ಚಿಕ್ಕೋಡಿ : ರಾಜ್ಯದಲ್ಲಿ ಕಳೆದ 6 ತಿಂಗಳುಗಳಿಂದ ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂ ಸಂಘಟನೆಗಳು ಒಂದಲ್ಲಾ ಒಂದು ರೀತಿಯ ಅಭಿಯಾನಗಳು ನಡೆಸಿಕೊಂಡು ಬರುತ್ತಿವೆ. 


COMMERCIAL BREAK
SCROLL TO CONTINUE READING

ಉಡುಪಿಯ ಒಂದು ಸರ್ಕಾರಿ ಪಿಯು ಕಾಲೇಜಿನಲ್ಲಿ ಆರಂಭವಾದ ಹಿಜಾಬ್‌ ಗಲಾಟೆ ರಾಷ್ಟ್ರವ್ಯಾಪಿ ಸದ್ದು ಮಾಡಿತು. ರಾಜ್ಯಗಳ ಪ್ರತಿ ಜಿಲ್ಲೆಗಳಲ್ಲೂ ಹಿಜಾಬ್‌ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಧರ್ಮ ಯುದ್ಧವನ್ನೇ ಆರಂಭಿಸಿದ್ರು. ಇದು ಹೈಕೋರ್ಟ್‌ ಮೆಟ್ಟಿಲೇರಿ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಕೋರ್ಟ್‌ ತೀರ್ಪು ನೀಡಿತು. ಹೈಕೋರ್ಟ್‌ ತೀರ್ಪನ್ನೂ ಲೆಕ್ಕಿಸದ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಶಾಲಾ-ಕಾಲೇಜುಗಳಿಗೆ ಬಂದು ದೊಡ್ಡ ಅವಾಂತರ ಸೃಷ್ಠಿ ಮಾಡಿ, ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಗಳನ್ನ ಬಹಿಷ್ಕರಿಸಿದ್ದನ್ನು ಕಂಡಿದ್ದೇವೆ. ಇಲ್ಲಿಗೆ ನಿಲ್ಲದ ಈ ಧರ್ಮ ಯುದ್ಧ, ವ್ಯಾಪಾರ, ಹಲಾಲ್‌, ಆಜಾನ್‌, ಬಂಗಾರ ಬ್ಯಾನ್‌ ಮಾಡೋವರೆಗೂ ಬಂದು ನಿಲ್ಲಿತು. ಅಕ್ಷಯ ತೃತೀಯ ದಿನದೊಂದು ಮುಸ್ಲಿಂ ಅಂಗಡಿಗಳಲ್ಲಿ ಹಿಂದೂಗಳು ಬಂಗಾರ ಕೊಂಡುಕೊಳ್ಳದಂತೆ ಬಂಗಾರ ಬ್ಯಾನ್‌ ಅಭಿಯಾನಕ್ಕೂ ಹಿಂದೂ ಸಂಘಟನೆಗಳು ಕರೆ ನೀಡಿದವು. ಒಂದು ಹೆಜ್ಜೆ ಮುಂದೋಗಿ ಮುಸ್ಲಿಂ ಹಬ್ಬಗಳನ್ನ ಬ್ಯಾನ್‌ ಮಾಡಿ ಎಂದು ಹಿಂದೂಗಳಿಗೆ ಕರೆ ನೀಡಿದ್ದಾರೆ.


ಇದನ್ನೂ ಓದಿ : ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಮುನ್ಸೂಚನೆ ನಿಜವೇ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ


ಹೌದು, ಇಂದು ಚಿಕ್ಕೋಡಿಯ ಶಿರಹಟ್ಟಿ ಗ್ರಾಮದಲ್ಲಿ ಮಾತನಾಡಿದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಹಿಂದೂಗಳು ಮುಸ್ಲಿಂ ಹಬ್ಬಗಳಲ್ಲಿ ಭಾಗವಹಿಸದಂತೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಧರ್ಮ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಹೇಳಿಕೆ ನೀಡಿರುವುದು ಮತ್ತೊಂದು ಧರ್ಮ ದಂಗಲ್‌ಗೆ ಕಾರಣವಾಗಿದೆ.


ಶಿರಹಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, ಸತ್ಯ ಹೇಳುವುದು ವಿವಾದವಾದರೆ ಸಾವಿರ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧಳಾಗಿದ್ದೇನೆ ಎಂದರು. ಇದೇ ವೇಳೆ ಮುಸ್ಲಿಂರ ಹಬ್ಬಗಳಿಗೆ ಹಿಂದೂಗಳು ಹೋಗದಂತೆ ಕರೆ ನೀಡಿದ್ರು. ಒಂದು ವೇಳೆ ನೀವು ಮುಸ್ಲಿಂ ಹಬ್ಬಗಳಿಗೆ ಹೋದರೆ ಹಿಂದೂಗಳು ಮನೆ ದೇವರಿಗೆ ದ್ರೋಹ ಮಾಡಿದಂತೆ ಎಂದು ದೂರಿದರು. ಇನ್ನು ಹಾಗೆ ಹೋದವರು ಹಿಂದೂ ವಿರೋಧಿಗಳೇ ಆಗಿರ್ತಾರೆ ಎಂದು ಆಕ್ರೋಶ ಹೊರ ಹಾಕಿದ್ರು. ಮಾತು ಮುಂದುವರೆಸಿದ ಚೈತ್ರಾ, ಕ್ರೈಸ್ತ ಮಿಷನರಿಗಳು ಸ್ಲೋ ಪಾಯಿಸನ್ ಇದ್ದಂತೆ. ‌ಸಮಾಜ ಸೇವೆಯ ಸೋಗಿನಲ್ಲಿ ಹಿಂದೂ ಸಮಾಜ ಒಡೆಯುತ್ತಿವೆ ಎಂದು ಆರೋಪಿಸಿದ್ರು.  


ಇದನ್ನೂ ಓದಿ : ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ


ರಾಜ್ಯದಲ್ಲಿ ಸಾವಿರಾರು ಹಿಂದೂಗಳ ಮತಾಂತರಕ್ಕೆ ಕ್ರೈಸ್ತ ಮಿಷನರಿಗಳು ಕಾರಣವಾಗಿವೆ. ಕೋವಿಡ್ ಸಮಯದಲ್ಲಿ 50 ಸಾವಿರಕ್ಕೂ ಹೆಚ್ಚು ಹಿಂದೂಗಳ  ಮತಾಂತರವಾಗಿದೆ ಎಂದು ವಾಗ್ದಾಳಿ ನಡೆಸಿದ್ರು. ಇನ್ನು ಮೊನ್ನೆ ವಿವಾದಿತ ಪೋಸ್ಟ್‌ನಿಂದ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಉಗ್ರ ಸಂಘಟನೆಗಳ ಕೈವಾಡ ಹಾಗೂ ಇದರ ಹಿಂದೆ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಕೈವಾಡವೂ ಸಹ ಇದೆ ಎಂದು ಹೊಸ ಬಾಂಬ್‌ ಸಿಡಿಸಿದ್ರು. ಈ ಕೋಮುಗಲಭೆ ಸಂಬಂಧ ಸಂಪೂರ್ಣ ತನಿಖೆಯಾಗಿ, ಸತ್ಯ ಹೊರಬರಬೇಕು ಎಂದು ಆಗ್ರಹಿಸಿದ್ರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.