ನವದೆಹಲಿ: ದೆಹಲಿಯಲ್ಲಿ ಸಿ.ಟಿ. ರವಿಯವರ ಕಚೇರಿ ಉದ್ಘಾಟನೆ ನೆಪದಲ್ಲಿ ಬಿಜೆಪಿ ನಾಯಕರು ದೆಹಲಿಯಲ್ಲಿ ಇದ್ದಾರೆ. ಇವರ ಈ ನಡೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನಕ್ಕೆ ಮುಖ್ಯ ಕಾರಣ, ಸಚಿವ ಸಂಪುಟ ಸಭೆಯಲ್ಲಿ ಗೈರಾಗಿ ದೆಹಲಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗಿದ್ದು.


COMMERCIAL BREAK
SCROLL TO CONTINUE READING

ಹೌದು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್(B.L.Santosh) ಹಾಗೂ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಈ ತಂಡ ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಬಿಎಸ್‌ವೈ ಅವರ ಕಾರ್ಯವೈಖರಿ, ರಾಜ್ಯದಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರಂತೆ.


CM ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ!


ಇನ್ನೂ ಈ ಟೀಂನಲ್ಲಿರುವ ಕೆಲವೊಬ್ಬರು ನಾಯಕತ್ವ ಬದಲಾವಣೆ ಬಗ್ಗೆಯೂ ಪ್ತಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಇದರಲ್ಲಿನ ಒಂದಿಷ್ಟು ಜನ ಇದು ನಾಯಕತ್ವ ಬದಲಾವಣೆಗೆ ಸರಿಯಾದ ಸಮಯ ಎಂದಿದ್ದಾರೆ. ನಾಯಕತ್ವ ಬದಲಾವಣೆ ಆಗದಿದ್ದರೆ ಬಿಎಸ್‌ವೈರ ಮೇಲೆ ಹೈಕಮಾಂಡ್ ಹಿಡಿತ ಸಾಧಿಸಬೇಕು ಎಂತಲೂ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ಯದಲ್ಲಿನ ಎಲ್ಲಾ ವಿಚಾರಗಳಿಗೆ ಬಿಎಸ್‌ವೈ ಪುತ್ರ ನಡುವೆ ಬರುತ್ತಿರುವ ಬಗ್ಗೆಯೂ ಹೇಳಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ ಎಂಬುದು ಹಾಗೆಯೇ ನಾಯಕರ ನಡುವೆಯೇ ಸಮನ್ವಯ ಇಲ್ಲಾ ಅನ್ನೋದು ಗೊತ್ತಾಗುತ್ತಿದೆ.


'ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ'