ಮಂಗಳೂರು: ಕರ್ನಾಟಕ ಪೊಲೀಸರಿಗೆ ಸವಾಲಾಗಿರುವು‍ದು ಅನೈತಿಕ ಪೊಲೀಸ್‌ಗಿರಿ. ಮಂಗಳೂರು ಭಾಗದಲ್ಲಿ ಸಮಸ್ಯೆ ಹೆಚ್ಚಿರುವ ಬಗ್ಗೆ ಅರಿವಿದೆ. 


COMMERCIAL BREAK
SCROLL TO CONTINUE READING

ಪೊಲೀಸರು ಈಗಾಗಲೇ ಈ ಬಗ್ಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮಗಳ ಮೂಲಕ ಕಾನೂನಿನ ನೈಜ ಮುಖವನ್ನು ತೋರಿಸಲಿದ್ದೇವೆ ಎಂದು ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ಅವರು ಮಂಗಳೂರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.


ಇದನ್ನೂ ಓದಿ : 60 ಲಕ್ಷ‌ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ : ಸಚಿವೆ ಲಕ್ಷ್ಮೀ ಹಬ್ಬಾಳ್ಕರ್ ಮಾಹಿತಿ


ಮತೀಯ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ವಹಿಸಲಿದ್ದೇವೆ ಎಂದರು. ಅನೈತಿಕ ಪೊಲೀಸ್‌ಗಿರಿ ಕೃತ್ಯಗಳಿಗೆ ಯಾರು ಮುಂದಾಗುತ್ತಾರೆ ಮತ್ತು ಅವರಿಗೆ ಬೆನ್ನ ಹಿಂದೆಯಿಂದ ಯಾರೂ ಬೆಂಬಲ ನೀಡುತ್ತಾರೆಯೋ ಅವರ ಬಗ್ಗೆ ತುರ್ತಾಗಿ ಕಾನೂನಿನಡಿ ಕೈಗೊಳ್ಳಬಹುದಾದ ಕ್ರಮಗಳನ್ನು ವಹಿಸಲಾಗುವುದು.


ಸಾಮಾನ್ಯವಾಗಿ ಇಂತಹ ಕೃತ್ಯಗಳು ನಡೆದಾಗ ತಡವಾಗಿ ಕ್ರಮ ವಹಿಸಲು ಮುಂದಾದಾಗ ಅವರಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿಯೇ ಮಂಗಳೂರು ಅತ್ಯಂತ ಮಹತ್ವ ಹಾಗೂ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಇಲ್ಲಿ ಕೆಲಸಮಾಡುವಾಗ ನಮ್ಮ ಹೆಚ್ಚುವರಿ ಪ್ರಯತ್ನವನ್ನು ಹಾಕಬೇಕಾಗುತ್ತದೆ.ನನಗೆ ಈಗ ಇಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ.ಬೀಟ್ ವ್ಯವಸ್ಥೆಯೊಂದಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಅಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.