ಗಂಗಾವತಿ: ನವೆಂಬರ್ 4.2021 ರಂದು ಗಂಗಾವತಿ ನಗರದ ಪಾಡಗುತ್ತಿ ಕಲ್ಯಾಣ ಮಂಟಪದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆಯನ್ನು ಮಾಡಿದ ತಂದೆ, ತಾಯಿ, ವರ ಮತ್ತು ವರನ ತಂದೆ, ತಾಯಿಗಳು ಹಾಗೂ ವಿವಾಹಕ್ಕೆ ಅವಕಾಶ ನೀಡಿದ ಪಾಡಗುತ್ತಿ ಕಲ್ಯಾಣ ಮಂಟಪದ ವ್ಯವಸ್ಥಾಪಕರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ದಿನಾಂಕ: 11.01.2022ರಂದು ಪ್ರಕರಣ ದಾಖಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಾರ್ಡ್ ಹುದ್ದೆಗೆ ಟ್ರೇನ್ ಮ್ಯಾನೇಜರ್ ಎಂದು ಮರುನಾಮಕರಣ ಮಾಡಿದ ಭಾರತೀಯ ರೈಲ್ವೇ


ಈ ರೀತಿಯ ಕೃತ್ಯಕ್ಕೆ ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ-2006)ಕಾಯ್ದೆ-2016ರಡಿಯಲ್ಲಿ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.ಬಾಲ್ಯವಿವಾಹದಿಂದ ಮಕ್ಕಳ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿತು, ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ಸರಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೊಳಿಸಿದೆ.


ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಕರ್ನಾಟಕ ಸರಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006ಕ್ಕೆ ಕರ್ನಾಟಕ ತಿದ್ದುಪಡಿ-2016ರಲ್ಲಿ ತಿದ್ದುಪಡಿಯನ್ನು ತಂದಿದೆ. ಈ ತಿದ್ದುಪಡಿಯು ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ.


ಇದನ್ನೂ ಓದಿ-Booster Dose Guideline: ಇಂದಿನಿಂದ ಇಡೀ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ಲಭ್ಯ, ಈ ಪ್ರಮುಖ ನಿಯಮಗಳನ್ನು ತಿಳಿಯಿರಿ


ತಿದ್ದುಪಡಿಯನ್ವಯ ದಿನಾಂಕ:03.03.2018ರಿAದ ರಾಜ್ಯದಲ್ಲಿ ನಡೆಯುವ ಎಲ್ಲಾ ಬಾಲ್ಯವಿವಾಹಗಳು ಅಸಿಂಧು ವಿವಾಹವಾಗಿರುತ್ತವೆ.ಈ ಬಾಲ್ಯವಿವಾಹಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆಯಿರುವುದಿಲ್ಲ.ಇದರಿಂದ ಬಾಲಕಿಗೆ ಲಭ್ಯವಾಗಬೇಕಾದ ಸೇವೆಗಳು, ಅವಕಾಶಗಳಿಂದ ಬಾಲಕಿಯು ವಂಚಿತಳಾಗುತ್ತಾಳೆ.ಅಲ್ಲದೇ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಪುರುಷನಿಗೆ, ಬಾಲ್ಯವಿವಾಹಕ್ಕೆ ಸಹಕಾರ, ಪ್ರೋತ್ಸಾಹ ನೀಡಿದವರು, ಭಾಗವಹಿಸಿದವರಿಗೂ ಸಹ ಕನಿಷ್ಠ 01 ವರ್ಷದಿಂದ 02 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.


ಆದ್ದರಿಂದ ಕಲ್ಯಾಣ ಮಂಟಪಗಳ ಮಾಲೀಕರುಗಳಿಗೆ, ಸಾಮೂಹಿಕ ವಿವಾಹ ಆಯೋಜಕರಿಗೆ, ದೇವಸ್ಥಾನಗಳ ಆಡಳಿತ ಮಂಡಳಿಗಳ ಮುಖ್ಯಸ್ಥರುಗಳಿಗೆ ಸೂಚಿಸುವುದೆನೇಂದರೆ, ನಿಮ್ಮ ಪ್ರದೇಶ/ವ್ಯಾಪ್ತಿಯಲ್ಲಿ ಬಾಲ್ಯವಿವಾಹಕ್ಕೆ ಆಸ್ಪದ ನೀಡಬೇಡಿ, ನೀಡಿದಲ್ಲಿ ಕಾನೂನು ರೀತ್ಯಾ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.