ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಏಪ್ರಿಲ್‌ 23, 24 ಮತ್ತು 25ರಂದು ನಿಗದಿಯಾಗಿದ್ದ 2019ನೇ ಸಾಲಿನ ಸಿಇಟಿ ದಿನಾಂಕವನ್ನು ಪರಿಷ್ಕರಿಸಿದ್ದು ಏ. 29ರಿಂದ ಮೇ 1 ರವರೆಗೆ ನಡೆಸಲು ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ(ಸಿಇಟಿ) ಪರೀಕ್ಷೆಯನ್ನು ಈ ಮೊದಲು ಏ. 23ರಿಂದ 25ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಏಪ್ರಿಲ್ 23ರಂದು ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಇರುವುದರಿಂದ ಯುವ ಮತದಾರರಿಗೆ ಮತದಾನ ಮಾಡಲು ತೊಂದರೆಯಾಗುವ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. 2019ನೇ ಸಾಲಿನ ಸಿಇಟಿಗೆ ಒಟ್ಟಾರೆ 2,02,430 ಅರ್ಜಿಗಳು ಬಂದಿವೆ.

ಪರಿಷ್ಕೃತ ವೇಳಾ ಪಟ್ಟಿ ಈ ಕೆಳಗಿನಂತಿದೆ:


  •  ಏ.29ರಂದು ಜೀವಶಾಸ್ತ್ರ (ಬೆ.10.30-11.50), ಗಣಿತ (ಮ.2.30-3.50)

  •  ಏ. 30ರಂದು ಭೌತಶಾಸ್ತ್ರ (ಬೆ.10.30-11.50), ರಸಾಯನಶಾಸ್ತ್ರ (ಮ.2.30-3.50 )

  • ಗಡಿನಾಡು ಕನ್ನಡಿಗರಿಗಾಗಿ ಕನ್ನಡ ಪರೀಕ್ಷೆಯನ್ನು ಮೇ 1ರಂದು 11.30ರಿಂದ 12.30ರವರೆಗೆ ನಡೆಸಲಿದೆ.