ಬೆಂಗಳೂರು:  ಸಿಲಿಕಾನ್‌ ಸಿಟಿಯಲ್ಲಿ ಇಂದು ದಿಢಿರನೆ ಸುರಿದ ಮಳೆಗೆ ನೀರಿನಲ್ಲಿ ಕಾರೊಂದು ಮುಳುಗಿದ  ಘಟನೆ  ಕೆ ಆರ್ ಸರ್ಕಲ್ ಅಂಡರ್ ಪಾಸ್ ಬಳಿ ನಡೆದಿದೆ. ಕಬ್ಬನ್ ಪಾರ್ಕ್ ನೋಡಲೆಂದು ಬಂದಿದ್ದ  ಆರು ಜನರ ಕುಟುಂಬವೊಂದು ಮಳೆಗೆ ಸಿಲುಕಿದೆ. ಆಂಧ್ರಪ್ರದೇಶದಿಂದ ಕಬ್ಬನ್ ಪಾರ್ಕ್ ನೋಡಲು ಬಂದಿದ್ದ ವೇಳೆ ಏಕಾಏಕಿ ಮಳೆ ಸುರಿದಿದ ಪರಿಣಾಮ ಘಟನೆ ಸಂಭವಿಸಿದೆ.  ಏಕಾಏಕಿ ಮಳೆಗೆಅಂಡರ್ ಪಾಸ್ ನ ನೀರಿನ ಮಟ್ಟ ಹೆಚ್ಚಾದ ಆದ ಪರಿಣಾಮ ಕಾರನ್ನು ಹಿಂತೆಗೆಯಲಾಗದೇ ಒದ್ದಾಡಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: DK Shivakumar : ನೊಣವಿನಕೆರೆ ಅಜ್ಜಯ್ಯನ ಮಠದತ್ತ ಡಿಕೆಶಿ ಪ್ರಯಾಣ; ಕೆಟ್ಟು ನಿಂತ ಎಸ್ಕಾಟ್ ವಾಹನ


ನೀರಿನ ಮಟ್ಟ ಹೆಚ್ಚಿದ್ದರಿಂದ ಜೋರಾಗಿ ಕಿರುಚಾಡಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳಿಯರು ಸಹಾಯಕ್ಕೆ ಮುಂದಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳವರು ಅಲ್ಲಿಗೆ ಆಗಮಿಸಿದ್ದಾರೆ ಪ್ರವಾಸಕ್ಕೆ ಬಂದ ಆಂಧ್ರಮೂಲದ ಜನರನ್ನು ರಕ್ಷಿಸುವಲ್ಲಿ ಪಣ ತೊಟ್ಟಿದ್ದಾರೆ.


ಇದನ್ನೂ ಓದಿ: Rajiv Gandhi Death Anniversary: ರಾಜೀವ್ ಗಾಂಧಿ ಪುಣ್ಯಸ್ಮರಣೆ, ಗೌರವ ಸಲ್ಲಿಸಿದ ಸಿಎಂ & ಡಿಸಿಎಂ


ಸೀರೆ ಕೆಳಗಡೆ ಬಿಟ್ಟು ನೀರಿನಲ್ಲಿ ಸಿಲುಕಿದ್ದವರನ್ನ ಮೇಲೆತ್ತಲು ಹರಸಾಹಸ  ಮಾಡಿ ಕಾರಿನಿಂದ  ಹೊರ ತೆಗೆಯಲಾಗಿದೆ. ಆದರೆ ಕುಟುಂಬದ ಜೊತೆ ಇದ್ದ ಪುಟ್ಟ ಮಗುವೊಂದು ಕಾಣೆಯಾದ ಹಿನ್ನಲೆ ಮಗುವಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಘಟನೆ ಹಿನ್ನಲೆ ಮಗು ಕಾಣದಿದ್ದನ್ನು ಕಂಡು ಕುಟುಂಬ ಆತಂಕಕ್ಕಿಡಾಗಿದ್ದಾರೆ.  ರಕ್ಷಣೆ ಮಾಡಿರೋರನ್ನ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ