Gram Panchayat Cheque Bounce: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲಾ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ... ಇದೀಗ ಗ್ರಾಮೀಣಾಭಿವೃದ್ಧಿ ಸಚಿವರ ತವರು ಜಿಲ್ಲೆಯ ಗ್ರಾಮವೊಂದರ ಗ್ರಾಮ ಪಂಚಾಯತಿ ವಿದ್ಯುತ್ ಬಿಲ್ ಪಾವತಿಗೆ ಹಾಕಿದ್ದ ಚೆಕ್ ಬೌನ್ಸ್ ಆಗಿದ್ದು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲಾ ಎನ್ನುವುದಕ್ಕೆ ಕೈಗನ್ನಡಿಯಾಗಿದೆ.. ಅಷ್ಟೆ ಅಲ್ಲದೆ ಈ ಗ್ರಾಮ ಪಂಚಾಯತಿಯಲ್ಲಿ ಅದ್ಯಕ್ಷರಿಗಿಂತ ಅವರ ಪತಿಯದ್ದೆ ದರ್ಬಾರು ಎಂತಲೂ ಹೇಳಲಾಗುತ್ತಿದೆ. ಇಂತಹ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿರುವುದು ಕಲಬುರಗಿ ಜಿಲ್ಲೆಯ (Kalaburagi District) ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮ ಪಂಚಾಯತಿ. 


COMMERCIAL BREAK
SCROLL TO CONTINUE READING

ಗಂವ್ಹಾರ ಗ್ರಾಮ  ಪಂಚಾಯತ್ (Gamvhaar Gram Panchayat) ಗೆ 25,071 ರೂಪಾಯಿ ವಿದ್ಯುತ್ ಬಿಲ್‌ ಬಂದಿದೆ. ಗಂವ್ಹಾರ ಪಂಚಾಯತ್ ಅದ್ಯಕ್ಷೆ ಆರತಿ ಹಾಗೂ ಪಿಡಿಓ ಧರ್ಮಣ್ಣ ಕರ್ನಾಟಕ ಗ್ರಾಮೀಣ ಬ್ಯಾಂಕ್ (Cavery Gramina Bank) ನಿಂದ 25071 ರೂಪಾಯಿಯ ಚೆಕ್ ನ್ನು ವಿದ್ಯುತ್ ಬಿಲ್ (Electricity Bill) ಪಾವತಿಗೆ ನೀಡಿದ್ದಾರೆ. ಜೂನ್ 30 ರಂದು ಜೆಸ್ಕಾಂ ನವರು ಬ್ಯಾಂಕಿಗೆ ಚೆಕ್ ಹಾಕಿದ್ದಾರೆ. ಆಗ ಖಾತೆಯಲ್ಲಿ ಅಗತ್ಯವಿರುವಷ್ಟು ಹಣ ಇಲ್ಲಾ ಎಂದು ಬ್ಯಾಂಕ್ ಅಧಿಕಾರಿಗಳು ಜೆಸ್ಕಾಂಗೆ ವಾಪಾಸ್ ಮೆಮೋ‌ಹಾಕಿದ್ದು, ಇದೀಗ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ..


ಇದನ್ನೂ ಓದಿ- ತಾಸಿನ ಹಿಂದೆ ಹೊಟ್ಟೆ ತಣಿಸಿದ್ದ ತಾಯಿ..ಕೊನೆಗೆ ಮಗನಿಗೆ ಸಿಕ್ಕಿದ್ದು ತಾಯಿಯ ತುಂಡು ಸೀರೆ..


ಇನ್ನು ಇತ್ತ ಗಂವ್ಹಾರ ಗ್ರಾಮ ಪಂಚಾಯತಿ ಅದ್ಯಕ್ಷೆ ಆರತಿ ಅವರು ಇದ್ದರು ಸಹ ಪಂಚಾಯತಿಯಲ್ಲಿ ಅವರ ಪತಿ‌ ಧರ್ಮು ನಾಯಕ್ ಅವರದ್ದೆ ದರ್ಬಾರ್ ಹೆಚ್ಚಾಗಿದೆ. ಎಲ್ಲದಕ್ಕೂ ಅವರೆ ಮುಂದಾಗ್ತಾರೆ ಎನ್ನುವ ಆರೋಪ‌ಕೇಳಿ ಬಂದಿವೆ. ಇವರಿಂದಲೇ ಗ್ರಾಮ ಪಂಚಾಯತ್ (Gram Panchayat) ಗೆ ಬಂದ ಹಣ ಸಾಕಷ್ಟು ದುರುಪಯೋಗವಾಗಿದೆ ಎನ್ನುವ ಆರೋಪಗಳು ಕೂಡ ಕೇಳಿಬಂದಿದೆ. ಕಂಪ್ಯೂಟ್ ಖರೀದಿಯಲ್ಲೂ ಅವ್ಯವಹಾರ, ಅಭಿವೃದ್ಧಿ ಕಾಮಗಾರಿಯಾಗದೇ ಕೊಟ್ಯಾಂತರ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡಿಕೊಂಡು ಅವ್ಯವಹಾರ ಎಸಗಿದ್ದಾರೆ ಎಂದು ಗಂವ್ಹಾರ ಗ್ರಾಮಪಂಚಾಯತ್ ಸದಸ್ಯ ಮಹ್ಮದ ಮಕ್ತುಮ್ ಆರೋಪ ಮಾಡಿದ್ದಾರೆ.


ಇನ್ನು ಈ‌ ಬಗ್ಗೆ ಪಂಚಾಯತ್ ಕಾರ್ಯದರ್ಶಿಯಾಗಿರುವ ಮಲ್ಲಿನಾಥ್ ಅವರನ್ನ ಕೇಳಿದರೆ ನನಗೆ ಏನು ಗೊತ್ತೆ ಇಲ್ಲಾ ಎಂದು ಜಾರಿಕೊಳ್ಳುತ್ತಿದ್ದಾರೆ.  


ಇದನ್ನೂ ಓದಿ- ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಟುಟೀಕೆ


ಒಟ್ಟಾರೆಯಾಗಿ ಗಂವಾರ್ ಗ್ರಾಮ ಪಂಚಾಯತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ. ಆದರೆ ಅಭಿವೃದ್ಧಿಯ ಹೆಸರಲ್ಲಿ ಬೋಗಸ್ ಬಿಲ್ ತಯಾರಿಸಿ ಭ್ರಷ್ಟಾಚಾರ ಮಾಡಲು ಹಣವಿದೆ ಎನ್ನುವ ಗ್ರಾಮಸ್ಥರ ಆರೋಪವನ್ನು ಸರ್ಕಾರ ಮತ್ತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಈ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.