ವಿಜಯಪುರ : ಅಜಯ ದೇವಗನ್‌ ಗೆ ತಿಳುವಳಿಕೆ ಇಲ್ಲ. ದೇವಗನ್ ಮಾತನ್ನು ಯಾರು ಒಪ್ಪೊದಿಲ್ಲ ಎಂದು ನಟ ಸುದೀಪ್‌ಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ  ಎಂಬಿ ಪಾಟೀಲ್ ಸಾತ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹಿಂದಿ ರಾಷ್ಟ್ರ ಭಾಷೆ ವಾರ್ ವಿಚಾರವಾಗಿ ತಿಕ್ರಿಯೆ ನೀಡಿದ ಎಂಬಿ ಪಾಟೀಲ್, ಕನ್ನಡ ನಮ್ಮ ಮಾತೃಭಾಷೆ, ಕನ್ನಡಕ್ಕೆ ಸ್ಥಾನಮಾನ ಇದೆ. ಹಿಂದಿ ಭಾಷೆಯನ್ನು ಮಹಾರಾಷ್ಟ್ರ, ತಮಿಳುನಾಡು ಯಾರು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.


ಇದನ್ನೂ ಓದಿ : PSI Reucirtment scam : ಪಿಎಸ್ಐ ಪರೀಕ್ಷೆ ರದ್ದು ಬೇಡ : ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯ


ಪಿಎಸ್ಐ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಮರು ಪರೀಕ್ಷೆ ನಡೆಸುವುದು ಸೂಕ್ತವಾಗಿದೆ. ಪಿಎಸ್ಐನಲ್ಲಿ ಅಕ್ರಮದಲ್ಲಿ ಅನೇಕ ನಿರಪರಾಧಿಗಳು ಇರ್ತಾರೆ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿರುತ್ತಾರೆ. ಇದು ಅನಿವಾರ್ಯದ ಪರಿಸ್ಥಿತಿಯಲ್ಲಿ ಮರು ಪರೀಕ್ಷೆ ಸೂಕ್ತ. ಮರು ಪರೀಕ್ಷೆ ಮಾಡಿದ್ರೇ ನಾನು ಸ್ವಾಗತ ಮಾಡುತ್ತೇನೆ. ಆದ್ರೆ, ಪಿಎಸ್ಐ ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಅವರ ಪಾಲಕರಿಗೆ ನೋವು ಆಗುತ್ತದೆ. ವಿದ್ಯಾರ್ಥಿಗಳು ಸಹಕಾರ ನೀಡಬೇಕು. ಆರೋಪಿ ದಿವ್ಯಾ ಹಾಗರಗಿ ಬಗ್ಗೆ ನಾನು ಮಾತನಾಡಲ್ಲ. ದಿವ್ಯಾ ಹಾಗರಗಿ ಲೆವಲ್ ನಲ್ಲಿ ನಾನು ಮಾತನಾಡಲ್ಲ ಎಂದು ಹೇಳಿದರು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.