ನಾನು ಹಣದ ಗಿಡ ನೆಟ್ಟಿಲ್ಲ...! ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
ರೈತರ ಖಾತೆಗೆ ರಾತ್ರೋ ರಾತ್ರಿ ಹಣ ಹಾಕುವುದಕ್ಕೆ ಸಾಧ್ಯವಿಲ್ಲ.
ಬೆಂಗಳೂರು: ನಾನು ಹಣದ ಗಿಡ ನೆಟ್ಟಿಲ್ಲ. ನನ್ನ ಕಷ್ಟ ನನಗೇ ಗೊತ್ತು ಎಂದು ಮತ್ತೊಮ್ಮೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಾವು ಎದುರಿಸುತ್ತಿರುವ ಕಷ್ಟದ ಬಗ್ಗೆ ಜನತೆ ಮುಂದೆ ಹೇಳಿಕೊಂಡಿದ್ದಾರೆ.
ಇಂದು ನಡೆದ ಆದಿವಾಸಿಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಆ ಸಮಯದಲ್ಲಿ ರೈತರ ಸಾಲ ಮನ್ನಾ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದು, ರೈತರ ಸಾಲ ಮನ್ನ ವಿಚಾರವನ್ನು ನಾನು ಮರೆತಿಲ್ಲ. ರೈತರ ಖಾತೆಗೆ ರಾತ್ರೋರಾತ್ರಿ ಹಣ ಹಾಕುವುದಕ್ಕೆ ಸಾಧ್ಯವಿಲ್ಲ. ನಾನು ಹಣದ ಗಿಡ ನೆಟ್ಟಿಲ್ಲ, ನನ್ನ ನೋವು ಯಾರಿಗೂ ಹೇಳಿಕೊಳ್ಳುವಂತಿಲ್ಲ ಎಂದಿದ್ದಾರೆ.