ಬೆಂಗಳೂರು: ಕುಮಾರಸ್ವಾಮಿ ಅವರಿಂದ ಮುಡಾ ಅಕ್ರಮವಾಗಿದೆ ಎಂದು ಯಡಿಯೂರಪ್ಪ ಅವರು ದಾಖಲೆ ಬಿಡುಗಡೆ ಮಾಡಿದ್ದರು ಎಂದು ರಮೇಶ್ ಬಾಬು ಅವರು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಾಧ್ಯಮ ಘೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


ಯಡಿಯೂರಪ್ಪ ಅವರು 2011 ರ ಮಾರ್ಚ್ 17 ರಂದು ಮುಡಾ ಬಗ್ಗೆ ಗಂಭೀರವಾದ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ಮೋಟಮ್ಮ ಅವರು ವಿಧಾನ ಪರಿಷತ್ತಿನ ನಾಯಕರಾಗಿರುತ್ತಾರೆ. ಮುಡಾದಲ್ಲಿ ಒಂದೇ ಕುಟುಂಬದವರು 48 ಸೈಟುಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 300/200 ಚದರ ಅಡಿ ಸೈಟ್‌ ನಂಬರ್ 17 (ಬಿ), ಸವಿತಾ ಎನ್ನುವವರಿಗೆ ಸೈಟ್ 17 (ಬಿ 1) 75/201 ಚದರ ಅಡಿ ಅನ್ನು ದೇವೇಗೌಡರ ಕಾಲದಲ್ಲಿ ನೀಡಲಾಗಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದರು.


ಇದನ್ನೂ ಓದಿ: ಜುಲೈ 18ರವರೆಗೆ ಮಾಜಿ ಸಚಿವ ನಾಗೇಂದ್ರ ಇಡಿ ಕಸ್ಟಡಿಗೆ!


ಸವಿತಾ ಕೋ ಬೀರೇಗೌಡ ಅವರಿಗೆ 130/ 100, 110/ 80 ಅಡಿ ನಿವೇಶನಗಳನ್ನು ಸೇರಿದಂತೆ ದೇವೇಗೌಡರು ಸೊಸೆಯಂದಿರಿಗೆ 48 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಇದನ್ನು ಹಗಲು ದರೋಡೆ ಎಂದು ಯಡಿಯೂರಪ್ಪ ಅವರು ಸದನದಲ್ಲಿ ಚರ್ಚೆ ಆಗ್ರಹಿಸಿದ್ದರು. 60 ಸಾವಿರ ಅಡಿ ನಿವೇಶನ ಅಂದರೆ 1.5 ಎಕರೆ ಜಮೀನನ್ನು ಕುಮಾರಸ್ವಾಮಿ ಅವರಿಗೆ ಮಂಜೂರು ಮಾಡಲಾಗಿದೆ. ಯಡಿಯೂರಪ್ಪ ಅವರು ಈ ಅಕ್ರಮದ ಬಗ್ಗೆ ದಾಖಲೆ ಕೊಡುತ್ತಿದ್ದೇನೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸುತ್ತಾರೆ.


ಬಿ.ಎಸ್.ಯಡಿಯೂರಪ್ಪ ಅವರು ವಿಧಾನಪರಿಷತ್ ಅಲ್ಲಿ ಮುಡಾ ಬಗ್ಗೆ ಸಭಾಪತಿಗಳಿಗೆ ದಾಖಲೆಗಳನ್ನು ಸಲ್ಲಿಸಲಾಗುತ್ತದೆ‌. ಈ ದಾಖಲೆಗಳ ಮೇಲೆ ತನಿಖೆಯಾಗಬೇಕು ಎಂದು ತಿಳಿಸುತ್ತಾರೆ. ವಿಧಾನಪರಿಷತ್ತಿನ ನಡಾವಳಿಗಳ ಪ್ರಕಾರ ಯಾವುದೇ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದರೆ ತನಿಖೆ ನಡೆಸಬೇಕು ಎನ್ನುವ ನಿಯಮ ಮಾಡಿಕೊಳ್ಳಲಾಗಿದೆ‌‌. ಆದರೆ ಬಿಜೆಪಿಯವರು ಬಾಯಿಯೇ ಬಿಡುತ್ತಿಲ್ಲ.


ಬಿಜೆಪಿಯವರೇ ನೀವು ಏಕೆ ತಟಸ್ಥವಾಗಿ ಇದ್ದೀರಾ? 2011 ರಲ್ಲಿ ನೀವೆ ಕೊಟ್ಟಿರುವ ದಾಖಲೆಗಳ ಮೇಲೆ ಮಾತಾನಾಡಿ. ನಿಮ್ಮದೇ ಮುಖ್ಯಮಂತ್ರಿ, ಸಭಾಪತಿಗಳು ಇದ್ದರು ಏಕೆ ತನಿಖೆ ಮಾಡಲಿಲ್ಲ. ಸಣ್ಣ, ಸಣ್ಣ ವಿಚಾರಕ್ಕೂ ಶೋಭಕ್ಕ, ರವಿಕುಮಾರ್, ಸಿ.ಟಿ.ರವಿ ಅವರು ರಾಜ್ಯಪಾಲರ ಮನೆ ಬಾಗಿಲು ತಟ್ಟುತ್ತಾರೆ. ರಾಜ್ಯಪಾಲರ ಮನೆಯನ್ನು ಮಾವನ ಮನೆ ಮಾಡಿಕೊಂಡಿದ್ದಾರೆ. 


ಇದನ್ನೂ ಓದಿ: ಗಿಲ್-ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್’ಗಳ ಭರ್ಜರಿ ಜಯ


ಕಾಂಗ್ರೆಸ್ ಪಕ್ಷದಿಂದ 09.07.24 ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದು. 48 ಸೈಟು ಹಂಚಿಕೆಗಳ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಮುಖ್ಯಮಂತ್ರಿಗಳು ದಾಖಲೆ ಸಲ್ಲಿಕೆ ಮಾಡಿದರೆ ತನಿಖೆ ನಡೆಸಲೇ ಬೇಕು ಎನ್ನುವ ನಿಯಮವಿದೆ. ಯಡಿಯೂರಪ್ಪ ಅವರು 2011 ರಲ್ಲಿ ಇದರ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ. ಅದಕ್ಕೆ ನಾವು ಸಹ ತನಿಖೆ ನಡೆಯಬೇಕು ಎಂದು ಪತ್ರ ಬರೆದಿದ್ದೇವೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ