ಆನ್ ಲೈನ್ ನಲ್ಲಿ ಬಾಂಬ್ ಗೆ ಬಳಸುವ ಟೈಮರ್ ಖರೀದಿ : ಟೈಮರ್ ಖರೀದಿ ಮಾಡಿದವರಿಗೆ ಸಿಸಿಬಿ ಡ್ರಿಲ್
ಬಾಂಬ್ ಬ್ಲಾಸ್ಟ್ ಗೆ ಬಳಸಿರುವ ಟೈಮರ್ ಆನ್ ಲೈನ್ ನಲ್ಲಿ ಬಹಳ ಸುಲಭವಾಗಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆನ್ ಲೈನಲ್ಲಿ ಟೈಮರ್ ಖರೀದಿ ಮಾಡಿದವರ ಮಾಹಿತಿ ಪಡೆಡಿರುವ ಸಿಸಿಬಿ ಎಲ್ಲರನ್ನೂ ವಿಚಾರಣೆಗೆ ಗುರಿಪಡಿಸಿದೆ.
ಬೆಂಗಳೂರು : ಕಳೆದ ವಾರ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಬಾಂಬ್ ಸ್ಪೋಟದ ನಂತರ ಎಲ್ಲೆಡೆ ಭದ್ರೆತೆ ಹೆಚ್ಚಿಸಲಾಗಿದೆ. ಅಲ್ಲದೆ ಘಟನೆಯ ಹಿಂದಿನ ದುಷ್ಟರ ಪತ್ತೆಗೆ ಸಿಸಿಬಿ ಟೊಂಕ ಕಟ್ಟಿ ನಿಂತಿದೆ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸ್ಥಳಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಮೂಲಕ ಎಲ್ಲಿಯಾದರೂ ಆರೋಪಿ ಸುಳಿವು ಸಿಗುತ್ತದೆಯಾ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ.
ಈ ನಡುವೆ ಬಾಂಬ್ ಗೆ ಬಳಸುವ ಟೈಮರ್ ಆನ್ ಲೈನ್ ನಲ್ಲೆ ಸಿಗುತ್ತದೆ ಎನ್ನುವ ಮಾಹಿತಿ ಕೂಡಾ ಹೊರ ಬಿದ್ದಿದೆ. ಬಾಂಬ್ ಬ್ಲಾಸ್ಟ್ ಗೆ ಬಳಸಿರುವ ಟೈಮರ್ ಆನ್ ಲೈನ್ ನಲ್ಲಿ ಬಹಳ ಸುಲಭವಾಗಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆನ್ ಲೈನಲ್ಲಿ ಟೈಮರ್ ಖರೀದಿ ಮಾಡಿದವರ ಮಾಹಿತಿ ಪಡೆಡಿರುವ ಸಿಸಿಬಿ ಎಲ್ಲರನ್ನೂ ವಿಚಾರಣೆಗೆ ಗುರಿಪಡಿಸಿದೆ. ಇಲ್ಲಿಯವರೆಗೆ ವಿಚಾರಣೆಗೆ ಒಳಗಾದ ಎಲ್ಲರೂ ಆನ್ ಲೈನ್ ನಲ್ಲಿ ಟೈಮರ್ ಖರಿದೀಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟೈಮರ್ ಖರೀದಿ ಮಾಡಿದ ವ್ಯಕ್ತಿಗಳನ್ನ ಮೂರು ದಿನದಿಂದ ಸಿಸಿಬಿ ವಿಚಾರಣೆ ನಡೆಸಿದೆ.
ಇದನ್ನೂ ಓದಿ : Bangalore: ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ದುರ್ಮರಣ..!
ಆದರೆ ವಿಚಾರಣೆ ವೇಳೆ ಬ್ಲಾಸ್ಟ್ ವಿಚಾರವಾಗಿ ಯಾವೂದೇ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಟೈಮರ್ ಖರೀದಿ ಮಾಡಿದ ವ್ಯಕ್ತಿಗಳು ತಮ್ಮ ಮನೆ ಉಪಯೋಗಕ್ಕೆ ಟೈಮರ್ ಬಳಕೆ ಮಾಡಿದ್ದಾರಂತೆ.ಮಕ್ಕಳ ಕೋಣೆಯ ಲೈಟ್ ಆನ್ ಆಫ್ ಆಗಲು, ಫಿಶ್ ಅಕ್ವೇರಿಯಂಗೆ ಲೈಟ್ ಆನ್ ಆಫ್ ಆಗಲು ಈ ಟೈಮರ್ ಬಳಸಿದ್ದರಂತೆ. ಹೀಗಾಗಿ ವಿಚಾರಣೆ ನಡೆಸಿದ ವ್ಯಕ್ತಿಗಳನ್ನ ಸಿಸಿಬಿ ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಇನ್ನು ಸ್ಪೋಟಕ ಖರೀದಿ ಮಾಡಿದವರ ಮೇಲೂ ಸಿಸಿಬಿ ಹದ್ದಿನ ಕಣ್ಣಿಟ್ಟಿದೆ. ಕಳೆದೊಂದು ವಾರದಲ್ಲಿ ಹತ್ತಕ್ಕೂ ಹೆಚ್ಚು ಜನ ಸ್ಪೋಟಕ ಖರೀದಿಸಿದ್ದರು ಎನ್ನುವ ಮಾಹಿತಿ ಇದೆ. ಸ್ಪೋಟಕ್ಕೆ ಅಮೋನಿಯಂ, ಪಾಸ್ಪರಸ್ ನಂತಹ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಕಳೆದೊಂದು ವಾರದಲ್ಲಿ ನಗರದಲ್ಲಿ ಈ ಸ್ಟೋಟಕಗಳನ್ನ ಎಷ್ಟು ಮಂದಿ ಖರೀದಿ ಮಾಡಿದ್ದಾರೆ ಅನ್ನೋ ಲೆಕ್ಕಾಚಾರದಲ್ಲಿ ಸಿಸಿಬಿ ಚಿಕ್ಕಪೇಟೆ ಮಾರ್ಕೇಟ್ ಸೇರಿ ಅಧಿಕೃತ ರಾಸಾಯನಿಕ ಮಾರಾಟಗಾರರನ್ನ ಸಂಪರ್ಕ ಮಾಡಿದೆ. ಈ ಮೂಲಕ ಇತ್ತಿಚೇಗೆ ರಾಸಾಯನಿಕ ಖರೀದಿ ಮಾಡಿರೋರ ಮಾಹಿತಿ ಕಲೆ ಹಾಕಿದೆ.
ಇದನ್ನೂ ಓದಿ : NWKRTC : ಹುಬ್ಬಳ್ಳಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಬಸ್ ವ್ಯವಸ್ಥೆ
ಅಲ್ಲದೆ, ರಾಸಾಯನಿಕಗಳನ್ನು ಖರೀದಿಸಿರುವವರು ಯಾವ ಕಾರಣಕ್ಕೆ ರಾಸಾಯನಿಕ ಖರೀದಿ ಮಾಡಿದ್ದಾರೆ ? ಮತ್ತು ಖರೀದಿ ಮಾಡಿರುವ ರಾಸಾಯನಿಕಗಳನ್ನು ಎಲ್ಲಿ ಬಳಕೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಇದೀಗ ಪೋಲೀಸ್ ಇಲಾಖೆ ಮುಂದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.