ʼಸುರ್ಜೇವಾಲ ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿʼ-ಬೊಮ್ಮಾಯಿ


COMMERCIAL BREAK
SCROLL TO CONTINUE READING

ಬೆಂಗಳೂರು :  ಕಾಂಗ್ರೆಸ್ಸಿನ ರಣದೀಪ್ ಸುರ್ಜೇವಾಲ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ. ಅವರು ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ ಆಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ನೇತೃತ್ವದ ಸರ್ಕಾರ ನರಕ  ಸೃಷ್ಟಿಯಾಗಿದೆ ಎಂದಿರುವ ಸುರ್ಜೇವಾಲಾ ಅವರ ಹೇಳಿಕೆಗೆ ಮಾಧ್ಯಮದವರೊಂದಿಗೆ   ಮಾತನಾಡಿದ ಸಿಎಮ್‌ ಬೊಮ್ಮಾಯಿ,ನೇತೃತ್ವದ ಸರ್ಕಾರ ನರಕ  ಸೃಷ್ಟಿಯಾಗಿದೆ ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದಲೇ ಅವರನ್ನು ಮನೆ ಜನ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಿದು. ಜನರಿಗೆ ತಮ್ಮ, ನಮ್ಮ ವೈಫಲ್ಯಗಳನ್ನು ತೋರಿಸುವ ಬದಲು ಈ ರೀತಿಯ ಮಾತುಗಳು ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.


ಅಸುರರ ದೊಡ್ಡ ಪಟ್ಟಿ ಮಾತಿಗೂ  ಪ್ರತಿಕ್ರಿಯೆ


ಯಾರು ಅಸುರರು, ಯಾರು ದೇವತೆಗಳು ಎಂದು ಗೊತ್ತಿದೆ. 70 ವರ್ಷ ಆಡಳಿತ  ಮಾಡಿರುವ ಕಾಂಗ್ರೆಸ್ ನ್ನು ಕಿತ್ತೊಗೆದು ಅಸುರರು ಯಾರೆಂದು ತೋರಿಸಿದ್ದಾರೆ.  ಕಾಂಗ್ರೆಸ್ ನಲ್ಲಿರುವ ಅಸುರರ ದೊಡ್ಡ ಪಟ್ಟಿಯೇ ಇದೆ 


ಇದನ್ನೂ ಓದಿ: ಬಿಜೆಪಿ ಶಾಸಕನ ಕೊಲೆಗೆ ಸುಪಾರಿ : ವೈರಲ್‌ ಆಡಿಯೋ ಹಿಂದಿದೆಯಂತೆ ಮೂರನೇ ವ್ಯಕ್ತಿ ಕೈ..!


ʼಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆʼ


ನಕಲು ಮಾಡುವಾಗ ಬುದ್ದಿ ಇರಬೇಕೆಂದಿರುವ ಹೇಳಿಕೆಗೆ ಉತ್ತರಿಸಿ  ಅವರಿಗೂ ನಮಗೂ  ಬಹಳ ವ್ಯತ್ಯಾವಿದೆ. ಅವರು ಚುನಾವಣೆಗಾಗಿ ಆಕಾಶವನ್ನು ತೋರಿಸಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ.ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದರು.


ಅನುಷ್ಠಾನ ಸಮಿತಿ ರಚನೆ
ಕಳೆದ ಬಾರಿ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ  ಬಹುತೇಕ ಶೇ 90 ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ ಅನುಷ್ಠಾನ ಮಾಡಲಾಗುವುದು ಎಂದರು.


ʼಕಾಂಗ್ರೆಸ್ಸಿನವರ ಕಿವಿಗಳ ಮೇಲೆ ಶಾಶ್ವತವಾಗಿ ಹೂವಿರಲಿದೆʼ


ವಿರೋಧ ಪಕ್ಷದವರು ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನ ಆರಂಭಿಸಿರುವ ಬಗ್ಗೆ ಉತ್ತರಿಸಿ ಇಷ್ಟು ದಿನ ಜನರಿಗೆ ಅವರು ಕಿವಿ ಮೇಲೆ ಹೂವಿಟ್ಟಿದ್ದು, ಇನ್ನು ಮುಂದೆ ಜನ ನಿಮಗೆ ಕಿವಿ ಮೇಲೆ ಹೂವಿಡುತ್ತಾರೆ ಎಂದು ವಿಧಾನಸಭೆಯಲ್ಲಿಯೇ ಉತ್ತರಿಸಿದ್ದೇನೆ.  ಶಾಶ್ವತವಾಗಿ ಅವರ ಕಿವಿಗಳ ಮೇಲೆ ಹೂವಿರಲಿದೆ. ಚುನಾವಣೆಯಾದ ನಂತರ ಅವರ ಕಿವಿ ಮೇಲೆ ಹೂವಿರಲಿದೆ .


ಇದನ್ನೂ ಓದಿ: Bengaluru Police : ಸೈಕಲ್ ಕಳ್ಳತನವಾಗಿದೆ ಎಂದು ದೂರು ಕೊಡಲು ಹೋದ ವ್ಯಕ್ತಿ ನೋಡಿ ನಕ್ಕರಂತೆ ಪೊಲೀಸರು!


ಬಣ್ಣ ಬದಲಾಯಿಸುವ ವ್ಯಕ್ತಿ
ವಿರೋಧ ಪಕ್ಷದವರು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸಬುಹುದು ಎಂದಿರುವ ಬಿಹಾರದ ಮುಖ್ಯಮಂತ್ರಿಗಳ ಹೇಳಿಕೆಗೆ  ಉತ್ತರಿಸಿ ನಿತೇಶ್ ಕುಮಾರ್ ಅವರು ಎಷ್ಟು ಬಾರಿ ಬಣ್ಣ ಬದಲಾಯಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಬಣ್ಣ ಬದಲಾಯಿಸುವ ವ್ಯಕ್ತಿಯ ಮಾತಿಗೆ ಏನು ಉತ್ತರ ನೀಡಲು ಸಾಧ್ಯ ಎಂದರು.


ʼಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯʼ 
ಮಾಧ್ಯಮ ಅಕಾಡೆಮಿಯಿಂದ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಅನ್ಯಾಯವಾಗುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಅಕಾಡೆಮಿಗೆ ನಾಮಕರಣವಾಗುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಕ್ರಮ ವಹಿಸಲಾಗುವುದು  ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.