ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ʼಶಿವಶಕ್ತಿ ಪಾಯಿಂಟ್ʼ ಹೆಸರು..! ʼಶಿವಶಕ್ತಿʼ ಅರ್ಥ ಗೊತ್ತೆ..?
Shivshakti point : ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳವನ್ನು `ಶಿವಶಕ್ತಿ ಪಾಯಿಂಟ್` ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬನ್ನಿ ಶಿವಶಕ್ತಿ ಎಂಬ ಹೆಸರಿನ ಅರ್ಥವನ್ನು ತಿಳಿಯೋಣ..
PM Modi in ISRO : ಚಂದ್ರಯಾನ-3 ಯೋಜನೆಯ ಹಿಂದಿರುವ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಸ್ಟ್ರಾಕ್) ಗೆ ಭೇಟಿ ನೀಡಿದರು. ಇಸ್ರೋ ಮುಖ್ಯಸ್ಥ ಸೋಮನಾಥ್ ಸೇರಿದಂತೆ ಎಲ್ಲ ವಿಜ್ಞಾನಿಗಳನ್ನು ಭೇಟಿ ಮಾಡಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅವರು, ಚಂದ್ರನ ಮೇಲೆ ಮೊದಲು ಇಳಿಯುವ ಸ್ಥಳವನ್ನು ಹೆಸರಿಸುವುದು ವಾಡಿಕೆ. ಈಗ ಭಾರತವು ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಹೆಸರಿಸಲು ನಿರ್ಧರಿಸಿದೆ. ಆ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಕರೆಯಲಾಗುವುದು. 'ಶಕ್ತಿ' ' ಶಿವಶಕ್ತಿ' ಮಹಿಳಾ ವಿಜ್ಞಾನಿಗಳ ಕಠಿಣ ಪರಿಶ್ರಮ, ಸ್ಫೂರ್ತಿ ಮತ್ತು ಸಬಲೀಕರಣ ಎಂದು ಅವರು ಹೇಳಿದರು.
ಇದನ್ನೂ ಓದಿ: ಚಂದ್ರಯಾನ-3 ರ ಬಗ್ಗೆ ಮೋದಿಗೆ ಇಸ್ರೋ ವಿಜ್ಞಾನಿಗಳಿಂದ ವಿವರಣೆ
2019 ರಲ್ಲಿ ಚಂದ್ರಯಾನ-2 ಪತನಗೊಂಡ ಚಂದ್ರನ ಸ್ಥಳವನ್ನು 'ತಿರಂಗ ಪಾಯಿಂಟ್' ಎಂದು ಹೆಸರಿಸಲಾಯಿತು. ಇಂದು, ಚಂದ್ರಯಾನ -3 ಮಿಷನ್ ಯಶಸ್ವಿಯಾಗಿ ನೆಲಸಿದೆ. ಆದ್ದರಿಂದ ಅಂದಿನ ದಿನ ಅಂದರೆ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದರು. ಇದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಭ್ರಮಿಸುವ ದಿನವಾಗಲಿದೆ ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು.
ಶಿವಶಕ್ತಿ ಪದದ ಅರ್ಥ : ಇನ್ನು ಪುರಾಣಗಳ ಪ್ರಕಾರ, ʼಶಿವಶಕ್ತಿʼ ಶಿವ ಮತ್ತು ಪಾರ್ವತಿ ದೇವಿಯ ಪ್ರತೀಕ, ಅರ್ಧ ನಾರೀಶ್ವರ ರೂಪ ಎಂದು ಹೇಳಲಾಗುತ್ತದೆ. ಶಿವನ ಪತ್ನಿ ಪಾರ್ವತಿ ದೇವಿಯನ್ನು ಶಕ್ತಿ ಎಂದಲೂ ಕರೆಯಲಾಗುತ್ತದೆ. ಇದೀಗ ವಿಕ್ರಮ್ ಲ್ಯಾಂಡರ್ ಮೊದಲು ಲ್ಯಾಂಡ್ ಆದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರೂ ಇಡಲಾಗಿದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಜಾಕ್ ಪಾಟ್ !ವೇತನದಲ್ಲಿ ಭಾರೀ ಹೆಚ್ಚಳ
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14 ರಂದು ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. GSLV ಮಾರ್ಕ್ 3 (LVM 3) ಭಾರೀ ಉಡಾವಣಾ ವಾಹನವನ್ನು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಉಡಾಯಿಸಲು ಬಳಸಲಾಯಿತು.
ಭೂಮಿ ಮತ್ತು ಚಂದ್ರನ ಸುತ್ತ 40 ದಿನಗಳ ಕಕ್ಷೆಯ ನಂತರ, ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡರ್ ಕಳೆದ ಬುಧವಾರ (ಆ. 23) ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿತು. ಈ ಮೂಲಕ ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಮೊದಲ ದೇಶವಾಯಿತು. ಅಲ್ಲದೆ, ಅಮೇರಿಕಾ, ಸೋವಿಯತ್ ಯೂನಿಯನ್ ಮತ್ತು ಚೀನಾ ನಂತರ ಭಾರತವು ಚಂದ್ರನ ಮೇಲೆ ಹೆಜ್ಜೆಗುರುತು ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.