ಬೆಂಗಳೂರು: ಒಂದು ಕಡೆ ತಮ್ಮ ಬಳ್ಳಾರಿ ಭದ್ರಕೋಟೆ ಉಪಚುನಾವಣೆಯಲ್ಲಿ ಚಿದ್ರವಾಗಿರುವ ಚಿಂತೆಯಾದರೆ ಮತ್ತೊಂದೆಡೆ ಈಗ  ಮಾಜಿ ಸಚಿವ ಜನಾರ್ಧನ್ ರೆಡ್ಡಿಯವರಿಗೆ ಬಂಧನದ ಭೀತಿ ಎದುರಾಗಿದೆ. ಆಂಬಿಡೆಂಟ್ ಮಾರ್ಕೆಟಿಂಗ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಾಗಿ ಈಗ ರೆಡ್ಡಿಗೆ ಬಂಧನ ಭೀತಿ ಎದುರಾಗಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ಪೋಲಿಸರು ಈ ಪ್ರಕರಣದ ವಿಚಾರವಾಗಿ ಆಂಬಿಡೆಂಟ್ ಕಂಪನಿಯ ಮಾಲಿಕ್ ಫರೀದ್, ಬಿಲ್ಡರ್ ಬ್ರಿಜೇಶ್,ರಮೇಶ್ ಕೊಠಾರಿಸೇರಿ ಒಟ್ಟು ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.ಈಗಾಗಲೇ ಜನಾರ್ಧನ್ ರೆಡ್ಡಿಯವರ ಬಂಧಕ್ಕೆ ಬಲೆ ಬಿಸಿ ಅವರು ಇರುವ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಖಾಸಗಿ ವಾಹಿನಿಗಳ ಮೂಲಕ ತಿಳಿದು ಬಂದಿದೆ. 


ಸಿಸಿಬಿಯ ಹೆಚ್ಚುವರಿ ಪೋಲಿಸ್ ಆಯುಕ್ತ  ಆಲೋಕ್ ಅವರ ನೇತೃತ್ವದಲ್ಲಿ ಈಗ ರೆಡ್ಡಿ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.ಆದರೆ ಸುದ್ದಿ ಮೂಲಗಳ ಪ್ರಕಾರ ಜನಾರ್ಧನ್ ರೆಡ್ಡಿ  ಹೈದರಾಬಾದ್ ನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ನೋಟು ನಿಷೇಧ ವೇಳೆಯಲ್ಲಿ ಹಣದ ವಹಿವಾಟು ನಡೆಸಿದ ಆರೋಪ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಮೇಲಿದೆ.ಆಗ ಅವರು ನಿಷೇಧವಾಗಿದ್ದ ನೋಟುಗಳನ್ನು ಅವರು ಆಲಿಖಾನ್ ಎನ್ನುವವರ ಮೂಲಕ ವರ್ಗಾವಣೆ ಮಾಡಿದ್ದರು ಎನ್ನುವ ಆರೋಪ ಇದೆ ಈ ಹಿನ್ನಲೆಯಲ್ಲಿ ಈಗ ಪೊಲೀಸರು ಅವರ ಬಂಧನಕ್ಕೆ ಬಲೆ ಬಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಬೆಂಗಳೂರಿನ ಡಿಜೆ ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ನಂತರ ಈ ವಿಷಯ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ಬರುವುದೇ ತಡ ಅವರು ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಒಪ್ಪಿಸಿ ತನಿಖೆ ನಡೆಸಲು ಆಗ್ರಹಿಸಿದ್ದಾರೆ.