ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತಾನ್ನಾಡಿ ಇದು ನನ್ನ ಕೊನೆಯ ಅಧಿವೇಶನ, ಮುಂದೆ ನಾನು ಬರಲ್ಲ, ಎಂದು ಭಾವುಕರಾಗಿ ನುಡಿದರು.


COMMERCIAL BREAK
SCROLL TO CONTINUE READING

ಬಜೆಟ್ ಕುರಿತು ಚರ್ಚೆಯಲ್ಲಿ ಮಾತಾನ್ನಾಡಿದ ಮಾಜಿ ಸಿಎಂ ಬಿ. ಎಸ್. ವೈ, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನೀವು ಮತ್ತೆ ಅದೇ ವಿಪಕ್ಷ ಸ್ಥಾನದಲ್ಲಿ ಕೂರ್ತೀರ. ಅಧಿವೇಶನ ಮುಗಿದ ಬಳಿಕ ನಮ್ಮ ಭಾಗದ ಶಾಸಕರಿಗೆ ಹೇಳ್ತೀನಿ. ನೀವು ಕರೆದಲ್ಲಿಗೆ ಬಂದು ಚುನಾವಣಾ ಪ್ರಚಾರ ಮಾಡ್ತೀನಿ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ತರಲು ನಾನು ಸಿದ್ಧ. ಅವಕಾಶ ಸಿಕ್ಕರೆ ನಾನು ಮತ್ತೊಂದು ಚುನಾವಣೆಗೂ ಬಿಜೆಪಿ ಗೆಲ್ಲಿಸಿ ತರುವ ಕೆಲಸ ಮಾಡ್ತೀನಿ. ನಾನಂತೂ ಚುನಾವಣೆಗೆ ನಿಲ್ಲಲ್ಲ. ನನ್ನದು ಇದು ವಿದಾಯದ ಭಾಷಣ ಅಂದುಕೊಳ್ಳಿ. ಅಧಿವೇಶನ ಮುಗಿದ ಬಳಿಕ ನಾನು ಮತ್ತೆ ಇಲ್ಲಿಗೆ ಬರೋಕೆ ಸಾದ್ಯವಿಲ್ಲ, ಎಂದು ಸದನದಲ್ಲಿ ವಿಧಾಯದ ಭಾಷಣ ಮಾಡಿದರು.


ಇದನ್ನೂ ಓದಿ: ʼಹ್ಯಾಪಿ ಎಂಡಿಂಗ್ʼ ಬೇಕು ಅಂತ ಯುವತಿ ಮೇಲೆ ʼಅತ್ಯಾಚಾʼರವೆಸಗಿದ ಕಾಮುಕ..!


ಇನ್ನು ವಿಪಕ್ಷ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ ಇವರು,ಆರ್ ಎಸ್ ಎಸ್ ಸಿದ್ಧಾಂತಗಳ ವಿರೋಧಿಸಿದರೆ ಲಾಭವಿಲ್ಲ. ಹಾಗೊಂದು ವೇಳೆ ಇದ್ದರೆ ಅದೊಂದು ಭ್ರಮೆ, ಪ್ರಧಾನಿ ಮೋದಿ ಎಂದೂ ನನಗೆ ಕಡೆಗಣಿಸಿಲ್ಲ, ಯಡಿಯೂರಪ್ಪನವರಿಗೆ ಮೋದಿ ಗೌರವ ಕೊಟ್ಟಿದ್ದಾರೆ. ಒಳ್ಳೆಯ ಅವಕಾಶ, ಸ್ಥಾನಮಾನ ಕೊಟ್ಟಿದ್ದಾರೆ, ಅವರನ್ನ ನಾನು‌ಮರೆಯಲು ಸಾಧ್ಯವಿಲ್ಲ. ಪಕ್ಷದ ಅವಕಾಶದಿಂದ 4 ಬಾರಿ ಸಿಎಂ ಆಗಿದ್ದೇನೆ. ಕೆಲವು ಮಾತಿನಿಂದ ನನ್ನನ್ನ ಸುಮ್ಮನೆ ಕೂರಿಸಲಾಗಲ್ಲ, ನಾಳೆಯಿಂದ ನಾನು ರಾಜ್ಯ ಪ್ರವಾಸ ಮಾಡ್ತೇನೆ, ಇನ್ನೆರಡು ತಿಂಗಳಲ್ಲಿ ನೀವೇ ನೋಡಿ. ಯಾವ ರೀತಿ ಗಾಳಿ ಬೀಸುತ್ತೆ ನೋಡಿ, ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ.


ಸಿದ್ದರಾಮಯ್ಯ ಅವರಿಗೆ ಕಿವಿ ಮಾತು : ಸಿದ್ದರಾಮಯ್ಯನವರೇ ನೀವು ಗೆದ್ದ ಕ್ಷೇತ್ರದಲ್ಲಿ ಯಾಕೆ ನಿಲ್ಲಲ್ಲ, ನಿಮ್ಮ ಕ್ಷೇತ್ರದಲ್ಲಿ ನೀವು ಅಭಿವೃದ್ಧಿ ಮಾಡಿಲ್ಲವೇ? ನಾನು ಸಿದ್ದರಾಮಯ್ಯಗೆ ಕಿವಿ ಮಾತು ಹೇಳ್ತೇನೆ, ನೀವು ಎಲ್ಲಿ ಗೆದ್ರಿ ಅಲ್ಲಿಂದಲೇ ನಿಲ್ಲಬೇಕು. ಯಾವ ಬಾದಾಮಿ ಕ್ಷೇತ್ರದಲ್ಲಿ ನಿಂತು ಗೆದ್ದಿದಾರೆ. ಜನರೂ ಕೂಡ ಮತ್ತೊಮ್ಮೆ ಬನ್ನಿ ಅಂತ ಹೆಳ್ತಿದ್ದಾರೆ. ಅಲ್ಲಿ ಹೋಗಿ ಗೆಲ್ಲುವ ಆತ್ಮ ವಿಶ್ವಾಸ ಇಲ್ಲ. ಆ ಭಾಗದ ಜನತೆಗೆ ನಂಬಿಕೆ ದ್ರೋಹ, ಆತ್ಮ ವಿಶ್ವಾಸ ಕಳೆದಿದ್ದಾರೆ ಅಂತ ಬಾವಿಸಿದ್ದಾರೆ. ನನಗೆ ರಾಜಕಾರಣ ಮಾಡೋದು ಇಷ್ಟ ಇಲ್ಲ. ಹಾಗಾಗಿ ಮಾತಾಡ್ತಿದ್ದೇನೆ ಎಂದರು.


ಇದನ್ನೂ ಓದಿ:ಬಡವರ ದುಡಿಮೆಯ ಕಾರ್ಖಾನೆ ಮುಚ್ಚಿ ಸಿರಿವಂತರಿಗೆ ವಿಮಾನ ಹಾರಿಸುವುದೇ ಅಭಿವೃದ್ಧಿಯೇ?: ಕಾಂಗ್ರೆಸ್


ಏಳನೇ ವೇತನ ಆಯೋಗ ಜಾರಿಗೆ ಬಿಎಸ್ ವೈ ಒತ್ತಾಯ : ಏಳನೇ ವೇತನ ಆಯೋಗ ಜಾರಿಗೆ ಸರ್ಕಾರಿ ನೌಕರರು ಪ್ರತಿಭಟನೆ ಮಾಡ್ತಿದ್ದಾರೆ.ಈಗಾಗಲೇ ವೇತನ ಆಯೋಗ ಬಗ್ಗೆ ಘೋಷಣೆ ಮಾಡಿದ್ದಾರೆ.ಇಂದು ಸದನದಲ್ಲಿ ಬಂದು ಸಿಎಂ ಏಳನೇ ವೇತನ ಆಯೋಗದ ಬಗ್ಗೆ ಘೋಷಣೆ ಮಾಡಬೇಕು, ಎಂದು  ಯಡಿಯೂರಪ್ಪ ಸರ್ಕಾರಿ ನೌಕರರ ಪರವಾಗಿ ಒತ್ತಾಯಿದರು.


ಯು ಟಿ ಖಾದರ್ ಬಿಎಸ್ ವೈ ರಾಜಕೀಯ ಪ್ರಶಂಸೆ : ಇನ್ನು ಸದನದ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಹೊಗಳಿದ ಯುಟಿ ಖಾದರ್,ತಾವು ಇಲ್ಲಿ ಅತ್ಯಂತ ಹಿರಿಯರು.ಯಡಿಯೂರಪ್ಪ ನೀವು ಸಾಕಷ್ಟು ರಾಜಕೀಯ ಅನುಭವ ಹೊಂದಿದ್ದವರು, ಕೇವಲ ಬಿಜೆಪಿಯ ಕಾರ್ಯಕರ್ತರು ಮತ್ತು ಬಿಜೆಪಿ  ನಾಯಕರು ಮಾತ್ರ.ನಾನು ಸೇರಿದಂತೆ  ಎಲ್ಲಾ ಪಕ್ಷದವರು ನಿಮ್ಮಿಂದ ಕಲಿಯಲು ಸಾಕಷ್ಟು ವಿಚಾರಗಳು ಇವೆ.ಅಂತಹ ದೊಡ್ಡ ವ್ಯಕ್ತಿತ್ವ ಯಡಿಯೂರಪ್ಪ ಅವರದು.ನಿಮ್ಮಗೆ ಹೈ ಕಮಾಂಡ್ ಎಷ್ಟೇ ನೋವು ಕೊಟ್ರು ಸಹ ನೀವು ಪಕ್ಷ ನಿಷ್ಠೆಯನ್ನು ಬಿಡಲಿಲ್ಲ.ನಿಮ್ಮಗೆ ಅವಮಾನ, ನೋವು ಆಗಿದ್ರೂ ಅದೆಲ್ಲವನ್ನೂ ಸಹಿಸಿಕೊಂಡಿದ್ರಿ.ನಿಮ್ಮ ಪಕ್ಷ ನಿಷ್ಠೆಯನ್ನು ನಾವು ಎಲ್ಲರೂ ಕಲಿಯಬೇಕು ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.