ಬೆಂಗಳೂರು: ವಿಧಾನಸಭೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ ಸಚಿವ ಗೋವಿಂದ್ ಕಾರಜೋಳ ಅವರು ಸಮಾಜದಲ್ಲಿ ನೋವನ್ನು ಅನುಭವಿಸಿ ಬದುಕುತ್ತಿರುವವರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು.ಈ ವಿಚಾರವನ್ನು ನಾವು ಒಪ್ಪಲೇ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಇದೇ ವೇಳೆ ಕಾರಜೋಳ ಅವರ ಈ ಮಾತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಕ್ಷೇಪ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಮಾತುಕತೆ ವಿವರ ಇಲ್ಲಿದೆ...


ಇದನ್ನೂ ಓದಿ: ದೇವಸ್ಥಾನ ಕಟ್ಟಿದವರು ಓಬಿಸಿ, ದಲಿತರು; ಆದರೂ ಮಜಾ ಮಾಡುವವರು ನೀವು..!


ಗೋವಿಂದ ಕಾರಜೋಳ: ಸಮಾಜದಲ್ಲಿ ನೋವನ್ನು ಅನುಭವಿಸಿ ಬದುಕುತ್ತಿರುವವರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು.ಈ ವಿಚಾರವನ್ನು ನಾವು ಒಪ್ಪಲೇ ಬೇಕು. 


ಸಿದ್ದರಾಮಯ್ಯ: ಬಸವಣ್ಣ ಹೊರತಾಗಿ ಇನ್ಯಾನು ಹೇಳಿ, ಸುಮ್ಮನೆ ಏನು ಹೇಳೋಕೆ ಹೋಗಬೇಡಿ 


ಕಾರಜೋಳ: ಬಸವಣ್ಣ ಬಳಿಕ ಅನೇಕ ಬ್ರಾಹ್ಮಣರು ಸಮಾಜ ಸುಧಾರಣೆ ಮಾಡಿದ್ದಾರೆ.


ಸಿದ್ದರಾಮಯ್ಯ: ಹಾಗಾದಲ್ಲಿ, ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರುತ್ತಿರಲಿಲ್ಲ , ಕೂತ್ಕೊಳ್ಳಿ 


ಸ್ಪೀಕರ್ ಕಾಗೇರಿ: ನಿಮ್ಮಿಬ್ಬರ ಚರ್ಚೆ ಕೇಳಿದ ಬಳಿಕ ನನಗೂ ಆಸಕ್ತಿ ಬಂದಿದೆ. 


ಸ್ಪೀಕರ್: ಚುನಾವಣಾ ಸುಧಾರಣಾ ವಿಚಾರದ ರೀತಿಯಲ್ಲಿ ಈ ಬಗ್ಗೆಯೂ ಚರ್ಚೆ ಇಟ್ಟುಕೊಳ್ಳೋಣ.


ಸಿದ್ದರಾಮಯ್ಯ; ಅದಕ್ಕೆ ಅಂಬೇಡ್ಕರ್ ಹೇಳಿದ್ದು ಇತಿಹಾಸ ತಿಳಿಯದವನು ಭವಿಷ್ಯ ನಿರ್ಮಾಣ ಮಾಡಲ್ಲ ಎಂದು, ಇತಿಹಾಸ ತಿಳಿದುಕೊಂಡು ಇರಲೇ ಬೇಕಾಗುತ್ತೆ, ಚರ್ಚೆ ಮಾಡೋಣ


ಸ್ಪೀಕರ್: ಮೂರು ಭಾಗದ ಚರ್ಚೆ ಮಾಡೋಣ, ಇತಿಹಾಸದ ಸ್ಪಷ್ಟತೆ,ವರ್ತಮಾನದ ಜವಾಬ್ದಾರಿ, ಭವಿಷ್ಯದ ಹೊಣೆಗಾರಿಕೆ ಬಗ್ಗೆ ಚರ್ಚೆ ಮಾಡೋಣ


     ಇದನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಹೃದಯಾಘಾತ, ವಿದ್ಯಾರ್ಥಿನಿ ಸಾವು


ಸ್ಪೀಕರ್: ಮೂರು ವಿಚಾರವನ್ನು ಸೇರಿಸಿ ಚರ್ಚೆ ಮಾಡೋಣ, ನಾನೂ ಆಸಕ್ತನಾಗಿದ್ದೇನೆ. ಇತಿಹಾಸ ಹೇಗೆ‌ ತಿರುಚಲ್ಪಟ್ಟಿದೆ ಎಂದು ನೋಡಿದರೆ ಒಂದು ಸಲ ನಾವು ನಾವು ಚರ್ಚೆ ಮಾಡಬೇಕು ಎಂದು ಅನ್ನಿಸುತ್ತೆ. 


ಸಿದ್ದರಾಮಯ್ಯ: ನಿಮ್ಮ ಪ್ರಕಾರ ಇತಿಹಾಸ ತಿರುಚಲಾಗಿದ್ಯಾ? 


ಸ್ಪೀಕರ್: ಅದೆಲ್ಲಾ ಚರ್ಚೆಯಲ್ಲಿ ಬರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.