ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಹಾಗೂ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ನೌಕರಿ ಗ್ಯಾರಂಟಿ ಇನ್ನೂ ಈಡೇರದೇ ಆಮ್ಲಜನಕ ದುರಂತ ಸಂತ್ರಸ್ತರು ಕಣ್ಣೀರಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಕೊರೊನಾ ಎರಡನೇ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಆಮ್ಲಜನಕ ಸಿಗದ ಪರಿಣಾಮ 24 ಮಂದಿಗೂ ಅಧಿಕ ( ಸರ್ಕಾರದ ವರದಿಯಲ್ಲಿ 24, ಸಂತ್ರಸ್ತರ ಪ್ರಕಾರ 36 ಮಂದಿ) ಜನರು ಅಸುನೀಗಿದ್ದರು. ನ್ಯಾಯಾಲಯದ ಆದೇಶದಂತೆ ಕೆಲವರಿಗೆ ಅಲ್ಪಸ್ವಲ್ಪ ಪರಿಹಾರ ಸಿಕ್ಕಿದ್ದರೂ ಕಾಂಗ್ರೆಸ್ ನಾಯಕರು ಕೊಟ್ಟಿದ್ದ ಉದ್ಯೋಗ ಗ್ಯಾರಂಟಿ ಮಾತ್ರ ಈಡೇರಿಲ್ಲ.


ರಾಹುಲ್ ಗಾಂಧಿ ಗ್ಯಾರಂಟಿ: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಸಿಜನ್ ದುರಂತ ಸಂತ್ರಸ್ತರ ಜೊತೆ ಸಂವಾದ ನಡೆಸಿದ್ದರು. ಆ ವೇಳೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರಲಿದ್ದು- ಕುಟುಂಬದ ಒಬ್ಬರಿಗೆ ನೌಕರಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು.


ಇದನ್ನೂ ಓದಿ: ಕಾಂಗ್ರೆಸ್ ಗೆ ಮುದ್ದಹನುಮೇಗೌಡ ಎಂಟ್ರಿ.. ತುಮಕೂರು ಕೈ ಬಿರುಕು..? 


ಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಕೂಡ ಈ ಭರವಸೆ ಕೊಟ್ಟಿದ್ದರು. ಅದಕ್ಕೂ ಮುನ್ನ, ಡಿಕೆಶಿ 36 ಕುಟುಂಬಗಳನ್ನೂ ಭೇಟಿ ಮಾಡಿ ತಲಾ 1 ಲಕ್ಷ ವೈಯಕ್ತಿಕ ಪರಿಹಾರ ಕೊಟ್ಟು ನೆರವು ನೀಡಿದ್ದರು.


ಈಗ ಆಗಿರುವುದು ಏನು? 


ಸದ್ಯ, ಸರ್ಕಾರ ಬಂದು ಸುಮಾರು 8 ತಿಂಗಳಾದರೂ ಇವರಿಗೆ ಉದ್ಯೋಗ ನೀಡಿಲ್ಲ. ಕಳೆದ ತಿಂಗಳು ಚಾಮರಾಜನಗರ ಡಿಸಿಗೆ ಮನವಿ ಸಲ್ಲಿಸಿದ ವೇಳೆ, ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ ಎಂದಿದ್ದರು. ಅದಾದ ಬಳಿಕವು ಸಾಕಷ್ಟು ಸಚಿವರು, ಜನತಾ ದರ್ಶನದಲ್ಲಿ ಮನವಿ ಮಾಡಿದರೂ ಇವರಿಗೆ ಕೊಟ್ಟಿದ್ದ ಗ್ಯಾರಂಟಿ ಈಡೇರಿಲ್ಲ.


ಹೊರಗುತ್ತಿಗೆ ನೌಕರಿಗೆ ನಕಾರ:


ಮಂಗಳವಾರ ಚಾಮರಾಜನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ 31 ಸಂತ್ರಸ್ತ ಕುಟುಂಬಗಳು ಸಚಿವ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ,  ತಾತ್ಕಾಲಿಕವಾಗಿ ಹೊರಗುತ್ತಿಗೆ ನೌಕರಿಯನ್ನು ಶೀಘ್ರವೇ ಕೊಡುವುದಾಗಿ ಹೇಳಿದರು. ಇದಕ್ಕೆ, ನಮಗೆ ಹೊರಗುತ್ತಿಗೆ ನೌಕರಿ ಬೇಡ, ಇಷ್ಟು ವರ್ಷವೇ ಕಾದಿದ್ದು ಖಾಯಂ ಉದ್ಯೋಗವನ್ನೇ ಕೊಡಿ ಎಂದು ಒತ್ತಾಯಿಸಿದರು.


ಹಿಂದಿನ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ದುರಂತ ನಡೆದು ಆ ಸರ್ಕಾರ ನಮ್ಮ ಗಂಡನ ಸಾವಿಗೆ ಕಾರಣವಾಯಿತು. ಈ ಸರ್ಕಾರ ನಮ್ಮ ಸಾವಿಗೆ ಕಾರಣವಾಗುವುದು ಬೇಡ. ನುಡಿದಂತೆ ನಡೆದುಕೊಂಡು ನಮಗೆ ಸರ್ಕಾರಿ ನೌಕರಿ ಕೊಡಲಿ ಎಂದು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸಂತ್ರಸ್ತೆ ನಾಗರತ್ನ  ಎಂಬವರು ಸರ್ಕಾರವನ್ನು ಆಗ್ರಹಿಸಿದರು.


ಇದನ್ನೂ ಓದಿ: ಯತೀಂದ್ರ ಜವಾಬ್ದಾರಿಯುತ ನಾಯಕ, ಅವರ ಮಾತನ್ನು ತಿರುಚುವ ಅಗತ್ಯವಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್ 


ನನ್ನ ಪತಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ನನಗೂ ಸೇರಿದಂತೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಯಾವ ಕುಟುಂಬದವರಿಗೂ ಯಾವುದೇ ಪರಿಹಾರ ದೊರೆತಿಲ್ಲ. ಸಿಎಂ ಅವರಿಗೂ ಮನವಿ ಮಾಡಿದ್ದೇವೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದೇವೆ. ಇಂದು ಜನತಾ ದರ್ಶನದಲ್ಲಿ ಸಚಿವ ವೆಂಕಟೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ಕಣ್ಣೀರಿಟ್ಟರು.


ಪರಿಹಾರ ಸಿಗದೆ ಪರಿತಪ್ಪಿಸುತ್ತಿರುವ ಕುಟುಂಸ್ಥರು:


ಎಲ್ಲೇ ಜನತಾ ದರ್ಶನ ನಡೆದ್ರು ಅಲ್ಲಿಗೆ ಹೋಗಿ ಮನವಿ ಮಾಡುತ್ತಿದ್ದೇವೆ, ಕಾಂಗ್ರೆಸ್ ಕೊಟ್ಟಿದ್ದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿದೆ, ಆದರೆ ನಮಗೆ ಕೊಟ್ಟಿದ್ದ ಗ್ಯಾರಂಟಿಯನ್ನು ಈಡೇರಿಸಿಲ್ಲ, ತಂದೆ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ. ಊಟ, ಬಟ್ಟೆಗೂ ಭಾರಿ ಸಮಸ್ಯೆಯಾಗಿದ್ದು ಆದಷ್ಟು ಬೇಗ ನಮಗೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.