ಚಾಮರಾಜನಗರ: ಮತದಾರರ ಪಟ್ಟಿಯಿಂದ ತನ್ನ ಹೆಸರು ಕೈ ಬಿಟ್ಟಿರುವುದಕ್ಕೆ ಆಕ್ರೋಶಗೊಂಡು ಗ್ರಾಮ ಪಂಚಾಯತಿ ಮುಂದೆ ಇಡೀ ಕುಟುಂಬ ಪ್ರತಿಭಟನೆ ನಡೆಸುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Loksabha Election 2024: ಮತಗಟ್ಟೆ ಸಿಬ್ಬಂದಿಯ ಅಂತಿಮ ಹಂತದ ರ‍್ಯಾಂಡಮೈಸೇಷನ್


ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಳಿಮೇಡು ಗ್ರಾಮದ ಮರುದ ಎಂಬವರು  ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಮತದಾನ ಮಾಡಲು ಊರಿಗೆ ಬಂದ ವೇಳೆ ಈ ವಿಚಾರ ಗಮನಕ್ಕೆ ಬಂದಿದೆ. ಏಕಾಏಕಿ ಹೆಸರನ್ನು ಕೈ ಬಿಟ್ಟಿರುವುದರಿಂದ ಕುಪಿತಗೊಂಡ ಮರುದ ಪತ್ನಿ, ಮಗು ಹಾಗೂ ತಾಯಿ ಜೊತೆ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Lok Sabha Election 2024: "ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ"


ಅಂಗನವಾಡಿ ಕಾರ್ಯಕರ್ತೆಯ ಕಣ್ತಪ್ಪಿನಿಂದ ಹೆಸರು ಅಳಿಸಲಾಗಿದೆ ಎಂದು ಸಬೂಬು ಕೊಡುತ್ತಿದ್ದಾರೆ. ಆದರೆ, ನನ್ನ ಮತ- ನನ್ನ ಹಕ್ಕು,ಮತದಾನ ಮಾಡಲೆಂದೆ ಸಾವಿರಾರು ರೂ. ವ್ಯಯಿಸಿ ಊರಿಗೆ ಬಂದಿದ್ದೇನೆ. ಮತದಾನ ನನ್ನ ಹಕ್ಕಾಗಿದ್ದು ನನಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಮರುದ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.