ರಾಜೀಸೂತ್ರಕ್ಕೆ ಶರಣಾಗಿ ಏಕೈಕ ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡ ಡಿಕೆಶಿ: ವಿಜಯೇಂದ್ರ
ಕಾಂಗ್ರೆಸ್ ಅಧಿಕಾರಕ್ಕೆ ತರಲು ಬಂಡೆಯಂತೆ ನಿಂತು ಹೋರಾಟ ಮಾಡಿದ್ದೇನೆ. ಮುಖ್ಯಮಂತ್ರಿ ಪದವಿಗೆ ನನ್ನನ್ನು ಪರಿಗಣಿಸಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಂಡಿಸಿದ್ದ ಡಿ.ಕೆ.ಶಿವಕುಮಾರ್ ಗತ್ಯಂತರವಿಲ್ಲದೇ ಹೈಕಮಾಂಡ್ ರಾಜೀಸೂತ್ರಕ್ಕೆ ಶರಣಾಗಿ ಏಕೈಕ ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆಂದು ವಿಜಯೇಂದ್ರ ಟೀಕಿಸಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚು ಸ್ಥಾನ ಗಳಿಸಿದರೆ ಮುಂದಿನ 5 ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಾಂಗ್ರೆಸ್‍ನಲ್ಲಿ ಮತ್ತೆ ಭುಗಿಲೆದ್ದಿರುವ ಪೂರ್ಣಾವಧಿ ಮುಖ್ಯಮಂತ್ರಿ ವಿವಾದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ವಿಜಯೇಂದ್ರ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನ ಪೂರ್ಣಾವಧಿ ಅಧಿಕಾರ ಕೊಟ್ಟು 8 ತಿಂಗಳು ಕಳೆಯುತ್ತಿದೆ, ಈವರೆವಿಗೂ ಒಂದೇ ಒಂದು ಅಭಿವೃದ್ಧಿ ಕಾರ್ಯದತ್ತ ಹೆಜ್ಜೆ ಇಡಲಾಗದ ಸರ್ಕಾರ, ಮೊದಲ ದಿನದಿಂದಲೂ ಮುಖ್ಯಮಂತ್ರಿ ಗಾದಿಯ ಅವಧಿ ಸುತ್ತ ಗಿರಕಿ ಹೊಡೆಯುವ ಮೂಲಕ ಜನರಲ್ಲಿ ಅಸ್ಥಿರ ಸರ್ಕಾರದ ಭಾವ ಮೂಡಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾನಿಗೆ ಬೆಂಗಳೂರಿನಿಂದ ತುಳುಸಿಮಾಲೆಯ ಸೇವೆ
ಕೇಂದ್ರ ಸರ್ಕಾರದ ಹೊಸ ರಸ್ತೆ ಕಾಯ್ದೆ ವಿರುದ್ದ ಪ್ರತಿಭಟನೆ
ಇದರಿಂದ ವಿಚಲಿತಗೊಂಡು ಬಂಡೆಯಂತೆ ಆರ್ಭಟಿಸಬೇಕಿದ್ದ ಡಿ.ಕೆ.ಶಿವಕುಮಾರ್ ಅವರ ಮೆದು ಮಾತುಗಳ ಪ್ರತಿಕ್ರಿಯೆ ಗಮನಿಸಿದರೆ ಅವರನ್ನು ರಾಜಕೀಯ ಹತಾಶೆ ಮುತ್ತಿದಂತೆ ಕಾಣುತ್ತಿದೆ. ಸ್ವಪಕ್ಷೀಯ ವೀರೋಧಿಗಳ ದಾಳ ಅವರಲ್ಲಿ ರಾಯಕೀಯ ಪಲಾಯನದ ಮಾತನಾಡಿಸುತ್ತಿರುವಂತಿದೆ. ಕಾಂಗ್ರೆಸ್ಸಿಗರ ಆಂತರಿಕ ಕಚ್ಚಾಟ ಏನೇ ಇರಲಿ ಇದರಿಂದ ಸರ್ಕಾರದ ಆಡಳಿತದ ಮೇಲೆ ಉಂಟಾಗುತ್ತಿರುವ ಪರಿಣಾಮದಿಂದ ಜನತೆ ಸಂಕಷ್ಟಕ್ಕೆ ಸಿಲುಕುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ವಿಜಯೇಂದ್ರ ಕುಟುಕಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.