ಬೆಂಗಳೂರು: ಈದ್ಗಾ ಮೈದಾನ ಭೂ ವಿವಾದ ಹಿನ್ನೆಲೆ ಜುಲೈ 12 ರಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಬಂದ್ ಗೆ ಕರೆ ಕೊಡಲಾಗಿದೆ.‌ಏನೇ ಅಡೆ ತಡೆ ಆದ್ರೂ ಬಂದ್ ಮಾತ್ರ ನಿಶ್ಚಿತ ಎಂದು ಸ್ಥಳಿಯ ಪೊಲೀಸ್ ಠಾಣೆ ಸೇರಿದಂತೆ ಜಮೀರ್ ಅಹಮದ್ ಗೆ ಸವಾಲಾಕಲಾಗಿದೆ.


COMMERCIAL BREAK
SCROLL TO CONTINUE READING

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಾಗರೀಕರ ಒಕ್ಕೂಟದ ಅಧ್ಯಕ್ಷರು, ಜಮೀರ್ ಮಾತನ್ನ ಯಾರೂ ಕೇಳಬಾರದು.ಭರವಸೆ ನೀಡಿ ಸುಮ್ಮನಾಗುತ್ತಾರೆ.ಯಡಿಯೂರಪ್ಪ ಸಿಎಂ ಆದರೆ ಅವರ ಮನೆ ವಾಚ್ ಮೆನ್ ಆಗುತ್ತೇನೆ ಎಂದಿದ್ದರು. ಈ ಹಿಂದೆ ಕೂಡ ಧ್ವಜಾರೋಹಣ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದರು. ಆದರೆ ಯಾವುದೇ ಕಾರ್ಯಕ್ರಮ ಮಾಡದೇ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ದೂರಲಾಯ್ತು.


ಇದನ್ನೂ ಓದಿ: Separate Hospital for Mens : ಪುರುಷರಿಗೇ ಪ್ರತ್ಯೇಕ ಆಸ್ಪತ್ರೆ- ಮಲ್ಲೇಶ್ವರಂ, ರಾಮನಗರದಲ್ಲಿ ಸದ್ಯದಲ್ಲೇ ಆರಂಭ 


ಜಮೀರ್ ಶಾಸಕರಾದ ಮೇಲೆ ಅಭಿವೃದ್ಧಿ ಕೆಲಸ ಶೂನ್ಯ;


ಈ ಹಿಂದೆ ಚಾಮರಾಜಪೇಟೆಯಲ್ಲಿ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಸೇರಿದಂತೆ ಸಾಕಷ್ಟು ಕಲಾವಿದರು ವಾಸವಿದ್ದರು. ಆದರೆ ಜಮೀರ್ ಶಾಸಕರಾದ ಮೇಲೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಳ್ಳ ಕಾಕರ ಹಾವಳಿ ಹೆಚ್ಚಾಗಿದೆ. ಸರಗಳ್ಳರು, ಪಿಕ್ ಪಾಕೆಟ್ ಮಾಡುವವರು, ಭೂಗಳ್ಳರು ಹೆಚ್ಚಾಗಿದ್ದಾರೆ. ಇಲ್ಲಿ ಅಭಿವೃದ್ಧಿ ಕೆಲಸಗಳೂ ಆಗುತ್ತಿಲ್ಲ.ಚಾಮರಾಜಪೇಟೆ ಕ್ಷೇತ್ರದಲ್ಲಿ ಆಟದ ಮೈದಾನಗಳೂ ಇಲ್ಲ. ಹೀಗಾಗಿ ಇದು ಸರ್ಕಾರದ ಸ್ವತ್ತಾಗೇ ಉಳಿಯಬೇಕು ಎಂದು ಆಗ್ರಹಿಸಲಾಯ್ತು.


ಇದನ್ನೂ ಓದಿ: ಮಾದಕ ವಸ್ತು ಮಾರುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರ ಬಂಧನ


ಈದ್ಗಾ ಮೈದಾನ ಸರ್ಕಾರದ ಸ್ವತ್ತಾಗಬೇಕು.‌ ಹೀಗಾಗಿ ಜುಲೈ 12 ರಂದು ಚಾಮರಾಜಪೇಟೆ ಕ್ಷೇತ್ರ ಬಂದ್ಗೆ ಕರೆ ನೀಡಲಾಗಿದೆ.ಬಂದ್ ವೇಳೆ ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳು ಎಲ್ಲವೂ ಬಂದ್ ಇರಲಿದೆ ಎಂದು ತಿಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ