ಬೆಂಗಳೂರು : ರಮೇಶ್ ಜಾರಕಿಹೊಳಿ (Ramesh Jarakiholi) ಸಿ.ಡಿ ಪ್ರಕರಣಕ್ಕೆ (CD case) ಸಂಬಂಧಿಸಿದಂತೆ ಯುವತಿ ಇದೀಗ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರಕರಣದ ಬಗ್ಗೆ ಶುಕ್ರವಾರ ಮಧ್ಯಾಹ್ನ ಬೆಂಗಳೂರು ನಗರ ಪೋಲೀಸ್ ಆಯುಕ್ತರಿಗೆ (Bengaluru Police Commissioner) ಯುವತಿ ದೂರು ಸಲ್ಲಿಸಿದ್ದಾರೆ. ತಮ್ಮ ವಕೀಲರ ಮೂಲಕ ಯುವತಿ ಲಿಖಿತ ದೂರು ದಾಖಲಿಸಿದ್ದಾರೆ.  ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿರುವ ಬಗ್ಗೆ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸಿ.ಡಿ ಯುವತಿಯ (CD Lady) ಪರವಾಗಿ ಅವರ ವಕೀಲರಾದ ಜಗದೀಶ್, ಯುವತಿಯ ಹಸ್ತಾಕ್ಷರದಲ್ಲಿ ಬರೆಯಲಾಗಿರುವ ದೂರನ್ನು ನಗರ್ ಪೋಲೀಸ್ ಆಯುಕ್ತ (Bengaluru Police Commissioner) ಕಮಲ್ ಪಂಥ ಅವರಿಗೆ ಸಲ್ಲಿಸಿದ್ದಾರೆ. ಯುವತಿಯ ದೂರನ್ನು ಪರಿಶೀಲಿಸಿರುವ ಕಮಲ್ ಪಂಥ್, ಪ್ರಕರಣವನ್ನು ಕಬ್ಬನ್ ಪಾರ್ಕ್ (Cubbon Park)  ಠಾಣೆಗೆ ವರ್ಗಾಯಿಸಿದ್ದಾರೆ. 


ಇದನ್ನೂ ಓದಿ : CD Case : ಕಾನೂನಾತ್ಮಕ ಹೋರಾಟಕ್ಕೆ ನಾನೂ ಸಿದ್ಧ - ರಮೇಶ್ ಜಾರಕಿಹೊಳಿ


ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ. ಅಲ್ಲದೆ ಕೆಲಸ ಕೊಡಿಸದೇ ವಂಚಿಸಲಾಗಿದೆ ಎಂದು ಯುವತಿ ಆಪಾದಿಸಿದ್ದಾರೆ. ರಮೇಶ್ ಜಾರಕಿಹೊಳಿ (Ramesh Jarakiholi) ನನ್ನ ಹತ್ಯೆಗೆ ಮುಂದಾಗಿದ್ದರು ಎಂದು ಕೂಡಾ ಯುವತಿ ಗಂಭೀರ ಆರೋಪ ಮಾಡಿದ್ದಾರೆ. 


Target) ಮಾಡಿ ಹಿಂಸೆ ನೀಡಲಾಗುತ್ತಿದೆ, ಇದು ನೋವುಂಟು ಮಾಡಿದೆ ಎಂದು ಯುವತಿ ಹೇಳಿದ್ದಾರೆ.   


ಇದನ್ನೂ ಓದಿ : CD Case : ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ಮುಂದಾದ ಸಿ.ಡಿ ಲೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ