ಬೆಂಗಳೂರು: ಆರ್ ಆರ್ ನಗರ, ಶಿರಾ ಉಪ ಚುನಾವಣೆಯ (By election) ಕಾವು ಜೋರಾಗಿದೆ. ಇಂದು ಚುನಾವಣ ಬಹಿರಂಗ ಪ್ರಚಾರಕ್ಕೆ (Campaign) ತೆರೆ ಬೀಳಲಿದೆ.


COMMERCIAL BREAK
SCROLL TO CONTINUE READING

ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮೂರೂ ಪಕ್ಷಗಳಿಗೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿರುವುದರಿಂದ ಕೊನೆಯ ದಿನವಾದ ಇಂದು ಎಲ್ಲಾ ಪಕ್ಷಗಳು ಅಬ್ಬರ ಪ್ರಚಾರ ನಡೆಸುತ್ತಿದೆ.ಇಂದು ಸಂಜೆಯ ನಂತರ ಮನೆ ಮನೆ ಪ್ರಚಾರ ಆರಂಭವಾಗಲಿದೆ. ಆದರೆ ಈ ಬಾರಿ ಮನೆ ಮನೆ ಪ್ರಚಾರದ ವೇಳೆ ಅಭ್ಯರ್ಥಿಯ ಜೊತೆ ಮೂರರಿಂದ ನಾಲ್ಕು ಜನ ಮಾತ್ರ ಭಾಗವಹಿಸಬಹುದು. 


ಶಿರಾ ಚುನಾವಣಾ ಪ್ರಚಾರ ಅಖಾಡಕ್ಕೆ ಸಿಎಂ ಯಡಿಯೂರಪ್ಪ: ಮಾದಲೂರಿನಿಂದ ಬಿಎಸ್ ವೈ ಮತಬೇಟೆ


ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುನಿರತ್ನ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ ಕುಸುಮಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಜೆಡಿಎಸ್ ನಿಂದ ವಿ ಕೃಷ್ಣ ಮೂರ್ತಿ ಸ್ಪರ್ಧೆಗಿಳಿದಿದ್ದಾರೆ.ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ, ಬಿಜೆಪಿ ಉಮೇದುದಾರರಾಗಿ ಡಾ. ರಾಜೆಶ್ ಗೌಡ ಮತ್ತು ಜೆಡೆಸ್ ನಿಂದ ಅಮ್ಮಾಜಮ್ಮಾ ಕಣದಲ್ಲಿದ್ದಾರೆ.  


ಉಪಚುನಾವಣೆಯ ಗೆಲುವನ್ನು ಸವಾಲಾಗಿ ಸ್ವೀಕರಿಸಿರುವ ಮೂರೂ ಪಕ್ಷಗಳು ಇಲ್ಲಿವರೆಗೆ ಎರಡೂ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರವನ್ನೇ ನಡೆಸಿತ್ತು. ನ. 3ರಂದು ಚುನಾವಣೆ ನಡೆಯಲಿದೆ. ನ. 10ರಂದು ಮತ ಎಣಿಕೆ ನಡೆಯಲಿದೆ.


ನವೆಂಬರ್ 3ರಂದು ಎರಡು ಕ್ಷೇತ್ರಗಳಲ್ಲಿ ಮತದಾನ (voting) ನಡೆಯಲಿದ್ದು, ನ. 10ರಂದು ಫಲಿತಾಂಶ (Counting)ಹೊರಬರಲಿದೆ. ಇದೇ ವೇಳೆ ನ. 2 ರಂದು ನಡೆಯಬೇಕಿದ್ದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆಯನ್ನು ಉಪಚುನಾವಣೆಯ ಹಿನ್ನೆಲೆಯಲ್ಲಿ  ಮುಂದೂಡಲಾಗಿದೆ. ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಕೂಡಾ ನ. 10ರಂದು ನಡೆಯಲಿದೆ. ವಿಧಾನ ಪರಿಷತ್ ನ 2 ಪದವಿಧರ ಕ್ಷೇತ್ರ ಮತ್ತು 2 ಶಿಕ್ಷಕರ ಕ್ಷೇತ್ರ ಸೇರಿ ನಾಲ್ಕು ಕ್ಷೇತ್ರಗಳಿಗೆ ಅ.  28ರಂದು ಮತದಾನ ನಡೆದಿತ್ತು.