ಬೆಂಗಳೂರು: ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಮತ್ತು ಅದರಲ್ಲಿ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುವುದು ಕಾಂಗ್ರೆಸ್ ಪಕ್ಷದ ಜನ್ಮತಃ ಗುಣವೆಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಈಗ ನಡೆಯುತ್ತಿರುವ ಕಾವೇರಿ ವಿಚಾರದಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತಾಸಕ್ತಿಯತ್ತ ಗಮನ ಹರಿಸದೆ, ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡಿ, ಆ ತಪ್ಪುಗಳನ್ನು ಬೇರೆಯವರ ಮೇಲೆ ಹೊರಿಸುವ ಸಣ್ಣತನದ ರಾಜಕೀಯವನ್ನು ಮಾಡುತ್ತಿದೆ’ ಎಂದು ಕುಟುಕಿದೆ.


COMMERCIAL BREAK
SCROLL TO CONTINUE READING

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಂಡಿಸದೆ ಅನೇಕ ವಿಷಯಗಳನ್ನು ಉದ್ದೇಶಪೂರ್ವಕವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ. ರಾಜ್ಯದಲ್ಲಿ 103 ವರ್ಷಗಳ ಬಳಿಕ ಅತ್ಯಂತ ಭೀಕರ ಬರ ಬಂದಿದ್ದು, ಕಾವೇರಿ ಕೊಳ್ಳದ 34 ತಾಲೂಕುಗಳಲ್ಲಿ 32 ತಾಲೂಕುಗಳು ಅತಿಹೆಚ್ಚು ಬರಪೀಡಿತವಾಗಿವೆ ಎಂಬುದನ್ನು ರಾಜ್ಯ ಸರ್ಕಾರವೇ ಹೇಳಿದೆ. ರಾಜ್ಯದಲ್ಲಿ ಈ ಬಾರಿ ಶೇ.60ಕ್ಕಿಂತಲೂ ಜಾಸ್ತಿ ಮಳೆ ಕೊರತೆಯಾಗಿದೆ. ಕಾವೇರಿ ಕೊಳ್ಳದಲ್ಲಿ ರಾಜ್ಯದ ಬೇಡಿಕೆ ಪ್ರಮಾಣ ಒಟ್ಟು 106 ಟಿಎಂಸಿ. ಆದರೆ ಈ ಬಾರಿ ಶೇಖರಣೆಯಾಗಿರುವುದು ಕೇವಲ 50 ಟಿಎಂಸಿ ನೀರು ಮಾತ್ರ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.


ಕರ್ನಾಟಕ ಬಂದ್, ರೂಪ್ಸಾ ನೈತಿಕ ಬೆಂಬಲ, ಜೀ ಕನ್ನಡ ನ್ಯೂಸ್,


ನಾಳೆ ಸಿಲಿಕಾನ್ ಸಿಟಿಯಲ್ಲಿ ಓಲಾ ಉಬರ್ ಓಡಾಟ ಇಲ್ಲ


‘ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಬರಲೆಂದು ಹಗಲು-ರಾತ್ರಿ ತನು-ಮನ-ಧನ ಅರ್ಪಿಸಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯರವರು ಮತ್ತು ಡಿ.ಕೆ.ಶಿವಕುಮಾರ್‌ರವರು, ಇನ್ನು 15 ದಿನದೊಳಗೆ ತಮಿಳುನಾಡು ಸರ್ಕಾರದ ವತಿಯಿಂದ ಮೇಕೆದಾಟು ಯೋಜನೆಗೆ ನಿರಪೇಕ್ಷಣಾ ಅರ್ಜಿಯನ್ನು ಸಲ್ಲಿಸಲು ಸ್ಟಾಲಿನ್‌ ಅವರ ಮನವೊಲಿಸಲಿ. ಈ ಮೂಲಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಇರುವ ದೊಡ್ಡ ಅಡೆತಡೆಯೊಂದನ್ನು ಇತ್ಯರ್ಥಗೊಳಿಸಲಿ. ಈ ಕೆಲಸ ಸಿದ್ದರಾಮಯ್ಯರವರು ಮತ್ತು ಡಿ.ಕೆ.ಶಿವಕುಮಾರ್‌ರವರಿಂದ ಮಾತ್ರ ಸಾಧ್ಯ. ಹೇಗಿದ್ದರೂ ಸದ್ಯ ಸಿದ್ದರಾಮಯ್ಯರವರು, ಡಿ.ಕೆ.ಶಿವಕುಮಾರ್‌ರವರು ಮತ್ತು ಸ್ಟಾಲಿನ್‌ರವರು ಒಂದೇ ಬಳ್ಳಿಯ ಹೂಗಳಂತೆ ಗಳಸ್ಯ-ಕಂಠಸ್ಯ ಸ್ನೇಹಿತರಾಗಿದ್ದಾರೆ. ಇವರ ಈ ಸ್ನೇಹ ಕೊಂಚವಾದರೂ ರಾಜ್ಯದ ಹಿತಕ್ಕೆ ಉಪಯೋಗವಾಗಲಿ. ನಾಡಿಗೆ ಒಳಿತಾಗುವ ಈ ಕೆಲಸಕ್ಕೆ ಕಾಂಗ್ರೆಸ್ ಮುಂದಾದರೆ, ಖಂಡಿತವಾಗಿ ಬಿಜೆಪಿ ‌ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಟ್ವೀಟ್ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.