ಶಿವಮೊಗ್ಗ : ಕರ್ನಾಟಕ ರಚನೆಯಾಗಿ 75 ವರ್ಷಗಳಾಗಿವೆ. ಜನ ಜಾತಿ ಆಧಾರದ ಮೇಲೆ ಮಾಡಿದ ಹೇಳಿಕೆಗಳಿಗೆ ಕಿಮ್ಮತ್ತು ನೀಡುವುದಿಲ್ಲ. ಆದ್ದರಿಂದ ಜನರಿಗೆ ಹಿಡಿಸದೇ ಇರುವುದನ್ನು ಮಾತನಾಡಬಾರದು. ಇಂಥ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎನ್ನುವುದು ನನ್ನ ಭಾವನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು. 


COMMERCIAL BREAK
SCROLL TO CONTINUE READING

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಜಾತಿ ಆಧಾರಿತ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ಜನ ನಮ್ಮ ಕಾರ್ಯವೈಖರಿಯನ್ನು, ನೋಡಿ ತೀರ್ಮಾನ ಮಡುತ್ತಾರೆ. ಅವರ ಬದುಕಿಗೆ ಏನು ಸಹಾಯ ಮಾಡಿದ್ದಾರೆ, ಯಾವ ಸರ್ಕಾರ ಸಹಾಯ ಮಾಡಿದೆ, ಅನುಕೂಲವಾಗಿದೆ ಎನ್ನುವುದರ ಆಧಾರದ ಮೇಲೆ ಮತ ಹಾಕುತ್ತಾರೆ. ಮತದಾರರು ಬಹಳ ಬುದ್ದಿವಂತರು, ಪ್ರಬುದ್ಧರು. ಮತದಾರರ ಮುಂದೆ ಸಣ್ಣ ಪುಟ್ಟ ಜಾತಿ ಮಾತುಗಳು ಯಾವುದೇ ಪ್ರಯೋಜನವಾಗುವುದಿಲ್ಲ. ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಹೇಳಿಕೆಗೆ ¨ಬದ್ಧ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ ಬದ್ಧರಾಗಿದ್ದರೆ ಒಳ್ಳೆಯದು ಎಂದರು.


ಇದನ್ನೂ ಓದಿ: ಚುನಾವಣೆ ಪ್ರಚಾರ : ಬಿವೈ ವಿಜಯೇಂದ್ರಗೆ ಜವಾಬ್ದಾರಿ ನೀಡಿದ ಬಿಜೆಪಿ


ಗೊಂದಲವಿಲ್ಲ : ಬಿಜೆಪಿಯಲ್ಲಿ ಈ ಹೇಳಿಕೆಗಳಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಮತದಾರರಲ್ಲಿ ಗೊಂದಲವಿಲ್ಲ, ಬಿಜೆಪಿಯಲ್ಲಿ ಗೊಂದಲ ಏಕೆ ಇರುತ್ತದೆ ಎಂದರು.


ಪರಿಹಾರದ ಸಾಧ್ಯತೆಗಳು : ಶರಾವತಿ ಸಂಸತ್ರಸ್ತರ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಸ್ತಾವನೆಗಳನ್ನು ಪಡೆದು ಕೇಂದ್ರಕ್ಕೆ ಕಳುಹಿಸಲಾಗಿದೆ.  ಈ ಪ್ರಕ್ರಿಯೆ  ಅಂತಿಮ ಹಂತದಲ್ಲಿದ್ದು,  ಬಹಳ ವರ್ಷಗಳ ಬೆಡಿಕೆ ಅಂತಿಮ ಪರಿಹಾರ ನೀಡಲು  ಎಲ್ಲಾ ಸಾಧ್ಯತೆಗಳಿವೆ ಎಂದರು.


ಸಂತ್ರಸ್ತರಿಗೆ ನೆರವು : ಸಿರಿಯಾ ಮತ್ತು ಟರ್ಕಿಯಲ್ಲಿ ನಡೆದ ಭೂಕಂಪದಲ್ಲಿ ಸಂಸತ್ರಸ್ತರಾಗಿರುವ ಕನ್ನಡಿಗರಿಗೆ ಸಹಾಯ ಮಾಡಲು ಈಗಾಗಲೇ ಸಹಾಯವಾಣಿ ಸ್ಥಾಪನೆಯಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ.   ಸಾರ್ವಜನಿಕರಿಗೆ ಬಂಧುಮಿತ್ರರ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ ಸಂತ್ರಸ್ತರನ್ನು ಪತ್ತೆಹಚ್ಚಲು ಕ್ರಮ ವಹಿಸಲಾಗಿದೆ ಎಂದರು. ದೆಹಲಿಯಲ್ಲಿರುವ ಕರ್ನಾಟಕದ ಆಯುಕ್ತರು ನೋಡಲ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.