ಕರ್ನಾಟಕಕ್ಕೇ ಒಂದಿಷ್ಟು ಖುಷಿ ತಂದ ಕಾವೇರಿ ತೀರ್ಪು!
ಕಾವೇರಿ ನ್ಯಾಯಾಧೀಕರಣ ಸದ್ಯಕ್ಕಿಲ್ಲ.
ಐತಿಹಾಸಿಕ ಕಾವೇರಿ ಹೋರಾಟಕ್ಕೆ ಕೊನೆಗೂ ಜಯ ದೊರೆತಿದ್ದು, ಕಾವೇರಿ ತೀರ್ಪು ಕರ್ನಾಟಕಕ್ಕೇ ಒಂದಿಷ್ಟು ಖುಷಿ ತಂದಿದೆ.
ಅದರ ಪ್ರಮುಖ ಅಂಶಗಳು-
* ಕರ್ನಾಟಕಕ್ಕೇ 14.75 ಟಿಎಂಸಿ ಹೆಚ್ಚುವರಿ ನೀರು.
* ಬೆಂಗಳೂರಿಗೆ ಹೆಚ್ಚುವರಿ ನೀರು.
* ತಮಿಳುನಾಡಿಗೆ ಹರಿಸುವ ನೀರಿನಲ್ಲಿ ಕಡಿತ.
* ಕರ್ನಾಟಕ ನೀರಾವರಿ ಪ್ರದೇಶಗಳನ್ನು ಹೆಚ್ಚಿಸಿಕೊಳ್ಳಬಹುದು.
* ತಮಿಳುನಾಡಿನ 20 ಟಿಎಂಸಿ ಅಂತರ್ಜಲವನ್ನು ಪರಿಗಣಿಸಿದ ಸುಪ್ರೀಂಕೋರ್ಟ್.
* ಕಾವೇರಿ ನ್ಯಾಯಾಧೀಕರಣ ಸದ್ಯಕ್ಕಿಲ್ಲ.
* ತೀರ್ಪಿನ ಬಗೆಗೆ ಅತೃಪ್ತಿ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶ.
ಕಾವೇರಿ ನದಿ ನೀರು ಹಂಚಿಕೆ ವಿವರ
ಹಿಂದೆ ನ್ಯಾಯಾಧೀಕರಣ ಹಂಚಿಕೆ ಮಾಡಿದ್ದ ನೀರಿನ ವಿವರ | ಈಗ ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ ನೀರಿನ ವಿವರ |
---|---|
ಕರ್ನಾಟಕ 270 ಟಿಎಂಸಿ | ಕರ್ನಾಟಕ 284.75 ಟಿಎಂಸಿ |
ತಮಿಳುನಾಡು 419 ಟಿಎಂಸಿ | ತಮಿಳುನಾಡು 404.25 ಟಿಎಂಸಿ |
ಕೇರಳ 30 ಟಿಎಂಸಿಸಿ | ಕೇರಳ 30 ಟಿಎಂಸಿಸಿ |
ಪುದುಚೆರಿ 7 ಟಿಎಂಸಿ | ಪುದುಚೆರಿ 7 ಟಿಎಂಸಿ |