ತಮಿಳುನಾಡಿಗೆ ಕಾವೇರಿ ನೀರು: ಕುಸಿದ KRS ಡ್ಯಾಂ ನೀರಿನ ಮಟ್ಟ!
KRS Water Level: ಮಳೆಯ ಕೊರತೆ ನಡುವೆ 113 ಅಡಿಗಳಷ್ಟು ಡ್ಯಾಂ ಭರ್ತಿಯಾಗಿತ್ತು. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ 113 ಅಡಿಯಿಂದ 100 ಅಡಿಗೆ ಇಳಿಕೆಯಾಗಿದೆ.
ಮಂಡ್ಯ: ರಾಜ್ಯದಲ್ಲಿ ಮಳೆಯ ಕೊರತೆ ಇದ್ದರೂ ಸಹ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿದೆ. ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಬಿಡುತ್ತಿರುವ ಹಿನ್ನೆಲೆ ಕೃಷ್ಣರಾಜಸಾಗರ ಅಣೆಕಟ್ಟಿನ(KRS Dam) ನೀರಿನ ಮಟ್ಟವು 100 ಅಡಿಗೆ ಕುಸಿತ ಕಂಡಿದೆ.
ಕಳೆದ 3 ದಿನಗಳಿಂದ ಪ್ರತಿನಿತ್ಯ ತಮಿಳುನಾಡಿಗೆ 5,000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಇದರಿಂದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತ ಕಂಡು 100 ಅಡಿಗೆ ತಲುಪಿದೆ. ಇದು ಹಳೇ ಮೈಸೂರು ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೆಲಸ ಸಿಗದ ಮಗ ಇದ್ದರೆ ಹೊರಗೆ ಹಾಕ್ತೀರಾ?
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಮಳೆಯ ಕೊರತೆ ನಡುವೆ 113 ಅಡಿಗಳಷ್ಟು ಡ್ಯಾಂ ಭರ್ತಿಯಾಗಿತ್ತು. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ 113 ಅಡಿಯಿಂದ 100 ಅಡಿಗೆ ಇಳಿಕೆಯಾಗಿದೆ.
ಡ್ಯಾಂನ ಮಟ್ಟ 100 ಅಡಿಗೆ ಇಳಿಕೆಯಾದರೂ ಸಹ ತಮಿಳುನಾಡಿಗೆ ಸರ್ಕಾರವು ನೀರು ಹರಿಸುತ್ತಿದೆ. ಡ್ಯಾಂ ನೀರಿನ ಮಟ್ಟ ಕುಸಿತದಿಂದ ಮುಂದಿನ ದಿನಗಳ ನೀರಿಗಾಗಿ ಹಾಹಾಕಾರ ಎದುರಾಗುವ ಆಂತಕ ಮೂಡಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಳೆಗಳು ಸೇರಿದತೆ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಮಂದಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: BJP vs BJP: 4 ಮತ ಸೆಳೆಯಲಾಗದ ಬಿ.ಎಲ್.ಸಂತೋಷ್ ಸಭೆ ನಡೆಸುವ ದುರ್ಗತಿ ಬಿಜೆಪಿಯದ್ದು!
KRS ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ: 124.80 ಅಡಿ
ನೀರಿನ ಮಟ್ಟ: 100 ಅಡಿ
ಒಳಹರಿವು : 1,610 ಕ್ಯೂಸೆಕ್ಸ್
ಹೊರಹರಿವು : 7,277 ಕ್ಯೂಸೆಕ್ಸ್
ಒಟ್ಟು ಸಂಗ್ರಹ : 23.571 TMC
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.