ಬೆಂಗಳೂರು : ಆಡಳಿತಾರೂಡ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕನಿಷ್ಠ 11 ಶಾಸಕರು ಶನಿವಾರ ತಮ್ಮ ರಾಜೀನಾಮೆಯನ್ನು ಸ್ಪೀಕರ್ ಕಚೇರಿಗೆ ಸಲ್ಲಿಸಿದ ನಂತರ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ವರದಿಗಳ ಪ್ರಕಾರ, ಕನಿಷ್ಠ ಎಂಟು ಕಾಂಗ್ರೆಸ್ ಮತ್ತು ಮೂವರು ಜನತಾದಳ-ಜಾತ್ಯತೀತ ಶಾಸಕರು ಸ್ಪೀಕರ್ ಕಚೇರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜೀನಾಮೆ ನೀಡಿದವರಲ್ಲಿ - ಎಚ್. ವಿಶ್ವನಾಥ್, ರಮೇಶ್ ಜಾರಕಿಹೋಳಿ, ಸೋಮಶೇಖರ್, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ, ಬಿ.ಸಿ. ಪಾಟೀಲ್, ಮಹೇಶ್ ಕುಮತಹಳ್ಳಿ, ನಾರಾಯಣ ಗೌಡ, ಬೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಮತ್ತು ರಾಮಲಿಂಗ ರೆಡ್ಡಿ ಸೇರಿದ್ದಾರೆ. 



ಈಗ ಈ ರಾಜಕೀಯ ಅಸ್ಥಿರತೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಸದಾನಂದಗೌಡ "ಎಲ್ಲರ ಶಾಸಕರು ಇದು ಸೂಕ್ತ ಸಮಯವೆಂದು ತಿಳಿದು ಪಕ್ಷದಿಂದ ಹೊರಗೆ ಬಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರ ಹಾಗೂ ರಾಜ್ಯದ ಹಿತಾಸಕ್ತಿಗಾಗಿ ಶಾಸಕರಾಗಿ ಮುಂದುವರೆಯುವುದು ಸರಿಯಲ್ಲ ಎಂದು ತಿಳಿದಿದ್ದಾರೆ ಎಂದರು.  ಇನ್ನು ಮುಂದುವರೆದು ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದಲ್ಲಿ ಯಡಿಯೂರಪ್ಪ ಸಿಎಂ ಆಗಲಿದ್ದಾರೆ' ಎಂದು ತಿಳಿಸಿದರು. 


ಇನ್ನೊಂದೆಡೆ ಶಾಸಕರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, "ನಾನು ನನ್ನ ಮಗಳನ್ನು ಕರೆದುಕೊಂಡು ಹೋಗಬೇಕಿತ್ತು, ಅದಕ್ಕಾಗಿಯೇ ನಾನು ಮನೆಗೆ ಹೋಗಿದ್ದೆ, ರಾಜೀನಾಮೆ ಸ್ವೀಕರಿಸಲು ನನ್ನ ಕಚೇರಿಗೆ ಹೇಳಿದ್ದೇನೆ, ಅಲ್ಲದೆ ಅವರಿಗೆ ಸ್ವೀಕೃತಿ ಪತ್ರವನ್ನು ನೀಡುವಂತೆ ಸೂಚಿಸಿದ್ದೇನೆ. ನಾಳೆ ರಜೆ ಆಗಿರುವುದರಿಂದ ನಾನು ಅದನ್ನು ಸೋಮವಾರ ನೋಡುತ್ತೇನೆ ಎಂದು ಹೇಳಿದರು.