ಮೈಸೂರು: ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಿಎಂ ಹೆಚ್.ಡಿ. ಕುಮಾರಸ್ವಾಮಿ  ನಾಡಹಬ್ಬ ದಸರಾ ಮಹೋತ್ಸವದ ಐತಿಹಾಸಿಕ 'ಜಂಬೂ ಸವಾರಿ' ಮೆರವಣಿಗೆಗೆ ಚಾಲನೆ ನೀಡಿದರು. 


COMMERCIAL BREAK
SCROLL TO CONTINUE READING

750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 7ನೇ ಬಾರಿಗೆ ಹೊತ್ತಿರುವ ಅರ್ಜುನ ಗಾಂಭೀರ್ಯದಿಂದ ಅರಮನೆಯಿಂದ ಬನ್ನಿಮಂಟಪದತ್ತ ಸಾಗುತ್ತಿದ್ದು, ಅರ್ಜುನನಿಗೆ ಎಡ-ಬಲಗಳಲ್ಲಿ ಆನೆಗಳಾದ ಕಾವೇರಿ, ವರಮಹಾಲಕ್ಷ್ಮಿ ಸಾಥ್ ನೀಡಿದ್ದಾರೆ.


ಅಂಬಾರಿ ಹೊತ್ತ ಅರ್ಜುನ ಅರಮನೆಯಿಂದ ಹೊರಬರುತ್ತಿದ್ದಂತೆ 'ಜಂಬೂ ಸವಾರಿ'ಯನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಸಹಸ್ರಾರು ಮಂದಿ ಹರ್ಷೋದ್ಘಾರ ವ್ಯಕ್ತಪಡಿಸಿದರು. 


ಕಾಲಾಳುಗಳು, ಅಶ್ವಪಡೆ, ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್, ಸ್ಕಾಟ್‌ಲ್ಯಾಂಡ್ ಬ್ಯಾಂಡ್‌ ಇನ್ನೂ ಹಲವು ದಳಗಳು ಅಂಬಾರಿಯ ಹಿಂದೆ ಸಾಲಾಗಿ ಸಾಗುತ್ತಿವೆ.


ಇನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಕರ್ನಾಟಕದ ಇತಿಹಾಸ, ಸಂಸ್ಕೃತಿ ಬಿಂಬಿಸುವ 42 ಸ್ಥಬ್ದ ಚಿತ್ರಗಳು ಜನರ ಕಣ್ಮನ ಸೆಳೆಯಲಿವೆ. ಸ್ತಬ್ಧಚಿತ್ರಗಳ ಜತೆ ವಿವಿಧ ಸಾಂಸ್ಕೃತಿಕ ನೃತ್ಯಗಳು ಸಾಥ್ ನೀಡುತ್ತಿದ್ದು ಡೊಳ್ಳು ಕುಣಿತ, ವೀರಗಾಸೆ, ವಾಲಗ, ವೀರಭದ್ರನ ಕುಣಿತ, ನಂದಿ ಧ್ವಜ ಕುಣಿತ, ಮದ್ದಳೆ ಕಲೆ, ಜಗ್ಗಲಿಗೆ ಇನ್ನೂ ಹಲವು ಕಲಾ ತಂಡಗಳ ಪ್ರದರ್ಶನ ನಡೆಯುತ್ತಿದೆ. 


@DDChandanaNews


 


@DDChandanaNews