ವಿಶ್ವಾಸಮತ: ಹೆಚ್ಡಿಕೆ ಬೆಂಬಲಿಸಿ ಎಂದು ಶಾಸಕ ಮಹೇಶ್ಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸೂಚನೆ
ನಮ್ಮ ವರಿಷ್ಠರ ಸೂಚನೆ ಮೇರೆಗೆ ಸೋಮವಾರ ಸದನಕ್ಕೆ ಹೋಗುವುದಿಲ್ಲ ತಟಸ್ಥವಾಗಿರುತ್ತೇನೆ ಎಂದು ಎನ್. ಮಹೇಶ್ ಭಾನುವಾರ ಬೆಳಿಗ್ಗೆ ತಿಳಿಸಿದರು.
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಕೊಳ್ಳೇಗಾಲ ಕ್ಷೇತ್ರದ ಏಕೈಕ ಬಿಎಸ್‌ಪಿ ಶಾಸಕ ಎನ್. ಮಹೇಶ್ ಅವರಿಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸೂಚನೆ ನೀಡಿದ್ದಾರೆ.
ಮೈತ್ರಿ ಸರ್ಕಾರದ ಪರವಾಗಿ ಮತಚಲಾಯಿಸುವ ಬಗ್ಗೆ ಭಾನುವಾರ ಬೆಳಿಗ್ಗೆ ಪ್ರತಿಕ್ರಿಯಿಸಿದ್ದ ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಮಾಯಾವತಿ ಅವರು ತಟಸ್ಥವಾಗಿರಲು ಹೇಳಿದ್ದಾರೆ. ನಮ್ಮ ವರಿಷ್ಠರ ಸೂಚನೆ ಮೇರೆಗೆ ಸೋಮವಾರ ಸದನಕ್ಕೆ ಹೋಗುವುದಿಲ್ಲ ತಟಸ್ಥವಾಗಿರುತ್ತೇನೆ ತಿಳಿಸಿದ್ದರು. ಇದರಿಂದಾಗಿ ಜೆಡಿಎಸ್ ಪ್ರಮುಖರು ಆತಂಕಕ್ಕೊಳಗಾಗಿದ್ದರು.
ಇದರ ಬೆನ್ನಲ್ಲೇ ಭಾನುವಾರ ಸಂಜೆ ಮಾಯಾವತಿ ತಮ್ಮ ಪಕ್ಷದ ಶಾಸಕ ಮಹೇಶ್ಗೆ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.