ಬೆಂಗಳೂರು: 2007 ರ ಬ್ಯಾಚಿನ ಕರ್ನಾಟಕದ ಐಎಎಸ್ ಕೇಡರ್ ಅನುರಾಗ್ ತಿವಾರಿ ಸಂಶಯಸ್ಪಾದ ಸಾವಿನ ತನಿಖೆ ಕೈಗೊಳ್ಳಲು ರಾಜ್ಯದ ಬೀದರ್ ಗೆ ಸಿಬಿಐ ತಂಡ ಆಗಮಿಸಿದೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ ಉತ್ತರಪ್ರದೇಶದ ಲಕ್ನೋದ ವಿಐಪಿ ಅತಿಥಿ ಗೃಹದಲ್ಲಿ ಸಂಶಯಾಸ್ಪದವಾಗಿ ಅವರು ಸಾವನ್ನಪ್ಪಿದ್ದರು. ಪೋಸ್ಟ್ ಮಾರ್ಟಮ್ ನ ವರದಿಯಂತೆ  ತಿವಾರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಯನ್ನು ನೀಡಲಾಗಿತ್ತು.


ತಿವಾರಿಯವರ ನಿಗೂಡ ಸಾವಿನ ನಂತರ ಅದರ ಕಾರಣಗಳನ್ನು ಪತ್ತೆ ಹಚ್ಚಲು ಸಿಬಿಐಗೆ ಅವರ ಕುಟುಂಬದ ಸದಸ್ಯರು ಒತ್ತಾಯಿಸಿದ್ದರು,ನಂತರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಯಿತು. ಇದರ ಭಾಗವಾಗಿ ಐಪಿಸಿ ಸೆಕ್ಷನ್  302 ರ ಅಡಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಲಕ್ನೌ ಪೊಲೀಸರು ಕೂಡ ಎಫ್ಐಆರ್ ದಾಖಲಿಸಿದ್ದರು.


ಈಗ ಅವರ ಸಾವಿಗೆ ಸಂಬಂಧಪಟ್ಟ ಕಾರಣಗಳನ್ನು ಕಂಡುಹಿಡಿಯಲು ಈಗ ಬೀದರ್ ಗೆ ಸಿಬಿಐ ತಂಡ ಆಗಮಿಸಿ ತನಿಖೆಯನ್ನು ಚುರುಕುಗೊಳಿಸಿದೆ.