ಚನ್ನರಾಯಪಟ್ಟಣ: ಬೈಕ್ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ ವಿದ್ಯಾರ್ಥಿಯ ಅಂಗಾಂಗಗಳನ್ನು ದಾನ ಮೂಲಕ‌ ಆತನ ಪೋಷಕರು ಮಾನವೀಯತೆ ಮೆರೆದಿದ್ದಾರೆ.


COMMERCIAL BREAK
SCROLL TO CONTINUE READING

ತಾಲೂಕಿನ ಹಿರಿಸಾವೆ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ರಮೇಶ್ ಮತ್ತು ರಾಧಾ ದಂಪತಿಯ ಏಕೈಕ ಪುತ್ರನಾದ ನಾರಾಯಣಗೌಡ (17) ಅಂಗಂಗ ದಾನ ಮಾಡಿದ ಯುವಕ.


ಇದನ್ನೂ ಓದಿ :ಬುರ್ಖಾ ಧರಿಸಿ ಐಟಂ ಸಾಂಗ್ ಗೆ ಡ್ಯಾನ್ಸ್ , 4 ವಿದ್ಯಾರ್ಥಿಗಳು ಸಸ್ಪೆಂಡ್


ಈತ  ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಡಿ.6ರಂದು ಬೈಕ್ ಗೆ  ವಾಹನವೊಂದು ಡಿಕ್ಕಿ ಹೊಡೆದು ತಲೆಗೆ ತೀವ್ರವಾಗಿ ಗಾಯಗೊಂಡಿದ್ದ.  ಮೊದಲು ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ,  ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಟ್ರಾಮಾ ಕೇರ್ ಸೆಂಟರ್‌ನ ಐಸಿಯುಗೆ ದಾಖಲಿಸಿ, ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.


ಇದನ್ನೂ ಓದಿ : Assembly Election Result 2022 : ಗುಜರಾತ್‌ನಲ್ಲಿ 1985 ರ ಕಾಂಗ್ರೆಸ್‌ ದಾಖಲೆ ಮುರಿದ ಬಿಜೆಪಿ!


ನರಶಸ್ತ್ರಚಿಕಿತ್ಸಕರು ಮತ್ತು ತೀವ್ರ ಚಿಕಿತ್ಸಕರ ತಜ್ಞರ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಿ, ಜೀವ ಉಳಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡರೂ, ಮೆದುಳಿನ ಭಾಗದಲ್ಲಾದ ಗಾಯದಿಂದಾಗಿ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸಲಿಲ್ಲ.  ಈ ಹಿನ್ನಲೆಯಲ್ಲಿ ಡಿ.8 ರಂದು ಟ್ರಾಮಾ ಕೇರ್ ಸೆಂಟರ್‌ನ ವೈದ್ಯರು  ಬ್ರೈನ್ ಡೆಡ್ ಎಂದು ಘೋಷಿಸಿದರು.


ಜೀವನ ಸಾರ್ಥಕಥೆ‌ ಯೋಜನೆಯಡಿ ಅಂಗಾಂಗ ದಾನಕ್ಕಾಗಿ ಸಂಪರ್ಕಿಸಿದಾಗ, ಪೋಷಕರು ಒಪ್ಪಿ ಅಂಗಾಂಗಕ್ಕೆ ಅನುಮತಿ ನೀಡಿದ್ದರು. ಶಸ್ತ್ರಚಿಕಿತ್ಸೆ ಆರಂಭಿಸಿದ ವೈದ್ಯರ‌ ತಂಡ ಅಂಗಾಂಗಳನ್ನು ಪಡೆದುಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.