ಅಧಿಕಾರಿಗಳಿಗೆ ಸಚಿವ ವೆಂಕಟೇಶ್ ತರಾಟೆ- 150 ಮಂದಿ ಹಣ ಗುಳುಂ ಮಾಡಿದನಂತೆ ನೌಕರ!!
ರೇಷ್ಮೆ ಹಾಗೂ ಪಶುಸಂಗೋಪನೆ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ನಡೆಸಿದರು.
ಚಾಮರಾಜನಗರ: ರೇಷ್ಮೆ ಹಾಗೂ ಪಶುಸಂಗೋಪನೆ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ನಡೆಸಿದರು.
ಸಭೆ ಆರಂಭದಲ್ಲೇ ಪ್ರಶ್ನೆಗಳ ಗೂಗ್ಲಿ ಎಸೆದ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳು ನೀಡುತ್ತಿದ್ದ ಅಸ್ಪಷ್ಟ, ಅಪೂರ್ಣ ಮಾಹಿತಿಗೆ ಕೆಂಡಾಮಂಡಲರಾಗಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
ರೇಷ್ಮೆ ಇಲಾಖೆಯಲ್ಲಿ ಜಿಲ್ಲೆಯಲ್ಲಿರುವ ಜಮೀನು, ನರ್ಸರಿ, ಆಸ್ತಿ ಬಗ್ಗೆ ಸಚಿವರು ಕೇಳಿದ ಪ್ರಶ್ನೆಗೆ ತಡಬಡಾಯಸಿದ ರೇಷ್ಮೆ ಇಲಾಖೆ ಡಿಡಿ ನಾಗೇಂದ್ರಪ್ಪ ವಿರುದ್ಧ ಹರಿಹಾಯ್ದ ಸಚಿವ-; ಆಫೀಸ್ ಲ್ಲಿ ಕುಳಿತು ಸರ್ಕಾರದ ಹಣ ಜನರಿಗೆ ಕೊಡುವುದು ಸಾಧನೆಯಲ್ಲ, ರೇಷ್ಮೆಗೆ ಏನು ಉತ್ತೇಜನ ಕೈಗೊಂಡಿದ್ದೀರಿ, ಸಾಮಾನ್ಯ ಅಂಕಿ-ಅಂಶದ ವಿವರವೂ ನಿನ್ನಲ್ಲಿ ಇಲ್ಲವಲ್ಲಾ ಎಂದು ಕಿಡಿಕಾರಿ ಸಿಇಒ ಪೂವಿತಾಗೆ ಅಧಿಕಾರಿ ವಿರುದ್ಧ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿದರು.
ಇನ್ನು, ಜಿಲ್ಲೆಯಲ್ಲಿ ಡೆಂಗೆ ಜ್ವರ ಉಲ್ಭಣಗೊಂಡ ಮಾಹಿತಿ ಪಡೆದ ಕೆ.ವೆಂಕಟೇಶ್ ತಡೆಗಟ್ಟಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ್ದಕ್ಕೆ, ಮನೆಮನೆ ಸರ್ವೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದ ಡಿಎಚ್ಒ ವಿಶ್ವೇಶ್ವರಯ್ಯಗೆ- ನಾನೇನು ಕೇಳುತ್ತಿದ್ದೀನಿ, ನೀನೇನೂ ಬಡಿದುಕೊಳ್ಳುತ್ತಿದ್ದೀಯಾ.., ಸರ್ವೆ ಮಾಡೋದು ಜ್ವರ ಯಾರಿಗೆ ಬಂದಿದೆ ಅಂಥಾ ತಿಳಿಯಲು, ನಗರಸಭೆ ಜೊತೆಗೂಡಿ ನೈರ್ಮಲ್ಯ ಕಾಪಾಡಿ, ನೀರು ನಿಲ್ಲದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.
ಇದನ್ನೂ ಓದಿ:Ashwini Puneeth Rajkumar: ಅಂಗಾಂಗ ದಾನ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಸರ್ಕಾರ ಆಹ್ವಾನ..!
150 ಮಂದಿಯನ್ನು ಬದುಕಿದ್ದಾಗಲೇ ಸಾಯಿಸಿದ ನೌಕರ
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಂಗನವಾಡಿ ನೌಕರರೊಬ್ಬರು ಬದುಕಿ, ಕೆಲಸ ಮಾಡುವಾಗಲೇ ಅವರು ಸತ್ತರೆಂದು ದಾಖಲೆ ಸೃಷ್ಟಿಸಿ ಹಣ ಗುಳುಂ ಮಾಡಿರುವ ಬಗ್ಗೆ ಉತ್ತರಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗೀತಾಲಕ್ಷ್ಮೀ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಗೀತಾಲಕ್ಷ್ಮೀ ಉತ್ತರಿಸಿ, ಕಳೆದ ನಾಲ್ಕು ವರ್ಷಗಳಿಂದ ಇಲಾಖೆಯ ಕಂಪ್ಯೂಟರ್ ಆಪರೇಟರ್ ಈ ರೀತಿ ಕೆಲಸ ಮಾಡಿದ್ದು 150 ಮಂದಿಗೆ ಈ ರೀತಿ ಮೋಸ ಮಾಡಿದ್ದಾರೆ, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ನೌಕರ ಕಳೆದ ವರ್ಷ ನಿವೃತ್ತರಾಗಿದ್ದಾರೆಂದು ಹೇಳಿದರು.
ಇದಕ್ಕೆ ಬೆಚ್ಚಿಬಿದ್ದ ಶಾಸಕರು, ನಾವು ಒಬ್ಬರಿಗೆ ಮೋಸ ಅಂದುಕೊಂಡಿದ್ದೆವು ನೀವು 150 ಮಂದಿ ಎನ್ನುತ್ತಿದ್ದೀರಿ, ನೀವು ಹೇಗೆ ಆತ ಕೊಟ್ಟ ದಾಖಲೆಗೆ ಸಹಿ ಮಾಡಿದೀರಿ..? ಕೂಡಲೇ ಇದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇದರ ಸಂಬಂಧ ಪರಿಶೀಲನೆ ನಡೆಸುವಂತೆ ಡಿಸಿಗೆ ಸಚಿವರು, ಶಾಸಕ ಎಆರ್ ಕೆ ಸೂಚಿಸಿದರು.
ಇದನ್ನೂ ಓದಿ: ನಾವೀನ್ಯತೆಗೆ ಸ್ವಿಟ್ಜರ್ಲೆಂಡ್ ಆಸಕ್ತಿ, ಸಚಿವರ ಜತೆ ಕಾನ್ಸುಲ್ ಜನರಲ್ ಚರ್ಚೆ
ಗೃಹಜ್ಯೋತಿ 63%- ಶಕ್ತಿ ಯೋಜನೆ ಸಕ್ಸಸ್
ಗ್ಯಾರಂಟಿ ಯೋಜನೆಗಳ ಬಗ್ಗೆ ಸಭೆಯ ಆರಂಭದಲ್ಲೇ ಚರ್ಚೆ ಆಯಿತು. ಗೃಹಜ್ಯೋತಿ ಯೋಜನೆಗೆ ಜಿಲ್ಲೆಯಲ್ಲಿ ಶೇ. 63 ರಷ್ಟು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದು ನಿತ್ಯ 1.60 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ, ಕಳೆದ ತಿಂಗಳು 8 ಕೋಟಿ ರೂ.ನಷ್ಟು ಬಿಲ್ ನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಇದನ್ನೂ ಓದಿ: Ashwini Puneeth Rajkumar: ಅಂಗಾಂಗ ದಾನ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಸರ್ಕಾರ ಆಹ್ವಾನ..!
ಇನ್ನು , ಅನ್ನಭಾಗ್ಯ ನಗದು ವರ್ಗಾವಣೆಯಡಿ ಶೇ. 100 ರಷ್ಟು ಹಣ ವರ್ಗಾವಣೆಗೊಂಡಿದೆ, ಗೃಹಜ್ಯೋತಿ ಯೋಜನೆಯಡಿ 28 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಯಿಂದ ಅರ್ಹ ಫಲಾನುಭವಿ ಯಾರೂ ತಪ್ಪಿಸಿಕೊಳ್ಳಬಾರದು, ಗೃಹಲಕ್ಷ್ಮಿ ಯೋಜನೆಗೆ ಮತ್ತಷ್ಟು ವೇಗ ಕೊಡಬೇಕೆಂದು ಸಚಿವರು ಸೂಚಿಸಿದರು.
ಸಭೆಯಲ್ಲಿ ಶಾಸಕರುಗಳಾದ ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ವಿಧಾನ ಪರಿಷತ್ ಸದಸ್ಯರುಗಳಾದ ಮರಿತಿಬ್ಬೇಗೌಡ, ತಿಮ್ಮಯ್ಯ, ಮಂಜೇಗೌಡ ಇದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.