ಸೆ. 7ರಂದು ಮಂಗಳೂರಿನಲ್ಲಿ ನಡೆಯುವ ಬೈಕ್ ರ್ಯಾಲಿಗೆ ಬ್ರೇಕ್..
ದಾಖಲೆಗಳನ್ನು ಒದಗಿಸಿದ್ದರೆ ಬೈಕ್ ರ್ಯಾಲಿಗೆ ಅವಕಾಶ ಕೊಡುತ್ತಿದ್ದೆವು. ಆದರೆ ಅವರು ದಾಖಲೆಗಳನ್ನು ಒದಗಿಸಿಲ್ಲ. ಆ ಕಾರಣದಿಂದ ಬೈಕ್ ರ್ಯಾಲಿಯನ್ನು ನಿರಾಕರಿಸಲಾಗಿದೆ - ಗೃಹ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು: ಸೆಪ್ಟೆಂಬರ್ 7ರಂದು ಬಜೆಪಿ ಯುವ ಮೋರ್ಚ ಸಂಘ-ಪರಿವಾರದವರ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಿತ್ತು. ಇದರ ಉದ್ದೇಶಕ್ಕಾಗಿ ಇಂದು ಫ್ರೀಡಂ ಪಾರ್ಕ್ನಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡುವ ಪ್ರಯತ್ನವನ್ನೂ ಸಹ ಮಾಡಿತ್ತು.
ಇದನ್ನು ಖಂಡಿಸಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ಬಹಿರಂಗ ಸಭೆಗೆ ಮಾತ್ರ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ಕಾನೂನು ಚೌಕಟ್ಟಿನೊಳಗೆ ನಡೆಯುವ ಹೋರಾಟಕ್ಕೆ ಅವಕಾಶ ನೀಡುವುದಾಗಿ ತಿಳಿಸಿರುವ ಸಚಿವರು ಕಾನೂನು ವಿರುದ್ದ ಹೋರಾಟ ನಡೆಸುವುದಕ್ಕೆ ಅವಕಾಶ ವಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸರು ಕೇಳಿದ ದಾಖಲೆಗಳನ್ನು ಒದಗಿಸಿದ್ದರೆ ಬೈಕ್ ರ್ಯಾಲಿಗೆ ಅವಕಾಶ ಕೊಡುತ್ತಿದ್ದೆವು. ಆದರೆ ಅವರು ದಾಖಲೆಗಳನ್ನು ಒದಗಿಸಿಲ್ಲ. ಆ ಕಾರಣದಿಂದ ಬೈಕ್ ರ್ಯಾಲಿಯನ್ನು ನಿರಾಕರಿಸಲಾಗಿದೆ ಎಂದು ಸುದ್ದಿಗಾರರಿಗೆ ಸಚಿವ ರೆಡ್ಡಿ ತಿಳಿಸಿದರು.
ಸೆಪ್ಟೆಂಬರ್ 7 ರಂದು ಬಿಜೆಪಿ ಬಹಿರಂಗ ಸಭೆ ನಡೆಸಲಿ, ಆದರೆ ಬೈಕ್ ರ್ಯಾಲಿಗೆ ಅವಕಾಶ ನಿದಲಾಗುವುದಿಲ್ಲ. ಮಂಗಳೂರಿನ ಬಿಜೆಪಿ ಪ್ರತಿಭಟನೆಗೆ ಗೃಹ ಇಲಾಖೆಯಿಂದ ತಯಾರಿದೆ ಎಂದು ಸಚಿವರು ಹೇಳಿದರು.
ಕಾನೂನ ಚೌಕಟ್ಟಿನೊಳಗೆ ರೂಪಿಸಿಕೊಳ್ಳಬೇಕಾದ, ಕ್ರಮಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಬೈಕ್ ರ್ಯಾಲಿ ನಡೆಸ್ತಿದ್ದ 900 ಮಂದಿಯನ್ನು ಬಂಧಿಸಲಾಗಿದೆ ಎಂದು ವಿಕಾಸಸೌಧದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ.