ನವದೆಹಲಿ: COVID-19 ವೈರಸ್ ಇರುವ ಕಾರಣ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಎನ್ಇಇಟಿ (NEET) ಮತ್ತು ಜೆಇಇ(JEE)  ಮುಂದೂಡದಿರಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 1ರಿಂದ 6ರವರೆಗೆ ಜೆಇಇ (ಮೈನ್) ಪರೀಕ್ಷೆ ನಡೆಸಲು ಹಾಗೂ ಸೆಪ್ಟೆಂಬರ್ 13ಕ್ಕೆ NEET ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ. ಈ ಹಿಂದೆ ಎರಡು ಬಾರಿ ದಿನಾಂಕ ನಿಗದಿಯಾಗಿ ಕಡೆಗೆ COVID-19 ವೈರಸ್  ಕಾರಣಕ್ಕೆ ಪರೀಕ್ಷೆಗಳು ರದ್ದಾಗಿದ್ದವು. ಮೇ ಮತ್ತು ಜುಲೈನಲ್ಲಿ ಪರೀಕ್ಷೆಗಳು ನಡೆಯಬೇಕಿತ್ತು.


COVID-19 ವೈರಸ್ ಕಾರಣಕ್ಕೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಎನ್ಇಇಟಿ (NEET) ಮತ್ತು ಜೆಇಇ (JEE) ಮುಂದೂಡುವಂತೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ (Supreme Court) ಆಗಸ್ಟ್ 17ರಂದು ತಿರಸ್ಕರಿಸಿತ್ತು. COVID-19 ವೈರಸ್  ಜೊತೆಗೆ ಜೀವನ ಸಾಗಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಎನ್ಇಇಟಿ ಮತ್ತು ಜೆಇಇ ದಿನಾಂಕವನ್ನು ಪ್ರಕಟಿಸಿದೆ.


COVID-19 ನಿಯಂತ್ರಣಕ್ಕೆ ಬರುವವರೆಗೂ ಎನ್ಇಇಟಿ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕೆಂದು 11 ರಾಜ್ಯಗಳಿಂದ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ COVID-19 ವೈರಸ್ ಇರುವ ಕಾರಣಕ್ಕೆ ಲಸಿಕೆ ಬರುವವರೆಗೂ ಪರೀಗಳನ್ನು ಮುಂದೂಡಿ ಎಂದು ಮನವಿ ಮಾಡಲಾಗಿತ್ತು. ಅರ್ಜಿದಾರರ ಪರವಾಗಿ ವಕೀಲ ಅಲೋಕ್ ಶ್ರೀವಾಸ್ತವ ವಾದಿಸಿದ್ದರು. 


ಆದರೆ ಸುಪ್ರೀಂ ಕೋರ್ಟ್ (Supreme Court) ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಎನ್ಇಇಟಿ ಮತ್ತು ಜೆಇಇ ಮುಂದೂಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ಈಗ ಕೇಂದ್ರ ಸರ್ಕಾರ ಎನ್ಇಇಟಿ ಮತ್ತು ಜೆಇಇ ಪರೀಕ್ಷೆಗಳ ದಿನಾಂಕ ಘೋಷಣೆ ಮಾಡಿದೆ.