ನು ಖರೀದಿಸಿದ್ರೆ ಅಶುಭ!


ಇದು ಯಕೃತ್ತಿಗೆ ಅತ್ಯುತ್ತಮ ಟಾನಿಕ್ ಆಗಿದೆ. ಕ್ಕೆಮ್ಮು ಮತ್ತು ಶೀತಕ್ಕೆ ಜ್ವರ, ಹೀಗೆ ನಾನಾ ಕಾಯಿಲೆಗಳಿ ಇದು ಅತ್ಯುತ್ತಮ ಮದ್ದಾಗಿದೆ. ಜೊತೆಗೆ ಲೈಂಗಿಕ ಆರೋಗ್ಯವನ್ನು ಉತ್ತೇಜಿಸಲು ಬ್ರಹ್ಮ ಕಮಲ ಅದ್ಭುತ ಔಷಧೀಯ ಪ್ರಯೋಜನ ಹೊಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.