ಬೆಂಗಳೂರು: ವೈದ್ಯಕೀಯ ಮತ್ತಿ ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಗಳಿಗೆ ನಡೆಸಲಾಗಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಳ್ಳಾರಿಯ ಜಫಿನ್ ಬಿಜು ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಫಲಿತಾಂಶ ಘೋಷಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು, ಇಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು , ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜು ಮಾರತ್ತಳ್ಳಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.


ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿ ಮಹೇಶ್ ಆನಂದ್ ಪ್ರಥಮ, ಮೈಸೂರಿನ ಬೇಸ್‌ ಪಿಯು ಕಾಲೇಜಿನ ವಾಸುದೇವ್ ದ್ವಿತೀಯ ಹಾಗೂ ಬೆಂಗಳೂರಿನ  ನಾರಾಯಣ ಇ ಟೆಕ್ನೋ ಸ್ಕೂಲ್‌ನ ಉದಿತ್ ಮೋಹನ್ ತೃತೀಯ ಸ್ಥಾನ ಪಡೆದಿದ್ದಾರೆ.


ಪಶು ವೈದ್ಯಕೀಯ ವಿಭಾಗದಲ್ಲಿ ಪಿ.ಮಹೇಶ್ ಆನಂದ್, ಚೈತನ್ಯ ಟೆಕ್ನೋ ಪಿ.ಯು ಕಾಲೇಜು ಮಾರತ್ತಳ್ಳಿ ಬೆಂಗಳೂರು ಮೊದಲ ಸ್ಥಾನ ಪಡೆದಿದ್ದಾರೆ. ಮೊದಲ 10ರಲ್ಲಿ ಬೆಂಗಳೂರಿಗೆ 8, ದಾವಣಗೆರೆಗೆ 1, ಮೈಸೂರಿಗೆ 1 ಸ್ಥಾನ ಲಭಿಸಿದೆ. 


ಏಪ್ರಿಲ್ 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಶೇ.92ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.


ಸಿಇಟಿ ಫಲಿತಾಂಶಕ್ಕಾಗಿ  http://kea.kar.nic.in, http://cet.kar.nic.in,   http://karresults.nic.in ವೆಬ್ಸೈಟ್ ಗೆ ಭೇಟಿ ನೀಡಿ.