ಗದಗ: ನಿಮ್ಮ ಋಣ ನಾ ಎಂದೂ ಮರೆಯಲ್ಲ..ನನಗೆ ರೊಟ್ಟಿ ಕೊಟ್ರಿ, ಮಲಗೋಕೆ ಕಟ್ಟೆ ಜಾಗ ಕೊಟ್ರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನರಗುಂದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾವುಕರಾದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KGF Chapter 2: ‘ಕೆಜಿಎಫ್ – 2’ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ..?


ತಮ್ಮ ಭಾಷಣದ ವೇಳೆ ಮಹದಾಯಿ ಹೋರಾಟದ ಮೆಲಕು ಹಾಕಿದ ಅವರು 'ನಮ್ಮ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟಿದ್ದಿರಿ, ನನಗೆ ಬಹಳ ಸಂತೋಷವಾಗಿದೆ.ಅಂದಿನ ಯುಪಿಎ ಸರಕಾರ ಟ್ರಿಬುನಲ್ ಆದೇಶದ ವಿರುದ್ಧ ನಡೆದುಕೊಂಡ್ರು.ಆದ್ರೆ ಇಂದು ಅವರೆ ಅದೇ ವಿಚಾರಕ್ಕೆ ಪಾದಯಾತ್ರೆ ಮಾಡಿ ಮೊಸಳೆ ಕಣ್ಣೀರು ಹಾಕ್ತಿದ್ದಾರೆ' ಎಂದು ಅವರು ಕಿಡಿ ಕಾರಿದರು.


ಇದನ್ನೂ 'ಕೆಜಿಎಫ್ 2 ಫೈನಲ್ ಕಲೆಕ್ಷನ್ ಬಾಲಿವುಡ್‌ನ ಮೇಲೆ ಎಸೆದ ಅಣುಬಾಂಬ್ ಆಗಿರುತ್ತದೆ'


ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಎಸ್ ಆರ್ ಪಾಟೀಲ್ ವಾಗ್ದಾಳಿ ನಡೆಸಿದ ಅವರು. 'ನಾವು ನಿರಂತರ ಪ್ರಯತ್ನ, ಹಠ ಬಿಡದ ಛಲದಿಂದ ಹೋರಾಟ ಮಾಡಿದ್ದೇವೆ.ನಾವು ನೀರು ಹರಿಸೋದಿಲ್ಲ, ನೀರು ಹರಿಯದಂತೆ ಗೋಡೆ ಕಟ್ತೇವೆ ಅಂತ ನಾವು ಕಟ್ಟಿದ ಕಿನಾಲ್ ಗೆ ಗೋಡೆ ಕಟ್ಟಿದ್ದಾರೆ.ಕಿನಾಲಿಗೆ ಅಡ್ಡಲಾಗಿ ಗೋಡೆ ಕಟ್ಡಿದವರಿಗೆ ಬೆಂಬಲ ಕೊಡ್ತೀರಾ ತೀರ್ಮಾನ ನಿಮ್ಮದು' ಎಂದು ಅವರು ಹೇಳಿದರು.


7 ವರ್ಷ ಕಾಂಗ್ರೆಸ್ ಕೈಯಲ್ಲಿ ಇತ್ತು. ನೀರು‌ ನಮಗೆ ಕೊಟ್ಟು ದೊಡ್ಡ ಹೆಸರು ಪಡೆಯಬಹುದಿತ್ತು..ನೀರಿಗಾಗಿ ಹೋರಾಟ ಮಾಡಿದ ರೈತರನ್ನು ಪೊಲೀಸರಿಂದ ಅಮಾನವೀಯವಾಗಿ ಒಬ್ಬಬ್ಬರನ್ನೇ ಹೊಡೆದರು. ಹೆಣ್ಣು ಮಕ್ಕಳನ್ನ ಬೂಟು ಗಾಲಿನಿಂದ ಒದ್ರು...ಕಾನೂನಿನ ಅನ್ವಯ ಕಾಮಗಾರಿ ಕೂಡಲೆ ಪ್ರಾರಂಭ ಮಾಡ್ತೇವೆ,ಇದು ನಮ್ಮ ಬದ್ಧತೆ.ತಾಯಿ ಯಲ್ಲಮ್ಮನ ಪಾದದ ಅಡಿಯಿಂದ ಬದಾಮಿ ಬನಶಂಕರಿ ‌ಮುಡಿಯವರೆಗೆ ಮಹದಾಯಿ ಮಲಪ್ರಭಾ ಹರಿಬೇಕು ಅನ್ನೋ ಇಚ್ಚೆ ಇದೆ,ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ' ಎಂದು ಅವರು ಭರವಸೆ ನೀಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.