ಬೀದರ್: ಬೀದರಿನಲ್ಲಿ ಜನತಾ ದರ್ಶನದ ವೇಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಕಲಚೇತನರಿಗೆ ಸ್ಥಳದಲ್ಲೇ ಪರಿಹಾರ ವಿತರಿಸಿದರು.


COMMERCIAL BREAK
SCROLL TO CONTINUE READING

ವಿಕಲಚೇತನ ಸಹೋದರನೊಂದಿಗೆ ಆಗಮಿಸಿದ ವಿದ್ಯಾರ್ಥಿನಿಯೊಬ್ಬಳು ತನ್ನ ತಮ್ಮನ ಆರೋಗ್ಯಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ನಾನು ಪಿಯುಸಿನಲ್ಲಿ ಶೇ. 94ರಷ್ಟು ಅಂಕಪಡೆದು ತೇರ್ಗಡೆಯಾಗಿದ್ದು, ಕೃಷಿ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಿ ಎಂದು ಕೋರಿದಳು. 


ಸೋದರ ಸೋದರಿಯರ ಸಂಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಿಎಸ್‌ಸಿ ಪದವಿ ಓದಿಸಲು ಅಗತ್ಯ ನೆರವು ನೀಡುವುದಾಗಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು.‌ ಜೊತೆಗೆ ಅವರಿಗೆ ಎರಡು ಲಕ್ಷ ರೂ. ಬಿಡುಗಡೆ ಮಾಡಿದರು.



ಕಿಡ್ನಿ ವೈಫಲ್ಯ, ಹೃದಯ ಕಾಯಿಲೆ ಇರುವವರ ಅಹವಾಲು ಆಲಿಸಿದ ಮುಖ್ಯಮಂತ್ರಿಯವರು, ಜಯದೇವ ಮತ್ತು ನೆಪ್ರೋ ಯುರಾಲಜಿ ಇನಸ್ಟಿಟ್ಯೂಟ್ ಗಳ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ ಅಗತ್ಯ ಚಿಕಿತ್ಸೆ ಕೊಡಲು ಸೂಚಿಸಿದರು. 


ವಿಕಲಚೇತನರ ಅಹವಾಲಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಮುಖ್ಯಮಂತ್ರಿಗಳು ಆರು ಜನರಿಗೆ ಅಂಗವಿಕಲರ ಪರಿಹಾರ ನಿಧಿಯಲ್ಲಿ ಪರಿಹಾರ ಘೋಷಣೆ ಮಾಡಿದರು.