ಬೆಂಗಳೂರು: ಗುರುಗ್ರಾಮದ ರೆಸಾರ್ಟ್'ನಲ್ಲಿ ಉಳಿದಿರುವ ಎಲ್ಲಾ ಶಾಸಕರಿಗೆ ಇಂದೇ ವಾಪಸ್ ಬರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಗ್ರಾಮದಿಂದ ನಮ್ಮ ಎಲ್ಲಾ ಶಾಸಕರು ಮಧ್ಯಾಹ್ನದ ಒಳಗೆ ವಾಪಸ್ ಬರಲು ಸೂಚಿಸಿದ್ದೇನೆ. ನಮ್ಮ ಎಲ್ಲಾ ಶಾಸಕರು ಇಂದೇ ವಾಪಸ್ ಬರುತ್ತಾರೆ. ಬಳಿಕ ರಾಜ್ಯದಲ್ಲಿ ಬರ ಸಂಕಷ್ಟದಲ್ಲಿರುವ ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 


ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಲ್ಲ
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸರ್ಕಾರ ಪತನ ಮಾಡುವುದಾಗಿ ಹೇಳಿಕೆ ನೀಡುತ್ತಾ ಆಪರೇಶನ್ ಕಮಲ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಬಿಜೆಪಿ ನಾಯಕರು ಇದೀಗ ಯೂಟರ್ನ್ ಹೊಡೆದಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಾವು ಮಾಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಆ ಭಯ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.