ಬೆಂಗಳೂರು: ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ಟೆಲಿಕಾಂ ಕಂಪನಿಗಳ ಬೊಕ್ಕಸಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದ ಖತರ್ನಾಕ್ ಗ್ಯಾಂಗನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಡೆನಿಸ್,ಬಿಪಿನ್ ಸೇರಿ ಐವರು ಆರೋಪಿಗಳನ್ನ ಜೈಲಿಗಟ್ಟಲಾಗಿದ್ದು, ಇವರು SIP trunk line ಡಿವೈಸ್ ಇಟ್ಟುಕೊಂಡು ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ಕೋರಮಂಗಲದ ಬಿಜ್ ಹಬ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್ನ 1500 ಸಿಪ್ ಪೋರ್ಟಲ್ ಸಂಪರ್ಕ ಪಡೆದು 40 ದಿನಗಳಲ್ಲಿ ಒಟ್ಟು 68 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಯನ್ನು ಸ್ಥಳೀಯ ಕರೆಯಾಗಿ ಮಾರ್ಪಡಿಸಿದ್ದರು.


ಇದನ್ನೂ ಓದಿ:  ಬೆಂಗಳೂರು ʼಗಾಂಜಾ ನಗರಿʼಯಾಗಲು ಕಾಂಗ್ರೆಸ್‌ ಕಾರಣ


ಅಂತೆಯೇ ಮೈಕೋ ಲೇಔಟ್ನ ಆರ್ಚರ್ ಟೆಕ್ನಾಲಜಿಯಿಂದ 900 ಸಿಪ್ ಪೋರ್ಟಲ್ ಸಂಪರ್ಕ ಪಡೆದು 60 ದಿನಗಳಲ್ಲಿ ಬರೋಬ್ಬರಿ 24 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡಿದ್ದರು. ಟೈಮ್ ಇನ್ಫೋ ಟೆಕ್ನಾಲಜಿ ಎಂಬ ಕಂಪನಿ ತೆರೆದು ವಂಚಿಸಿದ್ದರು. ಇವರು ಬಳಸುತ್ತಿದ್ದ ಪಿಆರ್ ಐ ಡಿವೈಸ್ 1 ನಿಮಿಷಕ್ಕೆ ಲಕ್ಷಾಂತರ ಕಾಲ್ ಗಳನ್ನ ಇಂಟರ್ನ್ಯಾಷನಲ್ ಕಾಲ್ ಗಳನ್ನ ಲೋಕಲ್ ಕಾಲ್ ಗಳಾಗಿ ಪರಿವರ್ತಿಸುತ್ತಿತ್ತು.


ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ವಿಓಐಪಿ(ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್) ಕಾಲ್ ಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು. ಗಲ್ಫ್ ಕಂಟ್ರಿಗಳಲ್ಲಿ ಡೇಟಾ ಕಾಲನ್ನ ಬೇರೆ ಸರ್ವರ್ ಗೆ ಕಳುಹಿಸಿ ಇಂಟರ್ನೆಟ್ ಸಹಾಯದಿಂದ ಕಾಲ್ ಗಳನ್ನ ಕನ್ವರ್ಟ್ ಮಾಡುತ್ತಿದ್ದರು. ಟೂರಿಸಂ ಕಸ್ಟಮರ್ ಕೇರ್ ಮಾಡುತ್ತೇವೆ ಎಂದು  ಕಂಪನಿ ತೆರೆದು ವಂಚಿಸಿದ್ದ ಆರೋಪಿಗಳು ಸದ್ಯ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.