ಸಂಪುಟ ಕುಸ್ತಿ: ಮಂತ್ರಿ ಸ್ಥಾನಕ್ಕಾಗಿ ಕೇಸರಿ ಕಲಿಗಳ ಲಾಬಿ, ಸಿಎಂ ನಿವಾಸಕ್ಕೆ ದೌಡು
ಮಂತ್ರಿ ಸ್ಥಾನಕ್ಕಾಗಿ ನಾ ಮುಂದು ತಾ ಮುಂದು ಎಂಬಂತೆ ಕೇಸರಿ ಕಲಿಗಳ ಲಾಬಿ
ಬೆಂಗಳೂರು: ಸಚಿವ ಸಂಪುಟ ರಚನೆ(Cabinet Expansion)ಗೆ ಮುಹೂರ್ತ ಫಿಕ್ಸ್ ಆಗೋ ಮುನ್ನವೇ ಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಶಾಸಕರು ಟವಲ್ ಹಾಕುತ್ತಿದ್ದಾರೆ. ಹೇಗಾದರೂ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲೇಬೇಕೆಂದು ಶಾಸಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ದೆಹಲಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಪಸ್ ಆಗುತ್ತಿದ್ದಂತೆ, ಅವರ ಭೇಟಿಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಬರುತ್ತಿದ್ದಾರೆ.
ಭಾನುವಾರ ಬೆಳ್ಳಂಬೆಳ್ಳಗ್ಗೆಯೇ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಸಿಎಂ ಬೊಮ್ಮಾಯಿ(Basavaraj Bommai)ನಿವಾಸಕ್ಕೆ ಸಚಿವಾಕಾಂಕ್ಷಿಗಳ ದಂಡೇ ಆಗಮಿಸಿತ್ತು. ಮಂತ್ರಿ ಸ್ಥಾನಕ್ಕಾಗಿ ನಾ ಮುಂದು ತಾ ಮುಂದು ಎಂಬಂತೆ ಕೇಸರಿ ಕಲಿಗಳು ಲಾಬಿ ನಡೆಸುತ್ತಿದ್ದಾರೆ. ಸಿಎಂ ಭೇಟಿ ಮಾಡಿ ನಮಗೂ ಮಂತ್ರಿ ಸ್ಥಾನ ನೀಡುವಂತೆ ಅನೇಕರು ಮನವಿ ಮಾಡಿದ್ದಾರೆ. ದೇವದುರ್ಗದ ಶಾಸಕ ಶಿವನಗೌಡ ನಾಯಕ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಮಾಜಿ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ, ಎನ್.ಆರ್.ಸಂತೋಷ್ ಸೇರಿದಂತೆ ಅನೇಕರ ಸಿಎಂ ಮನೆಗೆ ಆಗಮಿಸಿದ್ದರು.
ಇದನ್ನೂ ಓದಿ: JDS ಬಲಿಷ್ಠ ಪಕ್ಷವೆಂದ ಅನಂತ್ ಕುಮಾರ್ ಪುತ್ರಿ: ವ್ಯಾಪಕ ಚರ್ಚೆಗೆ ಕಾರಣವಾಯ್ತು ಟ್ವೀಟ್..!
ಮತ್ತೆ ಮಂತ್ರಿಯಾಗಲು ಮಾಜಿ ಸಚಿವರ ಲಾಬಿ
ಮಂತ್ರಿಗಿರಿಗಾಗಿ ಬಿಜೆಪಿ ಶಾಸಕರ ನಡುವೆ ಭರ್ಜರಿ ಪೈಪೋಟಿ ನಡೆಯಯುತ್ತಿದೆ. ಈ ಹಿನ್ನೆಲೆ ಸಚಿವಾಕಾಂಕ್ಷಿಗಳು ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಬೆನ್ನುಬಿದ್ದಿದ್ದಾರೆ. ಮತ್ತೆ ಮಂತ್ರಿಯಾಗಲು ಮಾಜಿ ಸಚಿವರೂ ಕೂಡ ಲಾಬಿ ನಡೆಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಭೇಟಿ ಮಾಡಿ ಮಾಜಿ ಸಚಿವರು ಕೂಡ ಮನವಿ ಸಲ್ಲಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಬಿ.ಸಿ.ಪಾಟೀಲ್, ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಅನೇಕರು ಸಿಎಂ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ನೂತನ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ನೀಡಿದ ಸಲಹೆ ಏನು ಗೊತ್ತಾ..?
ಮಂತ್ರಿಯಾದ ಮೇಲೆ ನೋಡೋಣವೆಂದ ಬಿ.ಸಿ.ಪಾಟೀಲ್
ಮಂತ್ರಿಸ್ಥಾನಕ್ಕಾಗಿ ಲಾಬಿ ನಡೆಸಲು ಭಾನುವಾರ ಸಿಎಂ ಬೊಮ್ಮಾಯಿ ನಿವಾಸಕ್ಕೆ ಶಾಸಕರ ದಂಡೇ ಆಗಮಿಸಿತ್ತು. ಮಾಜಿ ಸಚಿವ ಬಿ.ಸಿ.ಪಾಟೀಲ್(BC Patil) ಕೂಡ ಬಂದಿದ್ದರು. ಈ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವ ಸ್ಥಾನದ ಬಗ್ಗೆ ನಾನು ಸಿಎಂ ಜೊತೆ ಚರ್ಚೆ ಮಾಡಿಯೇ ಇಲ್ಲ. ನನಗೇನೂ ಗೊತ್ತಿಲ್ಲ. ಮಂತ್ರಿಯಾದ ಮೇಲೆ ನೋಡೋಣ, ಮುಂದೆ ಏನಾಗುತ್ತೆ ಅನ್ನೋದನ್ನು ನೋಡಿಕೊಂಡು ವಿಚಾರ ಮಾಡೋಣ’ ಅಂತಾ ಹೇಳಿದ್ದಾರೆ.
ಯಾರಿಗೆ ಸಿಗುತ್ತೆ ಮಂತ್ರಿ ಸ್ಥಾನ..?
ರಾಜ್ಯದ ನೂತನ ಸಚಿವ ಸಂಪುಟ(Karnataka Cabinet Expansion)ದಲ್ಲಿ ಯಾರ್ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬುದರ ಬಗ್ಗೆ ಭಾರೀ ಕುತೂಹಲ ಮೂಡಿದೆ. ಈಗಾಗಲೇ ಶಾಸಕರು, ಮಾಜಿ ಸಚಿವರು ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದು, ತಮ್ಮನ್ನು ಪರಿಗಣಿಸುವಂತೆ ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ವಲಸೆ ಪಕ್ಷದ ಶಾಸಕರು ಕೂಡ ಮುಂದೆನಾಗಬಹುದು ಎಂದು ಬಕಬಕ್ಷಿಯಂತೆ ಕಾಯುತ್ತಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಮಂತ್ರಿ ಭಾಗ್ಯ ಒಲಿಯುತ್ತದೆ ಎಂಬುದು ಮಾತ್ರ ಗುಟ್ಟಾಗಿದೆ. ಈ ಮಧ್ಯೆ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಚರ್ಚಿಸಿದ್ದಾರೆಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.