ಬೆಂಗಳೂರು: ಕರೋನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ (Omicron) ಸೋಂಕು ಹೆಚ್ಚಾಗದಂತೆ ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ಅದಾಗ್ಯೂ, ಕರೋನಾಗೆ ಹೆದರುವುದಿರಲಿ ಸರ್ಕಾರದ ನಿಯಮಗಳಿಗೂ ತಲೆಕೆಡಿಸಿಕೊಳ್ಳದವರಿಗೇನೂ ಕಡಿಮೆಯಿಲ್ಲ. ಸಿಲಿಕಾನ್ ಸಿಟಿಯಲ್ಲಿ ನೈಟ್ ಕರ್ಪ್ಯೂ (Night Crufew) ನಡುವೆ ಎಣ್ಣೆ ಮತ್ತಲ್ಲಿ ಲಾಂಗ್ ಡ್ರೈವ್ ಹೊರಟಿದ್ದವನ ಕಾರನ್ನು ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ನಂದಿಬೆಟ್ಟಕ್ಕೆ ನೈಟ್ ಔಟ್ ಹೊರಟಿದ್ದವನ ಕಾರು ಪೊಲೀಸರ ವಶಕ್ಕೆ:
ವಾಸ್ತವವಾಗಿ, ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ನಲ್ಲಿ ವಾಸಿಸುತ್ತಿರುವ ಗುಜರಾತ್ ಮೂಲಕ ವ್ಯಕ್ತಿಯೊಬ್ಬ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ತಂದಿದ್ದರೂ, ನಿಯಮ ಉಲ್ಲಂಘಿಸಿ (Night Curfew Violation) ಕುಡಿದು ಲಾಂಗ್ ಡ್ರೈವ್ ಹೊರಟಿದ್ದನು ಎಂದು ತಿಳಿದುಬಂದಿದೆ. 


ಇದನ್ನೂ ಓದಿ- Uttara Kannada: ಹೈಸ್ಕೂಲ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಆಸ್ಪತ್ರೆಗೆ ದಾಖಲು


ನೈಟ್ ಕರ್ಪ್ಯೂ (Night Curfew) ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರು ಕಾರು ಚಾಲಕನನ್ನು ತಪಾಸಣೆ ನಡೆಸಿದ್ದಾರೆ.  ಈ ವೇಳೆ ಕಾರು ಚಾಲಕನು ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿರುವುದು ದೃಢಪಟ್ಟಿದೆ.


ಇದನ್ನೂ ಓದಿ- ಭಾರತ ವಿಶ್ವಗುರು ಆಗಬೇಕೆನ್ನುವವರಿಂದ ಉನ್ನತ ಶಿಕ್ಷಣ ಉಳ್ಳವರ ಪಾಲಾಗುತ್ತಿದೆ: ಎಚ್​ಡಿಕೆ


ಡ್ರಂಕ್ ಅಂಡ್ ಡ್ರೈವ್ ಅಡಿ ಪ್ರಕರಣ ದಾಖಲು:
ಎಣ್ಣೆ ಮತ್ತಲ್ಲಿ ಕಾರು ಚಲಾಯಿಸಿಕೊಂಡು ಬಂದ ಕಾರು ಚಾಲಕನನ್ನು ತಪಾಸಣೆ ನಡೆಸಿದ ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರು, ಚಾಲಕನ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಅಡಿ ಪ್ರಕರಣ ದಾಖಲಿಸಿ ಆತನ ಕಾರನ್ನು ಸೀಜ್ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.