ಬೆಂಗಳೂರು: 'ನಳಿನ್ ಕುಮಾರ್ ಕಟೀಲ್ ಫಾರ್ ದಕ್ಷಿಣ ಕನ್ನಡ' ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಬಿಜೆಪಿ ಹಾಲಿ ಸಂಸದ ಕಟೀಲ್ ಅವರು ಮತ್ತೊಮ್ಮೆ ಸಂಸದರಾಗಬೇಕು ಎಂಬ ಕೂಗು ಕೇಳಿಬರುತ್ತಿದೆ.


COMMERCIAL BREAK
SCROLL TO CONTINUE READING

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅಭಿಮಾನಿಗಳು #NalinKumarForDakshinaKannada ಹ್ಯಾಷ್‌ಟ್ಯಾಗ್‌ನಡಿ ಟ್ವಿಟ್ಟರ್‌ ಅಭಿಯಾನ ಆರಂಭಿಸಿದ್ದಾರೆ. ಕಟೀಲು ಅವರ ಸಾಧನೆ, ಅಭಿವೃದ್ಧಿ ಮತ್ತು ವ್ಯಕ್ತಿತ್ವದ ಕುರಿತಾಗಿ ಟ್ವೀಟ್‌ಗಳ ಮೇಲೆ ಟ್ವೀಟ್‌ ಪೋಸ್ಟ್‌ ಮಾಡಿದ್ದಾರೆ. ಅದು ಟ್ವಿಟ್ಟರ್‌ ಟ್ರೆಂಡಿಂಗ್‌ ವಿಶೇಷವಾಗಿದೆ.  


ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಅವರಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡುವುದು ನಿಶ್ಚಿತವಾಗಿದ್ದು, ಅವರು ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಲಿದ್ದಾರೆ ಎಂಬುದು ಅವರ ಅಭಿಮಾನಿಗಳ ನಿರೀಕ್ಷೆ ಮತ್ತು ಕಾತರವಾಗಿದೆ. 


ಇದನ್ನೂ ಓದಿ: ಲಕ್ಷ್ಮಣ ಸವದಿಗೆ ಸದ್ಯದಲ್ಲೇ ಒಳ್ಳೆ ಭವಿಷ್ಯ ಇದೆ: ಸಿಎಂ ಸಿದ್ರಾ ಭರವಸೆ 


ʻಉರಿಯೋರು ಭೂದಿಯಾಗ್ತಾರೆ, ಕುದಿಯೋರು ಆವಿಯಾಗ್ತಾರೆ. ಈ ಬಾರಿಯೂ ನಮ್ಮಣ್ಣ ನಳಿನ್‌ ಕುಮಾರ್‌ ಅವರೇ ಗೆಲ್ತಾರೆʼ, ʻಚಾಲ್ತಿಲಿ ಇಲ್ಲದ ನಾಣ್ಯ ಶಬ್ಧ ಜಾಸ್ತಿ. ಯಾರು ಎಷ್ಟೇ ಬೊಬ್ಬೆ ಹಾಕಿದ್ರೂ ನಮ್ಮಣ್ಣ ನಳಿನ್‌ ಅವರೇ 2024ಕ್ಕೆ MP. ಬರೆದಿಟ್ಕೊಳಿʼ ʻ ನಮ್ಗಂತೂ ಯಾವ ಫ್ರೀ ಸ್ಕೀಮೂ ಸಿಗ್ಲಿಲ್ಲ. ಆದ್ರೆ ಈ MP ಎಲೆಕ್ಷನ್ ಲ್ಲಿ ನಮ್ಮ ನಳಿನ್‌ ಅಣ್ಣನ ಗೆಲುವು ಸಂಭ್ರಮಿಸೋಕೆ ನಾವೇ ಫ್ರೀ ಪಟಾಕಿ ಹಂಚ್ತೀವಿʼ, ʻ ಕರಿ ʻMoney’ ಮಾಲೀಕ ನೀವಲ್ಲಾ, ಸಂಘಟನೆಯ ಸಿದ್ಧಾಂತ ಬಿಟ್ಟಿಲ್ಲ.. ನಿಮ್ಮನ್ನು ಗೆಲ್ಲಿಸದಿದ್ರೆ ಆ ದೇವ್ರು ಖಂಡಿತ ಮೆಚ್ಚಲ್ಲ ಅಣ್ಣʼ ಅಂತೆಲ್ಲಾ ಟ್ವೀಟಿಸಿ ಅಭಿಮಾನಿಗಳು ಸಂಸದ ನಳಿನ್‌ ಕುಮಾರ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.  


ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡ ಹಾಗೂ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಟ್ಯಾಗ್  ಮಾಡುವ ಮೂಲಕ ಈ ಬಾರಿಯೂ ನಳಿನ್‌ ಅವರನ್ನೇ ಅಭ್ಯರ್ಥಿಯಾಗಿ ಮಾಡಬೇಕೆಂದು  ಕೇಂದ್ರದ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ಅಭಿವೃದ್ಧಿ ನೋಡಿ ಬಿಜೆಪಿಯವರಿಗೆ ಭ್ರಮನಿರಸನವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.