ಬೆಂಗಳೂರು: ಸಿಎಂ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಪುನರ್ ರಚನೆಯಲ್ಲಿ ಇಬ್ಬರು ಹಾಲಿ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಎಲ್ಲ ಖಾತೆಯ ಸಚಿವ ಸ್ಥಾನಗಳನ್ನು ತುಂಬಲು ಮುಂದಾಗಿರುವ ಯಡಿಯೂರಪ್ಪ(B.S. Yediyurappa), ಮೊದಲು ವಲಸಿಗರಿಗೆ ಆದ್ಯತೆ ನೀಡಲಿದ್ದಾರೆ. ಬಳಿಕ ಪಕ್ಷದ ನಾಲ್ವರಿಗೆ ಅವಕಾಶ ನೀಡಲಿದ್ದು, ಸಂಕ್ರಾಂತಿ ವೇಳೆಗೆ ಸಂಪುಟ ಪುನರ್​ ರಚನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.


ದೂರು ಸ್ವೀಕರಿಸದ ಇನ್ಸ್ ಪೆಕ್ಟರ್ ಗೆ ಬೀದಿ ಗುಡಿಸುವ ಶಿಕ್ಷೆ ನೀಡಿದ ನ್ಯಾಯಾಲಯ


ಸಂಪುಟ ಪುನರ್​ ರಚನೆಯ ಪಟ್ಟಿಗೆ ಹೈಕಮಾಂಡ್​ನಿಂದ ಸಿಎಂಗೆ ಡಿಸೆಂಬರ್‌ ಅಂತ್ಯಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದ್ದು, ಸಚಿವ ಸ್ಥಾನಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿರುವವರಿಗೆ ಹೊಸವರ್ಷದ ವೇಳೆ ಅಂದರೆ ಜನವರಿಯಲ್ಲಿ ಸಿಹಿ ಸುದ್ದಿ ಸಿಗಲಿದೆ ಎಂದು 'ದಿಗ್ವಿಜಯ ನ್ಯೂಸ್'​ಗೆ ಉನ್ನತ ಮೂಲಗಳು ತಿಳಿಸಿವೆ.


'ಹಗಲಿನಲ್ಲಿ ಕೊರೋನಾ ಸೋಂಕು ಹರಡುವುದಿಲ್ಲವೇ?'


2020ರ ಜ.16ರಂದು ಕರ್ನಾಟಕ ಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಲಿದ್ದಾರೆ. ಶಿವಮೊಗ್ಗ, ಹೊಸಪೇಟೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಭದ್ರಾವತಿಯಲ್ಲಿ ಜ.16ರಂದು ಕೇಂದ್ರೀಯ ಮೀಸಲು ಪಡೆ ಘಟಕಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.


'ಕೈ' ನಾಯಕರ ಕಣ್ಣು ಕೆಂಪಗಾಗಿಸಿದ ಸಿದ್ದರಾಮಯ್ಯ ಹೇಳಿಕೆ!


ಒಂದಿಲ್ಲೊಂದು ಕಾರಣಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಲೇ ಇದೆ. ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ಈಗಾಗಲೇ ತೀವ್ರ ಅಸಮಾಧಾನಗೊಂಡಿರುವ ಆರ್​.ಶಂಕರ್​ ಮತ್ತು ಎಂಟಿಬಿ ನಾಗರಾಜ್​ ಇಬ್ಬರೂ ಇತ್ತೀಚಿಗೆ ಸಿಎಂ ಅವರನ್ನು ಭೇಟಿಯಾಗಿ ಮನದ ನೋವನ್ನು ತೋರ್ಪಡಿಸಿಕೊಂಡಿದ್ದರು. 'ನನ್ನನ್ನು ಮಂತ್ರಿ ಮಾಡಿ, ಇಲ್ಲದಿದ್ದರೆ ವಿಷವನ್ನು ಕೊಟ್ಟುಬಿಡಿ. ನಾವು ಸಚಿವರಾಗಿ ರಾಜೀನಾಮೆ ನೀಡಿ ನಿಮ್ಮ ಪಕ್ಷಕ್ಕೆ ಬಂದಿದ್ದೇವೆ. ಇದೀಗ ಶಾಸಕರಾಗಿದ್ದೇವೆ. ನಮ್ಮ ಪರಿಸ್ಥಿತಿಯೀಗ ವಿಷ ಕುಡಿಯುವಂತಾಗಿದೆ.' ಎಂದು ಆರ್. ಶಂಕರ್ ಆಕ್ರೋಶ ಹೊರಹಾಕಿದ್ದರು.


ಬಿಎಸ್ ವೈ 'ಸಿಎಂ ಕುರ್ಚಿಗೆ ಕಂಟಕ' ತರುತ್ತಾ ಡಿನೋಟಿಫಿಕೇಶನ್ ಕೇಸ್..!?