ಬೆಂಗಳೂರು: ಬಿಜೆಪಿ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ (Cabinet Expansion) ನಡೆಸಲು ಈಗಾಗಲೇ ಆರ್ ಎಸ್ ಎಸ್ (RSS) ಹಾಗೂ ಪಕ್ಷದ ವರಿಷ್ಟರು ಸಭೆಗಳನ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪುಟ ಸರ್ಜರಿ ನಡೆಸಲು ತೀರ್ಮಾನಿಸಲಾಗಿದೆಯಂತೆ. ಈ ಎಲ್ಲ ಮಾತುಗಳ ನಡುವೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಪುಟದಲ್ಲಿ ಮತ್ತೆ ಸ್ಥಾನ ಸಿಗುತ್ತಾ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. 


COMMERCIAL BREAK
SCROLL TO CONTINUE READING

ರಮೇಶ್ ಜಾರಕಿಹೊಳಿ-ಆರ್ ಎಸ್ ಎಸ್ ನಾಯಕರ ಭೇಟಿ: 


ಕಳೆದ ಒಂದು ತಿಂಗಳಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಅವರ ಬಹಿರಂಗ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಆರ್ ಎಸ್ ಎಸ್ ನಾಯರಕರ ಭೇಟಿ ಮಾಡಿದ್ದಾರಂತೆ. ಅಲ್ಲದೆ ಈ ವೇಳೆ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 


ಇದನ್ನೂ ಓದಿ: Milk Price : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಂದಿನ ಹಾಲಿನ ದರ ₹3 ಏರಿಕೆಗೆ KMF ಚಿಂತನೆ


ಆರ್ ಎಸ್ ಎಸ್ ಉತ್ತರ ಪ್ರಾಂತದ ಪ್ರಮುಖ್‌ ಅರವಿಂದರಾವ್‌ ದೇಶಪಾಂಡೆ ಜತೆ ಒಂದು ಗಂಟೆಗೂ ಅಧಿಕ ಕಾಲ ಜಾರಕಿಹೊಳಿ ಚರ್ಚೆ ನಡೆಸಿದ್ದಾರಂತೆ. ಸಂಪುಟ ವಿಸ್ತರಣೆಯ ವೇಳೆ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಹೈಕಮಾಂಡ್‌ಗೆ ತಿಳಿಸುವಂತೆ ಮನವಿ ಮಾಡಿದ್ದಾರಂತೆ. ಜಲ ಸಂಪನ್ಮೂಲ ಖಾತೆಯನ್ನೇ ಮತ್ತೆ ನೀಡಬೇಕು ಎಂಬ ಬೇಡಿಕೆಯನ್ನ ಸಹ ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.


ಹಿರಿಯರಿಗೆ ಗೇಟ್ ಪಾಸ್! ಪಕ್ಷ ಸಂಘಟನೆಯತ್ತ ಚಿತ್ತ?


ಇನ್ನೇನು ಒಂದು ವರ್ಷದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಬರಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಮಲ ಅರಳಿಸಲೇ ಬೇಕು ಎಂಬ ಗುರಿಯಿಂದ ಕೇಸರಿ ಪಾಳಯದಲ್ಲಿ ಹತ್ತು ಹಲವು ತಂತ್ರಗಳನ್ನು ಹೆಣೆಯಲಾಗುತ್ತಿದೆ. ಕೆಲ ಹಿರಿಯ ನಾಯಕರನ್ನ ಸಚಿವ ಸಂಪುಟದಿಂದ ದೂರವಿಟ್ಟು ಪಕ್ಷ ಸಂಘಟನೆ ಕಾರ್ಯಗಳಿಗೆ ಬಳಸಿಕೊಳ್ಳುವ ಯೋಜನೆಗಳನ್ನು ದೆಹಲಿಯ ಹೈಕಮಾಂಡ್ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. 


ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ (KS Eshwarappa) ಹಾಗೂ ಗೋವಿಂದ್ ಕಾರಜೋಳ (Govind Karajol) ಹೆಸರುಗಳು ಬಿಜೆಪಿ ಪಾಳಯದಲ್ಲಿ ಬಲವಾಗಿ ಕೇಳಿಬಂದಿದ್ದು, ಉಭಯ ನಾಯಕರನ್ನ ಪಕ್ಷ ಸಂಘಟನೆ ಹಾಗೂ 2023 ರ ಚುನಾವಣೆ ಸಿದ್ಧತೆಗೆ ಬಳಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಯಾರಿಗೆ ಒಲಿಯುತ್ತೆ ಬೆಂಗಳೂರು ಉಸ್ತುವಾರಿ?


ಇನ್ನು ಬಿಬಿಎಂಪಿ ಚುನಾವಣೆ (BBMP Election) ಹೊಸ್ತಿಲಲ್ಲಿ ಇದೆ, ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದ ನಂತರ ಪಾಲಿಕೆ ಚುನಾವಣೆ ಘೋಷಣೆ ಆಗಲಿದೆ. ಬೆಂಗಳೂರು ಉಸ್ತುವಾರಿ ಸ್ಥಾನ ಈ ಸದ್ಯ ಮುಖ್ಯಮಂತ್ರಿ ಬಳಿ ಇದೆ, ಚುನಾವಣೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಈ ವಿಸ್ತರಣೆಯಲ್ಲಿ ಬೆಂಗಳೂರು ಶಾಸಕರಿಗೆ ನೀಡುತ್ತಾರ ಎಂಬ ಲೆಕ್ಕಾಚಾರ ಪ್ರಾರಂಭವಾಗಿದೆ.


ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ನಡುವೆ ಬೆಂಗಳೂರು ಉಸ್ತುವಾರಿಗಾಗಿ ತ್ರಿಕೋನ ಪೈಪೋಟಿ ನಡೆಯುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸದ್ಯ ರಾಮನಗರ ಉಸ್ತುವಾರಿ ಹಾಗೂ ಡಿ.ಕೆ.ಸಹೋದರ ಜತೆ ವಾಗ್ದಾಳಿಯಲ್ಲಿ ಬ್ಯುಸಿ ಆಗಿರುವ ಸಚಿವ ಅಶ್ವತ್ಥನಾರಾಯಣ ಈ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರಂತೆ.


ಶಾಸಕ ರೇಣುಕಾಚಾರ್ಯ ಅಸಮಾಧಾನ:


ಹೊನ್ನಾಳಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ (Renukacharya) ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನನಗೆ ಬಂದ್ಯಾ ಪುಟ್ಟ ಹೋದ್ಯಾ ಪುಟ್ಟ ಎಂದಂತಿದೆ. ಈ ಸ್ಥಾನ‌ ನನಗೆ ಅವಶ್ಯಕತೆ ಇಲ್ಲ, ಚೇಂಬರ್ ಮತ್ತು ಚೇರು ಬಿಟ್ರೆ ಏನು ಇಲ್ಲ. ಇದರಲ್ಲಿ ಕೆಲಸ ಮಾಡೋದು ಏನು ಇಲ್ಲ. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಗಿಂತ ನನಗೆ ಶಾಸಕನಾಗೇ ಇರುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆ ರೇಣುಕಾಚಾರ್ಯರ ಕೋಪ ಕಡಿಮೆ ಮಾಡಲು ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. 


ಇದನ್ನೂ ಓದಿ: Republic Day 2022: ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿದ್ದಕ್ಕೆ ಎಚ್​​ಡಿಕೆ ಆಕ್ರೋಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.